ಹಂಪಿ ಉತ್ಸವದಲ್ಲಿ ತನ್ನ ಅದ್ಭುತ ಪ್ರತಿಭೆ ಪ್ರದರ್ಶಿಸಲು ಮುಂದಾದ ಅಗಸ್ತ್ಯ ಅರಿಕೇರಿ

Agastya Arikeri is ready to showcase his amazing talent at the Hampi festival

ಹಂಪಿ ಉತ್ಸವದಲ್ಲಿ ತನ್ನ ಅದ್ಭುತ ಪ್ರತಿಭೆ ಪ್ರದರ್ಶಿಸಲು ಮುಂದಾದ ಅಗಸ್ತ್ಯ ಅರಿಕೇರಿ

ಕೊಪ್ಪಳ 25: ತನ್ನ ಕಲೆಯ ಮೂಲಕ ಮನೆಮಾತಾದ ಅಗಸ್ತ್ಯನಿಗೆ ಆನೆಗೊಂದಿ ಉತ್ಸವ, ಅಂಜನಾದ್ರಿ ಉತ್ಸವ, ಇಟಗಿ  ಉತ್ಸವ,ಕೊಪ್ಪಳ ಜಿಲ್ಲಾ ಉತ್ಸವ, ಹೀಗೆ ಹಲವಾರು ಕಾರ್ಯಕ್ರಮ ನೀಡುತ್ತಾ ಬಂದಿರುವ ಅಗಸ್ತ್ಯನಿಗೆ ಹಂಪಿ ಉತ್ಸವದ ವೇದಿಕೆ ದೊರೆತಿದೆ  ಈ ಜಗತ್ತಿನಲ್ಲಿ ಪ್ರತಿಯೊಬ್ಬರದು ಒಂದೊಂದು ಕನಸು ಅದನ್ನು ನನಸಾಗಿಸಲು ಪ್ರತಿಯೊಬ್ಬರು ತಮ್ಮ ಪ್ರಯತ್ನ ಎಂಬ ಪಲಿತಾಂಶದ ಮೇಲೆ ಚಲಿಸ್ತಾ ಇರುತ್ತಾರೆ ಆ ಸಾಲಿನಲ್ಲಿ ಇಂದು ಕೊಪ್ಪಳದ ಖ್ಯಾತಿ ಕರಾಟೆ ಪಟು ರಾಘವೇಂದ್ರ ಅರಕೇರಿ ಅವರ ಸತತ ಪ್ರಯತ್ನ ಇಂದು ಜಗತ್ತೇ ಎದುರು ನೋಡುವ ದೃಷ್ಟಿಯಲ್ಲಿ ತಮ್ಮ ಮಗ ಅಗಸ್ತ್ಯನನ್ನು ಬೆಳೆಸಿದ್ದಾರೆ. 

 ಅವರ 25 ವರ್ಷ ಸೇವೆಯಲ್ಲಿ ಕರಾಟೆ ಡ್ಯಾನ್ಸ್‌ ಸ್ಕೇಟಿಂಗ್ ಯೋಗ ಆಕ್ಟಿಂಗ್ ಹೀಗೆ ಹಲವಾರು ರಂಗದಲ್ಲಿ ಹಲವಾರು ವಿದ್ಯಾರ್ಥಿಗಳ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಆದರೆ ಎಲ್ಲಾ ಕಲೆಯಲ್ಲೂ ಒಬ್ಬನನ್ನು ಗುರುತಿಸುವುದು ಕಷ್ಟ ಅಂತ ಕಷ್ಟದ ಕೆಲಸವನ್ನು ತುಂಬಾ ಇಷ್ಟಪಟ್ಟು ತಮ್ಮ ಮಗನನ್ನು ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ ಇಂದಿನ ಕಾಲದಲ್ಲಿ ಎಲ್ಲಾ ತಂದೆ ತಾಯಂದಿರು ಮಕ್ಕಳನ್ನು ಡಾಕ್ಟರ್, ಲಾಯರ್ ,ಇಂಜಿನಿಯರ್ ಹೀಗೆ ಹತ್ತು ಹಲವಾರು ಕನಸನ್ನು ಹೊತ್ತು ಇರುತ್ತಾರೆ ಆದರೆ ಅದಕ್ಕೆ ತದ್ವಿರುದ್ಧ ಎಂಬಂತೆ ಈ ಒಬ್ಬ ತಂದೆ ಮಾತ್ರ ಅಗಸ್ತ್ಯ ಅರಕೇರಿ  ಅಂಬಿಗಾಲು ಇಡುತ್ತಿದ್ದಂತೆ ದೊಡ್ಡದೊಂದು ಕನಸು ಕಟ್ಟಿಕೊಂಡು ಮಗನನ್ನು ಕೇವಲ ಕೊಪ್ಪಳಕ್ಕಾಗಲಿ ಅಥವಾ ಕರ್ನಾಟಕಕ್ಕಾಗಲಿ ಪರಿಚಯಿಸಬೇಕು ಎಂಬ ಹಂಬಲ ಹೊತ್ತು ಬಂದವರಲ್ಲ ಜಗತ್ತಿಗೆ ಪರಿಚಯಿಸಬೇಕು ಎಂದು ಬಂದವರು. 

 ಅಗಸ್ತ್ಯನಿಗೆ ಒಂದು ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಕಲೆಯ ಲೋಕಕ್ಕೆ ಪರಿಚಯಿಸಿದ ರಾಘವೇಂದ್ರ ಅರಿಕೇರಿ ಅವರು ಕರಾಟೆ ,ಡ್ಯಾನ್ಸ್‌ ,ಸ್ಕೇಟಿಂಗ್, ಯೋಗ , ಸ್ವಿಮಿಂಗ್, ಆಕ್ಟಿಂಗ್ ಎನ್ನುವ ಲೋಕವನ್ನೇ ಪರಿಚಯಿಸುತ್ತ ಬಂದರು .ಅದರಲ್ಲಿ ಪರಿಣಿತಿ ಹೊಂದಿದ ಅಗಸ್ತ್ಯ ಇಂದು ಕರಾಟೆ ರಂಗದಲ್ಲಿ ಮೂರು ಬಾರಿ ರಾಷ್ಟ್ರೀಯ ಸ್ಪರ್ಧೆಯಲ್ಲಿ ವಿಜಯಪತಾಕೆ ಬಾರಿಸಿ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಆಯ್ಕೆಯಾಗಿ ಅಲ್ಲಿಯೂ ಸಹ ಪ್ರಥಮ ಸ್ಥಾನ ಪಡೆದ ಪೋರ ಹಾಗೂ ಕರಾಟೆ ರಂಗದಲ್ಲಿ ನೊಬೆಲ್ ವರ್ಡ್‌ ರೆಕಾರ್ಡ್‌ ಹಂತಕ್ಕೆ ತಲುಪಿ ಯಶಸ್ವಿಯಾಗಿದ್ದಾನೆ. ಡ್ಯಾನ್ಸ್‌ ರಂಗದಲ್ಲಿ ಜಿಲ್ಲಾ ಮಟ್ಟದ ಉತ್ತಮ ಡ್ಯಾನ್ಸರ್ ಸಾಲಿನಲ್ಲಿ ಗುರ್ತಿಸಿಕೊಂಡ ಅಗಸ್ತ್ಯ ಯಾವುದೇ ಡಾನ್ಸ್‌ ಸ್ಪರ್ಧೆಯಲ್ಲಿ ಭಾಗಿಯಾದರೆ ಸಾಕು ಅಲ್ಲಿ ತನ್ನ ಪ್ರತಿಭೆಯಿಂದ ಎಲ್ಲರನ್ನು ಆವರಿಸಿಕೊಳ್ಳುತ್ತಾನೆ ಅಗಸ್ತೆ ವೇದಿಕೆ ಮೇಲೆ ಬಂದರೆ ಸಾಕು ಯಾವ ಹೀರೋಗಿಂತ ಕಮ್ಮಿ ಇಲ್ಲ ಎಂಬಂತೆ ಅಗಸ್ತ್ಯನ ಅಭಿಮಾನಿಗಳ ಚಪ್ಪಾಳೆ ಶಿಳ್ಳೆಗಳ ಸೌಂಡ್ ಕೇಳಿ ಬರುತ್ತದೆ .ಸ್ಕೇಟಿಂಗ್ ರಂಗದಲ್ಲಿ ಪರಿಪೂರ್ಣತೆ ಹೊಂದಿದ ಅಗಸ್ತ್ಯ ಮುಂದಿನ ಸ್ಪರ್ಧೆಗೆ ಪೂರ್ವ ತಯಾರಿಯಲ್ಲಿ ತೊಡಗಿಕೊಂಡಿದ್ದಾನೆ . 

ಯೋಗ ರಂಗದಲ್ಲಿ ರಾಜ್ಯ ರಾಷ್ಟ್ರಮಟ್ಟದಲ್ಲಿ ವಿಜಯ ಸಾಧಿಸಿ ಇಂಟರ್ ನ್ಯಾಷನಲ್  ಯೋಗ ಬುಕ್ ಆಫ್ ರೆಕಾರ್ಡ್‌ ಹಂತಕ್ಕೆ ತಲುಪಿದ್ದಾನೆ. ಸ್ವಿಮಿಂಗ್ ಮೂರು ವರ್ಷ ವಯಸ್ಸಿನಲ್ಲೇ ಪರಿಪೂರ್ಣತೆ ಪಡೆಯುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೀರೋ ಪಟ್ಟ ಗಿಟ್ಟಿಸಿಕೊಂಡಿದ್ದಾನೆ. ಆಕ್ಟಿಂಗ್ ಫಸ್ಟ್‌ ಇಸ್ ಬೆಸ್ಟ್‌ ಎಂಬಂತೆ ಮೊದಲ ಸಾಧಕ ಕಿರುಚಿತ್ರಕ್ಕೆ ಬೆಸ್ಟ್‌ ಚೈಲ್ಡ್‌ ಆಕ್ಟರ್ ಪ್ರಶಸ್ತಿ ಪಡೆಯುವ ಮೂಲಕ ಸಿನಿ ರಂಗದಲ್ಲಿ ತನ್ನದೇ ಆದ ಕ್ರೇಜ್ ಹುಟ್ಟು ಹಾಕಿದ್ದಾನೆ . 

ಹೀಗೆ ಎಲ್ಲಾ ರಂಗದಲ್ಲಿ ತನ್ನನ್ನು ತಾನು ಗುರ್ತಿಸಿಕೊಂಡ ಅಗಸ್ತ್ಯನಿಗೆ ಆರು  ವರ್ಷ ವಯಸ್ಸಿನಲ್ಲೇ ಕರಾಟೆ ಹಾಗೂ  6  ಗಿನ್ನಿಸ್ ದಾಖಲೆ ನಿರ್ಮಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ  ಅನೇಕ ಸಾಧನೆಗಳನ್ನು ಮಾಡುತ್ತ ಜಗತ್ತೇ ಎದುರು ನೋಡುತ್ತಿರುವ ಯುವರತ್ನ ಎಂದು ಗುರುತಿಸಿಕೊಂಡಿದ್ದಾನೆ. ನನ್ನ ಪ್ರತಿಭೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ತಿಳಿಸಿದ ಪುಟ್ಟ ಪೋರ.