ಕೃಷಿ ಭಾರತದ ಆರ್ಥಿಕತೆಯ ಮೂಲ: ಆರ್‌.ಎಸ್‌.ಪಾಟೀಲ

Agriculture Origins of Indian Economy: RS Patil

ಕೃಷಿ ಭಾರತದ ಆರ್ಥಿಕತೆಯ ಮೂಲ: ಆರ್‌.ಎಸ್‌.ಪಾಟೀಲ  

ತಾಳಿಕೋಟಿ, 01; ಭಾರತ ಕೃಷಿ ಪ್ರಧಾನ ದೇಶವಾಗಿದೆ, ನಮ್ಮ ದೇಶದ ಪ್ರಮುಖ ಆರ್ಥಿಕತೆಯ ಮೂಲ ಕೃಷಿಯಾಗಿದೆ ದೇಶಕ್ಕೆ ಅನ್ನ ನೀಡುವ ಅನ್ನದಾತ ರೈತನಾಗಿದ್ದಾನೆ ಕೃಷಿ ನಮ್ಮ ಸಂಸ್ಕೃತಿ ಪರಂಪರೆಯ ಪ್ರತೀಕವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ ಹೇಳಿದರು.     ತಾಲೂಕಿನ ನಾವದಗಿ ಬ್ರಹನ್ಮಠದ ಪರಮ ಪೂಜ್ಯಶ್ರೀ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರ ಗುರು ಪಟ್ಟಾಧಿಕಾರ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ರೈತ ಗೋಷ್ಠಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. ಜೇವರ್ಗಿ ಕೃಷಿ ಪಂಡಿತ ಸಿದ್ದಶರಣರು ಮಾತನಾಡಿ ಇವತ್ತು ನಮ್ಮ ರೈತರು ಸಂಕಷ್ಟದಲ್ಲಿದ್ದಾರೆ ಅವರು ಹಲವಾರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಅವರು ಬೆಳೆದ ಬೆಳಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಇದರ ಕುರಿತು ನಮ್ಮ ಸರ್ಕಾರಗಳು ಚಿಂತಿಸುವ ಅಗತ್ಯವಿದೆ ಎಂದರು.     ತಮದಡ್ಡಿ ಗ್ರಾಮದ ಪ್ರಗತಿಪರ ರೈತ ಬಸನಗೌಡ ಕನಕರೆಡ್ಡಿ ಅವರು ತಾವು ತಮ್ಮ ಜಮೀನೀನ ಎರಡು ಎಕರೆ ದಲ್ಲಿ ಸುಮಾರು 75 ಚೀಲ ಸಜ್ಜೆ ಬೆಳೆದ ಕುರಿತು ವಿವರಿಸಿ, ಕೃಷಿ ಲಾಭದಾಯಕ ಉದ್ಯೋಗವಾಗಿದೆ ಇದರ ಮಹತ್ವವನ್ನು ತಿಳಿದುಕೊಳ್ಳುವ ಅಗತ್ಯ ಇದೆ ಎಂದರು. ಗೋಷ್ಠಿಯ ಸಾನಿಧ್ಯ ವಹಿಸಿದ ಶಿರಶ್ಯಾಡ ಹಿರೇಮಠದ ಪೂಜ್ಯ ಶ್ರೀ ಅಭಿನವ ಮುರುಗೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಗೋಷ್ಠಿಯಲ್ಲಿ ಮಾತನಾಡಿದರು.    ಸಮಾರಂಭದ ಸಮ್ಮುಖವನ್ನು ಪೂಜ್ಯರಾದ ಶ್ರೀ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು ಹಾಗೂ ಜಡಿಸಿದ್ದೇಶ್ವರ ಶಿವಾಚಾರ್ಯರು ವಹಿಸಿದ್ದರು.ಈ ಸಮಯದಲ್ಲಿ ನಾವದಗಿ ಗ್ರಾಮದ ಗಣ್ಯರು ಹಿರಿಯರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು. ಡಾ. ಸೋಮಶೇಖರಯ್ಯ ಹಿರೇಮಠ ಸ್ವಾಗತಿಸಿದರು. ಸಾಹಿತಿ ಬಸವರಾಜ ಗೊರಜಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.