ರಾಣೇಬೆನ್ನೂರು ವಕೀಲರ ಸಂಘದಲ್ಲಿ ನಗರ ಅಭಿವೃದ್ಧಿ ಕುರಿತು ನಡೆದ ಸಲಹೆ -ಸೂಚನೆ
ರಾಣೇಬೆನ್ನೂರು 28: ರಾಜ್ಯಂಗ ಕಾರ್ಯಂಗ ಮತ್ತು ನ್ಯಾಯಾಂಗದ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬರಿಗೂ ಅತ್ಯಂತ ಗೌರವ ಪ್ರೀತಿ, ವಿಶ್ವಾಸ ಅಭಿಮಾನ ಇದ್ದೇ ಇರುತ್ತದೆ. ವಿಶೇಷವಾಗಿ ನ್ಯಾಯಾಂಗದಲ್ಲಿ ಸೇವೆ ಸಲ್ಲಿಸುವ ನ್ಯಾಯವಾದಿಗಳಿಗೆ ಸರಕಾರ ಮತ್ತು ಸಮಾಜದಲ್ಲಿ ಅತ್ಯಂತ ದೊಡ್ಡ ಗೌರವವಿದೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು. ಅವರು ಸೋಮವಾರ, ಇಲ್ಲಿನ ವಕೀಲರ ಸಂಘದಲ್ಲಿ ಆಯೋಜಿಸಲಾಗಿದ್ದ, ಹಿರಿಯರ ಮಾರ್ಗದರ್ಶನ ಮತ್ತು ನಗರ,ತಾಲೂಕು ಅಭಿವೃದ್ಧಿ ಕುರಿತು ನಡೆದ ಸಲಹೆ -ಸೂಚನೆ ಸಭೆಯಲ್ಲಿ ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಮಗಿರುವ 5 ಕೋಟಿ ಶಾಸಕರ ಅನುದಾನ ನಿಧಿಯನ್ನು ವಿದ್ಯಾರ್ಥಿಗಳ ಪರಿಪೂರ್ಣ ಶಿಕ್ಷಣದ ಅಭಿವೃದ್ಧಿಗಾಗಿ ಮೀಸಲಾಗಿಟ್ಟಿದ್ದೇನೆ. ಇದರಿಂದ ಗ್ರಾಮೀಣ ಪ್ರದೇಶದ, ಶೈಕ್ಷಣಿಕ ಹಿಂದುಳಿದ ಮಕ್ಕಳ ಬೆಳವಣಿಗೆಗೆ ಕಾರಣವಾಗುತ್ತದೆ ಎಂದರು.
ವಕೀಲರ ಸಂಘದಲ್ಲಿ ಮೃತ ಕುಟುಂಬದವರ ಸಹಾಯಕ್ಕಾಗಿ ಕಲ್ಯಾಣ ನಿಧಿಯನ್ನು ಸ್ಥಾಪಿಸಿರುವ ಸೇವಾ ಕಾರ್ಯವು ಸ್ಲಾಘ ನೀಯವಾಗಿದೆ. ಎಂದು ಸಂಘದ ಕಾರ್ಯವನ್ನು ಸ್ಲಾಘಿಗಿಸಿದ ಕೋಳಿವಾಡರು. ಈಗಾಗಲೇ, ತಾತ್ಕಾಲಿಕ ಕಟ್ಟಡ ನಿರ್ಮಾಣಕ್ಕಾಗಿ 39 ಲಕ್ಷ ರೂಗಳು ಬಿಡುಗಡೆಯಾಗಿದೆ ಶೀಘ್ರವಾಗಿ ಕಟ್ಟಡ ಕಾಮಗಾರಿ ಆರಂಭವಾಗಲಿದೆ ಟೆಂಡರ್ ಕಾರ್ಯವು ಸಹ ಪ್ರಗತಿಯಲ್ಲಿದೆ ಎಂದರು. ಸಂಘದಲ್ಲಿ ಕಲ್ಯಾಣ ನಿಧಿಗೆ ಧನ ಸಹಾಯ ಕೋರಿ ಸಲ್ಲಿಸಿದ ಮನವಿಗೆ, ಸ್ಪಂದಿಸಿದ ಕೋಳಿವಾಡ ಅವರು, ಪ್ರತಿ ವರ್ಷ ಕಲ್ಯಾಣ ನಿಧಿಗೆ 2 ಲಕ್ಷ ರೊಗಳ ಧನ ಸಹಾಯ ನೀಡುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪ್ರಕಾಶ ಬುರುಡಿಕಟ್ಟಿ ಅವರು, ಮಾತನಾಡಿ, ಸಂಘವು 700ಕ್ಕೂ ಹೆಚ್ಚು ಅಧಿಕ ಸದಸ್ಯರನ್ನು ಹೊಂದಿದೆ. ನೂರಕ್ಕೂ ಹೆಚ್ಚು ಮಹಿಳಾ ಸದಸ್ಯರು ಇದ್ದಾರೆ. ಸರಿಯಾದ ಸೌಲಭ್ಯಗಳು ತಲುಪಿಸಲು ಸಾಧ್ಯವಾಗುತ್ತಿಲ್ಲ. ನಡೆಯಲಿರುವ ಬಜೆಟ್ ನಲ್ಲಿ ಸಮಗ್ರ ಅಭಿವೃದ್ಧಿಗಾಗಿ ಸರಕಾರದಿಂದ ಅನುದಾನ ದೊರಕಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು. ಸಲಹಾ ಸಚಿನಾ ಸಭೆಯಲ್ಲಿ, ಹಿರಿಯ ನ್ಯಾಯವಾದಿಗಳಾದ, ಕೆ ಎನ್. ಕೋರಧಾನ್ನಮಠ, ಅಶೋಕಕುಮಾರ, ನಾಯ್ಕ, ಎಸ್. ಎಸ್. ಶಿರಗಂಬಿ, ಮತ್ತಿತರರು ತಮ್ಮ ಅಮೂಲ್ಯ ಸಲಹೆ ಸೂಚನೆ, ನೀಡಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು. ನ್ಯಾಯವಾದಿ ಶ್ರೀಮತಿ ನಂದಿನಿ ಜೋಶಿ ಪ್ರಾರ್ಥಿಸಿದರು. ಉಪಾಧ್ಯಕ್ಷ ಹೆಚ್. ಹೆಚ್. ತಿಮ್ಮೇನಹಳ್ಳಿ ಸ್ವಾಗತಿಸಿದರು, ನೋಟರಿ ಏಕಾಂತ ಮುದಿಗೌಡರ ನಿರೂಪಿಸಿ, ಮಂಜುನಾಥ ಇಂಗಳಗೊಂದಿ ವಂದಿಸಿದರು. ಸಭೆಯಲ್ಲಿ ಸಂಘದ ಎರಡು ನೂರಕ್ಕೂ ಹೆಚ್ಚು ಪುರುಷ ಹಾಗೂ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು