ಶ್ರೀ ಪುರಂದರದಾಸರ ಆರಾಧನೆ

Adoration of Shri Purandardasa

ವಿಜಯಪುರ 28: ಶ್ರೀ ಪುರಂದರದಾಸರ ಆರಾಧನಾ ನಿಮಿತ್ಯ ಭಜನಾ ಮಂಡಳಿಗಳ ಸ್ಪರ್ಧೆ ಪುರಂದರಗಾನ ವೈಭವ 2 ದಿನಗಳ ವಿಜೃಂಭಣೆಯಿಂದ ಜರುಗಿತು. 

ದಿನಾಂಕ  25 ಮತ್ತು 26 ರಂದು ದೀವಟಗೇರಿ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಸನ್ನಿಧಾನದ ಅಡಿಯಲ್ಲಿ ಹಾಗೂ ತಿರುಪತಿ ತಿರುಮಲ ದಾಸ ಸಾಹಿತ್ಯ ಪ್ರೊಜೆಕ್ಟ್‌ ಇವರ ಸಹಯೋಗದಲ್ಲಿ ಭಜನಾ ಮಂಡಳಿಗಳ ಸ್ಪರ್ಧೆ ವಿಜೃಂಭಣೆಯಿಂದ ನೇರವೇರಿತು. 

20 ಕ್ಕೂ ಹೆಚ್ಚು ಭಜನಾ ಮಂಡಳಿಗಳು ಭಾಗವಹಿಸದ್ದವು. ಸಾವಿರಾರು ಸಂಖ್ಯೆಯಲ್ಲಿ ಮಾತೆಯರು ಶ್ರೀಪುರಂದರ ದಾಸರ ಕೃತಿಗಳನ್ನು ಹಾಡುವ ಮೂಲಕ ಅವರನ್ನು ನೆನೆಸಿಕೊಂಡರು. ಕಾರ್ಯಕ್ರಮದ ಸಮಾರೋಪದಲ್ಲಿ ಭಾಗವಹಿಸಿ ಪಂಡಿತರಾದ ಮಧ್ವಾಚಾರ್ಯ ಮೊಖಾಶಿ ಮಾತನಾಡುತ್ತಾ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠನಾಗಿರತಕ್ಕಂತಹ ಪರಮ ಸರ್ವೋತ್ತಮನಾಗಿರತಕ್ಕಂತಹ ನಾರಾಯಣನು ಸಾಕ್ಷಾತ್ ಲಕ್ಷ್ಮೀದೇವಿ ಮೊದಲು ದಾಸಿ ಆಗಿದ್ದಾರೆೆ. ಆಮೇಲೆ ಶ್ರೀ ಮುಖ್ಯಪ್ರಾಣ ದೇವರು ಶ್ರೀ ರಾಮದೇವರು ದಾಸರಿಗೆ ಜಗತ್ತಿಗೆ ದಾಸತ್ವ ಹೇಗೆ ಮಾಡಬೇಕೆಂದು ತೋರಿಸಿಕೊಟ್ಟಿದ್ದಾರೆ. ಮುಂದೆ ವ್ಯಾಸರಾಯರ ಕಾಲದಲ್ಲಿ ಪುರಂದರದಾಸರನ್ನುವಂತಹ ಶಿರೋರತ್ನವನ್ನು ಪಡೆದಂತಹ ನಾವೆಲ್ಲರೂ ಧನ್ಯರು. ಅಂತಹ ಶ್ರೇಷ್ಠರದಾಸರ ಆರಾಧನೆ ಬಗ್ಗೆ ಮಾತನಾಡಿದರು. ಮುಂದಿನ ದಿನಗಳಲ್ಲಿ ಇನ್ನು ಮಹತ್ವದ ಕಾರ್ಯಗಳನ್ನು ಆಯೋಜಿಸಿಬೇಕು ಎಂದು ಹೇಳಿದರು. 

ಪಂ.ನರಹರಿಅಚಾರ್ಯ ಮಾತನಾಡುತ್ತಾ ಇದು ಕೇವಲ ಗಾನವೈಭವ ಆಗುವುದು ಬೇಡಾ ಮುಂದಿನ ದಿನಮಾನದಲ್ಲಿ ಪುರಂದರ ದಾಸರ ಗಾನದ ಅರ್ಥದ ವೈಭವ ಆಗಬೇಕಂದು ಹೇಳಿದರು. ಮಠದ ಅಧ್ಯಕ್ಷರಾದ ಪ್ರಕಾಶ ಅಕ್ಕಲಕೋಟ ಮಾತನಾಡುತ್ತಾ ದಾಸ ಸಾಹಿತ್ಯ ಮಾತ್ರವಲ್ಲ ಕನ್ನಡ ಸಾಹಿತ್ಯ  ಕ್ಷೇತ್ರದಲ್ಲಿ ಪುರಂದರದಾಸರ ಕೊಡುಗೆ ಅಪಾರವಾಗಿದೆ. ಪುರಂದರದಾಸರ ನೆನೆದು ಧರ್ಮಕಾರ್ಯದ ಮುನ್ನಡೆಸುವಲ್ಲಿ ನಮ್ಮ ದೀವಟಗೇರಿಯ ಶ್ರೀ ರಾಘವೇಂದ್ರ ಮಠ ಸದಾ ಭಕ್ತರ ಸೇವೆಗೆ ಇರುತ್ತದೆ ಅಂತಾ ಹೇಳಿದರು. 

ಈ ಸಂದರ್ಭದಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀ ವಿಜಯ ವಿಠ್ಠಲ ಭಜನಾ ಮಂಡಳಿ, ದ್ವೀತಿಯ ಸ್ಥಾನವನ್ನು ಶ್ರೀ ಮುಖ್ಯಪ್ರಾಣ ಭಜನಾ ಮಂಡಳಿ, ತೃತೀಯ ಸ್ಥಾನವನ್ನು ಶ್ರೀ ಗುರುರಾಜ ಭಜನಾ ಮಂಡಳಿಗೆ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅರ್ಚಕರಾದ ಶ್ರೀನಿವಾಸಚಾರ್ಯ ಪೂಜಾರ, ಅರಿವಿಂದ ಕುಲಕರ್ಣಿ, ವೆಂಕಟೇಶ ಖಾಸನೀಸ, ಪ್ರವೀಣ ಜೋಶಿ, ವಾಮನ ಕುಲಕರ್ಣಿ, ವೆಂಕಟೇಶಗುಡಿ, ಬಿಂದುಮಾಧವ ಖಾಸನೀಸ, ಗೋವಿಂದ ಜೋಶಿ, ವಿಕಾಸ ಪದಕಿ, ವಿಜಯ ಜೋಶಿ, ರಾಕೇಶ ಕುಲಕರ್ಣಿ, ಜಯತೀರ್ಥ ಮಂಗಲಗಿ, ಪ್ರಾಣೇಶ ಮಮದಾಪೂರ, ಗೋವಿಂದ ದೇಶಪಾಂಡೆ, ರಾಜು ಸಾಲೋಟಗಿ, ಗುಂಡು ಜೋಶಿ, ರಾಘು ಜೋಶಿ, ವಾದಿರಾಜ ಜೋಶಿ, ವಿಜೇಯಿಂದ್ರ ನ್ಯಾಮಣ್ಣವರ ಉಪಸ್ಥಿತರಿದ್ದರು ಮತ್ತು ಭಾಗ್ಯಶ್ರೀ ಕಟ್ಟಿಕಾರ್ಯಕ್ರಮವನ್ನು ನಿರೂಪಿಸಿದರು.