ಕೃಷಿ ಭೂಮಿಗೆ ಕೈ ಹಾಕಿದರೆ ಉಗ್ರ ಹೋರಾಟ - ಸಂಗಮೇಶ ಸಗರ ಆಗ್ರಹ
ವಿಜಯಪುರ 01 : ತಿಡಗುಂದಿ ಸಮೀಪ 1203 ಎಕರೆರೈತರ ಫಲವತ್ತಾದ ಕೃಷಿಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಬಳಸುವುದನ್ನು ಸಂಪೂರ್ಣವಾಗಿ ವಿರೋಧಿಸಿ, ಆ ಯೋಜನೆಯನ್ನು ಇಲ್ಲಿಗೆ ಕೈ ಬೀಡಬೇಕು ಇಲ್ಲವಾದಲ್ಲಿ 350 ಕುಟುಂಬದ ಸದಸ್ಯರೊಡನೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಆಗ್ರಹಿಸಿ ನಗರದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ ವೃತ್‌ದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ವಿವಿಧ ಘೋಷಣೆಗಳನ್ನು ಕೂಗುತ್ತಾ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಕೈಗಾರಿಕಾ ಸಚಿವರಾದ ಎಂ.ಬಿ ಪಾಟೀಲರಿಗೆ, ಮುಖ್ಯಮಂತ್ರಿಗಳಿಗೆ, ರಾಜ್ಯಪಾಲರಿಗೆ, ಹಾಗೂ ಕೈಗಾರಿಕಾ ಇಲಾಖೆಯ ಸರ್ಕಾರದ ಅಧಿನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರಅವರು ಮಾತನಾಡುತ್ತಾ ವಿಜಯಪುರ ಜಿಲ್ಲೆಯ ನಾಗಠಾಣ ಹೋಬಳಿಯ ತಿಡಗುಂದಿ ವ್ಯಾಪ್ತಿಯ ಒಟ್ಟು 1203 ಎಕರೆರೈತರ ಫಲವತ್ತಾದ ಕಪ್ಪ ಮಣ್ಣಿನ ಎರಿ ಜಮೀನುಗಳಲ್ಲಿ ಕೈಗಾರಿಕಾ ಪ್ರದೇಶಕ್ಕೆ ಬಳಸಿಕೊಳ್ಳಲು ತಯಾರಿ ನಡೆದಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಭಾಗದಯಾವ ರೈತರು ಕೂಡಾ ಈ ಬೆಲೆಬಾಳುವ ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳಲು ತಯಾರಿಲ್ಲ.ಕೂಡಲೇ ಈ ಯೋಜನೆಯನ್ನು ಇಲ್ಲಿಗೆ ಕೈ ಬೀಡಬೇಕು ಅಥವಾ ಬೇರೆಡೆಗೆ ಕೃಷಿಗೆ ಯೋಗ್ಯವಿರದ ಭೂಮಿಯಲ್ಲಿ ಮುಂದುವರೆಸಬಹುದು, ಒಂದು ವೇಳೆ ಈ ಯೋಜನೆಯನ್ನು ತಿಡಗುಂದಿಯಲ್ಲಿ ಮುಂದುವರೆಸಿದ್ದೆ ಆದರೆ 1203 ಎಕರೆಯ ಸುಮಾರು 350 ಕುಟುಂಬಗಳು ಬೀದಿಗೆ ಬೀಳಲಿವೆ. ಈ ಕುರಿತು ಜಿಲ್ಲೆಯಾಧ್ಯಂತ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದಗೀರೀಶ ತಾಳಿಕೋಟಿ ಮಾತನಾಡುತ್ತಾ ಎಂ.ಬಿ ಪಾಟೀಲರೇ ನಮ್ಮ ಭಾಗಕ್ಕೆ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಪದವಿದರಾದ ನಾವೂಗಳು ಬೇರೆಕಡೆ ಕೆಲಸ ಮಾಡುವುದು ಬೇಡ ನಮ್ಮ ಜಮೀನಿನಲ್ಲಿಯೇದುಡಿದು ಮಾಲಿಕರಾಗಿ ಇರೋಣ ಎನ್ನುವ ಆಸೆಯಿಂದ ನಮ್ಮ ಸ್ವಗ್ರಾಮಕ್ಕೆ ಬಂದು ವ್ಯವಸಾಯ ಮಾಡಿಕೊಂಡು ಸಂತೋಷದಿಂದ ಇದ್ದೇವೆ, ಆದರೆ ಈಗ ಏಕಾಎಕಿ ಕೈಗಾರಿಕೆಗಾಗಿ ಒಳ್ಳೆಯ ಜಂಇನನ್ನು ಬಳಸಿಕೊಳ್ಳುವುದು ಯಾವ ನ್ಯಾಯ, ನಾವ್ಯಾರೂ ನಮ್ಮ ಭೂಮಿಯನ್ನು ಮಾರಿಕೊಳ್ಳಲ್ಲು ತಯಾರಿಲ್ಲಎಂದರು.
ಹಿರಿಯರಾದ ಅಶೋಕ ಪಾಟೀಲ ಹಾಗೂ ಸಿದ್ದರಾಮ ತಿಲ್ಯಾಳ ಮಾತನಾಡುತ್ತಾ ಜಿಲ್ಲೆಯಲ್ಲಿ ಈ ಮುಂಚೆ ಬೇರೆ ಬೇರೆ ಉದ್ದೇಶಕ್ಕಾಗಿ ನಿಗದಿ ಮಾಡಿರುವ ಭೂಮಿಯನ್ನು ಸಂಪೂರ್ಣವಾಗಿ ಬಳಸಿಕೊಂಡು ನಂತರದಲ್ಲಿ ಹೊಸ ಹೊಸ ಯೋಜನೆಗಳಿಗೆ ಕೈಹಾಕಿದರೆ ಚನ್ನಾಗಿರುತ್ತದೆ.10 ವರ್ಷ ಕಳೆದರು ಮುಳವಾಡದ 3500 ಎಕರೆ ಕೈಗಾರಿಕಾ ಪ್ರದೇಶಇನ್ನು ಖಾಲಿ ಖಾಲಿ ಬಿದ್ದಿದೆ, ರೈತರಿಗೆ ಕೊಡ ಬೇಕಾಗಿರುವ ಪರಿಹಾರದ ಹಣಕೂಡಾ ಇನ್ನು ಬಂದಿರುವುದಿಲ್ಲ ಎಂದು ನಿತ್ಯರೈತರ ಗೋಳಾಟವಾಗಿದೆ.ಮೊದಲು ಅಲ್ಲಿ ರೈತರಿಗೆ ಬರಬೇಕಾದ ಪರಿಹಾರಕೊಡಿ.
