ರಾಯಬಾಗ ಪಟ್ಟಣದ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಸಭಾಭವನದಲ್ಲಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಡಳಿತ ಪರಿಷತ್ತಿಗೆ ನಾಮನಿರ್ದೇಶನ ಸದಸ್ಯರಾಗಿ ನೇಮಕಗೊಂಡ ವಕೀಲರಾದ ಆರ್.ಎಸ್.ಶಿರಗಾಂವೆ ಅವರನ್ನು ಶುಕ್ರವಾರ ವಕೀಲರ ಸಂಘದಿಂದ ಸತ್ಕರಿಸಲಾಯಿತು. ಸಂಘದ ಅಧ್ಯಕ್ಷ ಪಿ.ಎಮ್.ದರೂರ, ಉಪಾಧ್ಯಕ್ಷ ಎಸ್.ವಿ.ಪೂಜೇರಿ, ಕಾರ್ಯದರ್ಶಿ ಎಸ್.ಬಿ.ಬಿರಾದಾರಪಾಟೀಲ, ಸಹಕಾರ್ಯದರ್ಶಿ ಬಿ.ಕೆ.ಶಿಂಗಾಡೆ, ಖಜಾಂಚಿ ಯು.ಎನ್.ಉಮ್ರಾಣಿ, ಹಿರಿಯ ವಕೀಲರಾದ ಎ.ಬಿ.ಮಂಗಸೂಳೆ, ಪಿ.ಎಮ್.ಪಾಟೀಲ, ಎಸ್.ಎಸ್.ಚೌಗಲಾ, ಎನ್.ಎಮ್.ಯಡವನ್ನವ್ವರ, ಎಸ್.ಕೆ.ರೆಂಟೆ, ಎಮ್.ಜಿ.ಉಗಾರೆ, ಎಸ್.ಬಿ.ಹೋಳ್ಕರ, ಎಮ್.ಎಮ್.ಚಿಂಚಲಿಕರ, ಜಿ.ಎಸ್.ಪವಾರ, ಎಲ್.ಆರ್.ಪಡತರೆ, ಆರ್.ಎ.ಗೆನ್ನೆನ್ನವರ, ಎಮ್.ಪಿ.ತೇಲಿ, ಎಲ್.ಕೆ.ಖೋತ, ಸಿ.ಬಿ.ಬುಸಗುಂಡೆ, ಎಸ್.ಎಸ್.ನಾಯಿಕ, ಆರಿ್ಟ.ನಾಗರಾಳೆ, ವಿ.ಎಸ್.ಪೂಜಾರಿ, ಎ.ಬಿ.ನಿಡವಣಿ, ದೀಪಕ ದುರ್ಗನ್ನವರ, ಎ.ಬಿ.ಸರವ, ಎಸ್.ಸಿ.ದಿಕ್ಷೀತ, ಎಸ್.ವಿ.ಸಂಗೋಟೆ ಸೇರಿ ಅನೇಕರು ಇದ್ದರು.