ಒಣಹೂಗಳಿಂದ ಅಗರಬತ್ತಿ ತಯಾರಿಕೆ!

ಜಮ್ಮು, ಡಿ 19 ಕಸದಿಂದ ರಸ ತೆಗೆಯಲು ಮುಂದಾಗಿರುವ ಜಮ್ಮು ಕಾಶ್ಮೀರದ ಸ್ಥಳೀಯ ಆಡಳಿತ ಬಳಸಿರುವ ಮತ್ತು ತ್ಯಾಜ್ಯ ಹೂವುಗಳನ್ನು ಬಳಸಿ ಅಗರಬತ್ತಿಯನ್ನಾಗಿ ಪರಿವರ್ತಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿವೆ. ಇದರಿಂದ ಇಲ್ಲಿನ ಜಲಮೂಲಗಳಲ್ಲಿ ಇಲ್ಲವೇ ಕಸದ ಬಟ್ಟಿಗಳಲ್ಲಿ ಒಣಗಿದ ಹಾಗು ವ್ಯರ್ಥ ಹೂಗಳು ಕಾಣಸಿಗುವುದಿಲ್ಲ. ಜೆಎಂಸಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳು ಒಟ್ಟಾಗಿ ಇಲ್ಲಿನ ಪೀರ್ಕೋ ಮತ್ತು ಬಾಹು ಕೋಟೆ ಪ್ರದೇಶಗಳಲ್ಲಿ ಎರಡು ಸಣ್ಣ ಪ್ರಮಾಣದ ಘಟಕಗಳನ್ನು ಸ್ಥಾಪಿಸಿದ್ದು, ಇವುಗಳನ್ನು ಹೂವುಗಳನ್ನು ಬಳಸಿಕೊಂಡು ಅಗರಬತ್ತಿ ತಯಾರಿಸುತ್ತಿವೆ.   ಇದು ಕೇವಲ ಪರಿಸರ ಸ್ವಚ್ಛತೆಯ ಜೊತೆಗೆ ಉದ್ಯೋಗಾವಕಾಶಗಳನ್ನೂ ಸೃಷ್ಟಿಸುತ್ತಿದೆ. ಸಾಮಾನ್ಯವಾಗಿ ಇಲ್ಲಿನ ಧಾರ್ಮಿಕ ಸ್ಥಳಗಳ ಹೊರಗೆ ಹೂವುಗಳು ಕಸದ ಬುಟ್ಟಿ ಇಲ್ಲವೇ ಕೆರೆ ಕಟ್ಟೆಗಳಲ್ಲಿ ದೊರೆಯುತ್ತಿತ್ತು. ಈಗ ಅದರ ಸದುಪಯೋಗವಾಗುತ್ತಿದೆ ಎಂದು ಕಾರ್ಮಿಕರು ಅಭಿಪ್ರಾಯಪಟ್ಟಿದ್ದಾರೆ. ಘಟಕಗಳಲ್ಲಿ ಸ್ಥಳೀಯ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದು, ಅವರು ಒಣಗಿದ ಹೂವುಗಳನ್ನು ತೊಳೆದು, ನಂತರ ಮತ್ತೆ ಒಣಗಿಸುತ್ತಾರೆ. ನಂತರ ಅವುಗಳನ್ನು ಪುಡಿ ಮಾಡಿ ಅಗರಬತ್ತಿ ತಯಾರಿಸುತ್ತಾರೆ ಎಂದು ಜೆಎಂಸಿ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.   ಇವುಗಳು ನೈಸರ್ಗಿಕ ಹೂವುಗಳಿಂದ ಮಾಡಲ್ಪಟ್ಟಿರುವುದರಿಂದ ಯಾವುದೇ ರಾಸಾಯನಿಕ ಅಂಶಗಳಿರುವುದಿಲ್ಲ. ಮುಂದಿನ ದಿನಗಳಲ್ಲಿ ಇತರೆಡೆ ಕೂಡ ಈ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಮೇಯರ್ ಚಾಂದರ್ ಮೋಹನ್ ಗುಪ್ತ ಹೇಳಿದ್ದಾರೆ.