ನವದೆಹಲಿ 17: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನ ಹಿನ್ನೆಲೆಯಲ್ಲಿ ಅಂತಿಮ ದರ್ಶನ ಪಡೆಯಲು ಬಂದಿದ್ದ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ ಉದ್ರಿಕ್ತರ ಗುಂಪು ಹಲ್ಲೆ ಮಾಡಿದೆ.
ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಮಾಗರ್್ ನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ದರ್ಶನಕ್ಕೆ ಅಣಿ ಮಾಡಲಾಗಿತ್ತು. ಈ ವೇಳೆ ಸ್ವಾಮಿ ಅಗ್ನಿವೇಶ್ ಅವರು ಅಂತಿಮ ದರ್ಶನ ಪಡೆಯಲು ಬಂದಿದ್ದರು. ಈ ವೇಳೆ ಉದ್ರಿಕ್ತರ ಗುಂಪು ಹಲ್ಲೆ ಮಾಡಿದೆ.
ಅಂತಿಮ ದರ್ಶನ ಪಡೆಯಲು ತೀವ್ರ ವಿರೋಧ ಹಾಗೂ ಹಲ್ಲೆ ಮಾಡಿದ್ದರಿಂದ ಅಗ್ನಿವೇಶ್ ಅವರು ಅಟಲ್ ಜೀ ಅವರ ಅಂತಿಮ ದರ್ಶನ ಪಡೆಯದೇ ವಾಪಸ್ಸಾಗಿದ್ದಾರೆ.
ಕಳೆದ ತಿಂಗಳು ಜಾರ್ಖಂಡ್ ನ ಪಕೂರ್ ಜಿಲ್ಲೆಯಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿ ನಿರ್ಗಮಿಸುವಾಗ ಸ್ವಾಮಿ ಅಗ್ನಿವೇಶ್ ಮೇಲೆ ಭಾರತೀಯ ಜನತಾ ಯುವ ಮೋಚರ್ಾ(ಬಿಜೆವೈಎಂ)ಕಾರ್ಯಕರ್ತರು ಹಲ್ಲೆ ನಡೆಸಿದ್ದರು.