ಈ ವೇಳೆ ಭೂಮಿ ಕಳೆದುಕೊಳ್ಳಬೇಕಾದ ಅನೇಕರು ಮಾತನಾಡುತ್ತಾ ದಯವಿಟ್ಟು ಜಿಲ್ಲೆಯಲ್ಲಿಯ ಕೃಷಿಗೆ ಯೋಗ್ಯ ವಿರುವ ಯಾವ ಭೂಮಿಯನ್ನು ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳಬೇಡಿ ಪಾಳುಬಿದ್ದಿರುವ ಗುಡ್ಡ ಗಾಡು ಪ್ರದೇಶಗಳಲ್ಲಿ ನೀವೂ ಕೈಗಾರಿಕೆ ತೆಗೆದುಕೊಂಡು ಬನ್ನಿ ನಮ್ಮದೇನು ಅಭ್ಯಂತರ ಇಲ್ಲ ಎಂದು ಪಟ್ಟು ಹಿಡಿದು ನಮ್ಮ ಜೀವ ಹೋದರು ಕೃಷಿ ಭೂಮಿ ಬೀಡುವುದಿಲ್ಲ ಎಂದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಪಾಟೀಲ, ತಾಲೂಕಾ ಅಧ್ಯಕ್ಷರಾದ ಮಹಾದೇವಪ್ಪತೇಲಿ, ಸಂಗಪ್ಪಟಕ್ಕೆ, ಜಕರಾಯ ಪೂಜಾರಿ, ಮುಖಂಡರಾದ ಭೀರ್ಪ ಬಿಜ್ಜರಗಿ, ಅಶೋಕಗೌಡ ಬಿರಾದಾರ, ಮಡಿವಾಳ ತಿಲ್ಯಾಳ, ಗೋಪಾಲ ಭೋಸಲೆ, ಗೌಸಪಾಕ್ ವಾಲಿಕಾರ, ಅಶೋಕ ಪಾಟೀಲ, ಚನ್ನಪ್ಪಗೋಟೆ, ಗೌಡಪ್ಪ ಬಿರಾದಾರ, ಶ್ರೀಶೈಲ ನಾವಿ, ಮಹೇಶ ನಾಟಿಕಾರ, ಚಿದಾನಂದ ಕಟ್ಟಿಮನಿ, ಅಂಜನಾ ತಿಲ್ಯಾಳ, ನೀಲವ್ವ ಬಿಜ್ಜರಗಿ, ಪ್ರದೀಪ ಚಲವಾದಿ, ಪರಶುರಾಮ ಹತ್ತಿ, ಮಲ್ಲಿಕಾರ್ಜುನಕಟ್ಟಿಮನಿ, ಶ್ರೀಶೈಲ ನಾವಿ, ಶಿವಪ್ಪ ಪೂಜಾರಿ, ನೀಲಮ್ಮಜಂಬಗಿ, ಶ್ರೀದೇವಿ ಹೂಗಾರ, ಶಾಂತಾದರ್ಗಾ, ನೀಲವ್ವ ಬಿಜಾಪುರ ಸೇರಿದಂತೆ ಸುಮಾರು 350 ಕುಟುಂಬ ಸದಸ್ಯರು ಹಾಗೂ ರೈತ ಸಂಘದ ಪದಾಧಿಕಾರಿಗಳು ಇದ್ದರು.
ಬಾಕ್ಸ ಸುದ್ದಿ
ಬೆಳಿಗ್ಗೆ ಸುಮಾರು 300 ಜನಕ್ಕಿಂತ ಅಧಿಕ ರೈತರು ಎಂ,ಬಿ ಪಾಟೀಲರ ಮನೆಗೆ ತೆರಳಿ ಮನವಿ ಸಲ್ಲಿಸಿ ಈ ಕೂಡಲೇ ಈ ಕಾಮಗಾರಿಯನ್ನು ಕೈ ಬೀಡಬೇಕು, ಇಲ್ಲವಾದಲ್ಲಿ 350 ಕುಟುಂಬದ ಸದಸ್ಯರು ನಿಮ್ಮ ಮನೆಯ ಮುಂದೆಉಗ್ರವಾದ ಹೋರಾಟ ಮಾಡಬೇಕಾಗುವುದು ಎಂದು ಎಚ್ಚರಿರಿಸದರು. ರೈತತಾಯಂದಿರು ಕೂಡಾತಮ್ಮ ಅಳಲನ್ನು ತೊಡಿಕೊಂಡು ನಮ್ಮ ಭೂಮಿ ನಮಗೆ ಬಿಡಿ ಸಾಕೆಂದರು.
ಮನವಿ ಸ್ವೀಕರಿಸಿದ ಸಚಿವರು ಇದನ್ನು ಪರೀಶಿಲಿಸುತ್ತೆನೆ ಯಾವ ರೈಥರಿಗೂ ಅನ್ಯಾಯವಾಗದಂತೆ ಕ್ರಮ ಜರುಗಿಸುತ್ತೆನೆ ಎಂದರು.