ಮುಂಗಡ ಪತ್ರದ ವಿಶ್ಲೇಷಣೆ ಕಾರ್ಯಕ್ರಮ

ಲೋಕದರ್ಶನ ವರದಿ

ಬೆಳಗಾವಿ 02:  ದಿ. 01ರಂದು ಸ್ಥಳೀಯ ಲಿಂಗರಾಜ ಮಹಾವಿದ್ಯಾಲಯದಲ್ಲಿ 2020-21 ರ ಮುಂಗಡ ಪತ್ರದ ವಿಶ್ಲೇಷಣೆ ಮತ್ತು ನೇರ ಪ್ರಸಾರವನ್ನು ಅರ್ಥಶಾಸ್ತ್ರ ವಿಭಾಗದಿಂದ ಹಮ್ಮಿಕೊಳ್ಳಲಾಗಿತ್ತು ಇದರ ವಿಶ್ಲೇಷಣಾಕಾರರಾಗಿ ಜಿಎಸ್ಟಿಯ ಜಂಟಿ ನಿದರ್ೇಶಕ ರೇಣೆಶ್ವರ ಮೇಘನ್ನವರ ಮತ್ತು ಸಹಾಯಕ ನಿದರ್ೇಶಕ ಚಂದ್ರಕಾಂತ ಲೊಕರೆ ಯವರು ಮುಂಗಡ ಪತ್ರದ ಅರ್ಥ, ತೆರಿಗೆಗಳಲ್ಲಿ ಇತ್ತಿಚಿನ ಬದಲಾವಣೆಗಳನ್ನು ಕುರಿತು ಮಾತನಾಡಿದರು ನಂತರ ಮುಂಗಡ ಪತ್ರದ ನೇರ ಪ್ರಸಾರವನ್ನು ವಿಕ್ಷೀಸಲಾಯಿತು.

ಕಾರ್ಯಕ್ರದ ಸ್ವಾಗತವನ್ನು ಕು ನಿಂಗಪ್ಪಾ ತತ್ರಿ ಮತ್ತು ಪರಿಚಯವನ್ನು ಪ್ರೊ. ಜಿ.ಎ. ಮಠಪತಿ ಯವರು ನಡೆಸಿದರು ಕಾರ್ಯಕ್ರಮದ ಅದ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್.ಎಂ.ಪಾಟೀಲ ವಹಿಸಿದ್ದರು. ಕು ಯಶವಂತ ಟೊಳ್ಳಿ ಹಾಗು ರಮ್ಮಾ ನಿರ್ವಹಿಸಿದರು. ಪ್ರೊ. ಆರ್.ಎಂ. ಹಜಗೊಳಕರ ವಂದಿಸಿದರು ಬಿಎ ಹಾಗು ಬಿಕಾಂ ವರ್ಗಗಳ ವಿದ್ಯಾಥರ್ಿಗಳು ಹಾಜರಿದ್ದರು.