ಮತ್ತೆ 2 ಪ್ರಕರಣ ದೃಢ, ಸೋಂಕಿತರ ಸಂಖ್ಯೆ 53ಕ್ಕೆ ಏರಿಕೆ

ಬಾಗಲಕೋಟೆ 11: ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತೆ ಎರಡು ಹೊಸದಾಗಿ ಕೋವಿಡ್-19 ಪ್ರಕರಣಗಳು ದೃಡಪಟ್ಟಿದ್ದು, ಸೋಂಕಿತರ ಸಂಖ್ಯೆ 53ಕ್ಕೆ ಏರಿಕೆಯಾಗಿರುವುದಾಗಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಬನಹಟ್ಟಿಯ 20 ವರ್ಷದ ಯುವಕ ಪಿ-854 ಮತ್ತು ಢಾಣಕಶಿರೂರ ಗ್ರಾಮದ 28 ವರ್ಷದ ಪಿ-855 ವ್ಯಕ್ತಿಗಳಿಗೆ ಕೋವಿಡ್ ಸೋಂಕು ದೃಡಪಟ್ಟಿದೆ. ಪಿ-854 ವ್ಯಕ್ತಿಗೆ ಅಹಮದಾಬಾದ್, ಗುಜರಾತ್ಗೆ ಪ್ರಯಾಣ ಮಾಡಿರುವ ಹಿನ್ನಲೆಯ ಸೋಂಕು ದೃಡಪಟ್ಟರೆ, ಇನ್ನು ಪಿ-855 ವ್ಯಕ್ತಿಯು ಪಿ-688 ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ದೃಡಪಟ್ಟಿರುವುದಾಗಿ ತಿಳಿಸಿದ್ದಾರೆ.

ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 120 ಸ್ಯಾಂಪಲ್ಗಳ ಪೈಕಿ 118 ಸ್ಯಾಂಪಲ್ಗಳ ವರದಿ ನೆಗಟಿವ್ ಬಂದರೆ, ಉಳಿದ ಎರಡು ಸ್ಯಾಂಪಲ್ಗಳ ವರದಿಯಲ್ಲಿ ಪಾಜಿಟಿವ್ ದೃಡಪಟ್ಟಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 53 ಕೋವಿಡ್ ಪ್ರಕರಣ ದೃಡಪಟ್ಟಿದ್ದು, ಬಾಗಲಕೊಟೆ 15, ಬಾದಾಮಿ 17, ಮುಧೋಳ 9, ಜಮಖಂಡಿ 11 ಹಾಗೂ ಬನಹಟ್ಟಿಯಲ್ಲಿ 1 ಪ್ರಕರಣಗಳಿವೆ. ಜಿಲ್ಲೆಯಿಂದ ಮತ್ತೆ ಹೊಸದಾಗಿ 52 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರತ್ಯೇಕವಾಗಿ ಮನೆಯಲ್ಲಿಯೇ ನಿಗಾದಲ್ಲಿ ಇದ್ದವರು ಒಟ್ಟು 938 ಇದ್ದು, ಇನ್ಸಿಟ್ಯೂಶನ್ ಕ್ವಾರಂಟೈನ್ನಲ್ಲಿ 426 ಜನ ಇದ್ದಾರೆ. ಇಲ್ಲಿಯವರೆಗೆ ಕಳುಹಿಸಲಾದ ಒಟ್ಟು ಸ್ಯಾಂಪಲ್ 4330 ಇದ್ದು, ಈ ಪೈಕಿ 4211 ನೆಗಟಿವ್ ವರದಿಯಾದರೆ, 53 ಪಾಜಿಟಿವ್ ವರದಿಯಾಗಿವೆ. ಒಂದು ಮೃತ ಪ್ರಕರಣ ವರದಿಯಾಗಿದ್ದು, 9 ಸ್ಯಾಂಪಲ್ಗಳು ರಿಜೆಕ್ಟ ಆಗಿವೆ. ಒಟ್ಟು 53 ಪಾಜಿಟಿವ್ ಪ್ರಕರಣಗಳ ಪೈಕಿ 21 ಜನರು ಗುಣಮುಖರಾಗಿದ್ದು, 31 ಜನ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

  ಜಿಲ್ಲೆಯಲ್ಲಿ ಒಟ್ಟು 12 ಕಂಟೈನ್ಮೆಂಟ್ ಝೋನ್ಗಳಿವೆ. 28 ದಿನಗಳ ಹೋಮ್ ಕ್ವಾರಂಟೈನ್ನಿಂದ ಒಟ್ಟು 198 ಜನರನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ.