‘ಮತ್ತೆ ಉದ್ಭವ’

ಬೆಂಗಳೂರು, ಫೆ 03 :     ವೈಟ್ ಪ್ಯಾಂಥರ್ಸ್ ಕ್ರಿಯೇಟರ್ಸ್ ಸಂಸ್ಥೆ ನಿರ್ಮಿಸಿರುವ, ಕೋಡ್ಲು ರಾಮಕೃಷ್ಣ ನಿರ್ದೇಶನದ ‘ಮತ್ತೆ ಉದ್ಭವ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  

    ವಿ ಮನೋಹರ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮೋಹನ್ ಕ್ಯಾಮರಾ ಕೈಚಳಕವಿದೆ  ಎಸ್ ಮೋಹನ್ ಸಂಭಾಷಣೆ ಬರೆದಿದ್ದಾರೆ   ವಸಂತ್‌ರಾವ್ ಕುಲಕರ್ಣಿ ಕಲಾನಿರ್ದೇಶನ ಹಾಗೂ ಅಪೇಕ್ಷ ಪುರೋಹಿತ್ ಅವರ ವಸ್ತ್ರ ವಿನ್ಯಾಸವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಗುರುಪ್ರಸಾದ್ ಮುದ್ರಾಡಿ

   ‘ಪ್ರೀಮಿಯರ್ ಪದ್ಮಿನಿ‘ ಖ್ಯಾತಿಯ ಪ್ರಮೋದ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಮಿಲನ ನಾಗರಾಜ್. ಅವಿನಾಶ್, ರಂಗಾಯಣ ರಘು, ಮೋಹನ್, ಸುಧಾ ಬೆಳವಾಡಿ, ಶುಭ ರಕ್ಷ, ಮಂಡ್ಯ ರವಿ, ಪಿ ಡಿ ಸತೀಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.