ಹಾವೇರಿ, ಮಾ.30, ಕಳೆದ ಕೆಲವು ದಿನಗಳಿಂದ ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಜಾಗೃತಿಗೆ ಮುಂದಾಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್, ಇಂದು ಬೆಳ್ಳಂಬೆಳಿಗ್ಗೆ ಹಿರೇಕೆರೂರು ನಗರದತ್ತ ಬೆಳ್ಳಂಬೆಳಿಗ್ಗೆ ಪ್ರದಕ್ಷಿಣೆ ಹಾಕಿದರು. ಪುತ್ರಿ ಹಾಗೂ ನಟಿ ಸೃಷ್ಟಿ ಪಾಟೀಲ್ ಜೊತೆಗೂಡಿ ಚೌಡೇಶ್ವರಿನಗರ, ಬಸವೇಶ್ವರ ನಗರ, ಕೋಟೆ, ಹಿರೇಕೆರೂರು ಮುಖ್ಯರಸ್ತೆ ಸೇರಿದಂತೆ ಹಲವೆಡೆ ಸಂಚರಿಸಿ ಜನರಲ್ಲಿ ಸಾಮಾಜಿಕ ಅಂತರ ಹೇಗಿದೆ? ಎಂಬುದನ್ನು ಪರಿಶೀಲಿಸಿದರು. ಅಲ್ಲದೇ ಲಾಕ್ ಡೌನ್‌ಗೆ ಸಹಕರಿಸುವುದು ಎಲ್ಲರ ಆದ್ಯತೆ ಆಗಬೇಕು. ಸಾಮಾಜಿಕ ಅಂತರದ ಜೊತೆ ಮಾನವೀಯ ಮೌಲ್ಯವೂ ಇರಲಿ ಎಂದು ಕರೆ ನೀಡಿದರು. ರಸ್ತೆಯಲ್ಲಿ ಓಡಾಡುತ್ತಿದ್ದ ಜನರಿಗೆ ಸಾಮಾಜಿಕ ಅಂತರ ಹಾಗೂ ಕೊರೊನಾ ಮಹಾಮಾರಿ ಕುರಿತು ಜಾಗೃತಿ ಮೂಡಿಸಿದರು.