ಕೃಷಿ ಇಲಾಖೆಯ ಕಾರ್ಯದಶರ್ಿ ರಾಜೇಂದರ್ ಭೇಟಿ ಪರಿಶೀಲನೆ

ಬಾಗಲಕೋಟೆ: ಕೃಷಿ ಇಲಾಖೆಯ ಸರಕಾರ ಕಾರ್ಯದಶರ್ಿ ರಾಜೇಂದರ್ಕುಮಾರ ಕಟಾರಿಯಾ ಅವರು ಮಂಗಳವಾರ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹುನಗುಂದ ತಾಲೂಕಿನ ಮಹತ್ವದ ಯೋಜನೆಯಾದ ರಾಮಥಾಳ ಮರೋಳ ಏತ ನೀರಾವರಿ ಯೋಜನೆ ಮರೋಳ ಗ್ರಾಮದ ಪಂಪ್ಹೌಸ್ ನಂ.1 ಘಟಕ್ಕೆ ಭೇಟಿ ನೀಡಿ ನೆಟಾಪಿಮ್ ಮತ್ತು ಜೈನ್ ಸಂಸ್ಥೆಯ ಪ್ರತಿನಿಧಿಗಳಿಂದ ಯೋಜನೆಯ ಮಾಹಿತಿಯನ್ನು ಪಡೆದುಕೊಂಡರು. ಸೂಳೆಭಾವಿ ಗ್ರಾಮದ ಹುನಗುಂದ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಗೆ ಭೇಟಿ ನೀಡಿ ಪರಿಶೀಲಿಸಿದರು.

ನಗರದ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಅಧಿಕಾರಿಗಳೊಂದಿಗೆ ಸರಕಾರದ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದರು. ರೈತರ ಆದಾಯ ದುಪ್ಪಟ್ಟು ಮಾಡುವ ನಿಟ್ಟಿನಲ್ಲಿ ಪ್ರತಿ ಹೋಬಳಿಯ ರೈತ ಸಂಪರ್ಕ ಕೇಂದ್ರ ಮಟ್ಟದಲ್ಲಿ ತಿಂಗಳಿನಲ್ಲಿ ಎರಡು ಬಾರಿ ಬೇಸಾಯ ಸಂಬಂಧಿತ ಎಲ್ಲ ಇಲಾಖೆಗಳು, ಬ್ಯಾಂಕ್ ಪ್ರತಿನಿಧಿಗಳು ಹಾಗೂ ಕೃಷಿ ವಿಜ್ಞಾನಿಗಳು ರೈತರೊಂದಿಗೆ ಚಚರ್ೆ ನಡೆಸಿ ಸೂಕ್ತ ಪರಿಹಾರ ನೀಡಲು ತಿಳಿಸಿದರು. ಈ ನಿಟ್ಟಿನಲ್ಲಿ ಸರಕಾರದಿಂದ ಸೂಕ್ತ ಆದೇಶ ಕೂಡಾ ಬರಲಿದೆ ಎಂದು ತಿಳಿಸಿದರು.

ನವನಗರದ ಪ್ಯೂಚರ್ ಗ್ರೀನ್ಸ್ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ಚಟುವಟಿಕೆಯಲ್ಲಿ  ನಿರತರಾದ ಮಹಿಳಾ ಸ್ವಸಹಾಯ ಸಂಘದವರಿಗೆ ಸಲಹೆಗಳನ್ನು ನೀಡಿದರು. 

 ನಂತರ ಮುಧೋಳ ತಾಲೂಕಿನ ಲೋಕಾಪೂರ ಹೋಬಳಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಬೆಳೆ ಸಮೀಕ್ಷೆ ಪ್ರಕ್ರಿಯೆ ಹಾಗೂ ಕೃಷಿ ಹೊಂಡಗಳ ವೀಕ್ಷಣೆ ಮಾಡಿದರು. 

ಭೇಟಿ ಸಂದರ್ಭದಲ್ಲಿ ಜಿಲ್ಲಾ ಜಂಟಿ ಕೃಷಿ ನಿದರ್ೇಶಕರಾದ ರಾಜಶೇಖರ ಬಿಜಾಪೂರ, ತೋಟಗಾರಿಕಾ ಉಪನಿದರ್ೇಶಕ ಪ್ರಭುರಾಜ ಹಿರೇಮಠ, ಉಪ ಕೃಷಿ ನಿದರ್ೇಶಕರಾದ ಎಸ್.ಬಿ.ಕೊಂಗವಾಡ ಮತ್ತು ಎಲ್.ಐ.ರೂಢಗಿ ಸೇರಿದಂತೆ ತಾಲೂಕಾ ಅಧಿಕಾರಿಗಳು ಇದ್ದರು.

ನೈಜ ಸಂತ್ರಸ್ತರನ್ನು ಕೈಬಿಟ್ಟರೆ ತಹಶೀಲ್ದಾರರೇ ಹೊಣೆ: ಕಾರಜೋಳ