ಹಾವೇರಿ: ಸಾಮಾಜಿಕ ಕ್ರಾಂತಿಯ ಹರಿಕಾರರಾದ ಸಿದ್ಧರಾಮೇಶ್ವರರ ತತ್ವ ಆದರ್ಶಗಳನ್ನು ಕೇವಲ ಬೋಧಿಸಿದರೆ ಸಾಲದು, ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳಾದ ಬಿ.ಎಸ್.ಯಡ್ಡಿಯೂರಪ್ಪ ಅವರು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನೊಳಂಬ ಲಿಂಗಾಯತ ಸಂಘದ ವತಿಯಿಂದ ಗುರುವಾರ ನಗರದ ಗುರು ಸಿದ್ಧರಾಮೇಶ್ವರ ಸಮುದಾಯ ಭವನದ ಆವರಣದಲ್ಲಿ ಜರುಗಿದ ಗುರು ಸಿದ್ಧರಾಮೇಶ್ವರ ಸಮುದಾಯ ಭವನ ಸಭಾಂಗಣ ಹಾಗೂ ಹುತಾತ್ಮ ಮೆಣಸಿನಹಾಳ ತಿಮ್ಮನಗೌಡ ವಿದ್ಯಾಥರ್ಿ ನಿಲಯದ ಮೊದಲ ಮಹಡಿ ಉದ್ಘಾಟಿಸಿ ಅವರು ಮಾತನಾಡಿದರು.
ಜನರ ದಾಹ ಇಂಗಿಸುವಲ್ಲಿ ಶ್ರಮಿಸಿದ ಸಿದ್ಧರಾಮೇಶ್ವರರು ಸೊಲ್ಲಾಪುರದಲ್ಲಿ 4ಸಾವಿರ ಶಿವಶರಣರ ಸಹಾಯದಿಂದ ರಚಿಸಿದ್ದ ಕೆರೆ ಇಂದಿಗೂ ಬತ್ತದಿರುವುದು ವಿಶೇಷವಾಗಿದೆ. ಜ್ಞಾನದಾಸೋಹ, ಅನ್ನದಾಸೋಹದ ಜತೆಗೆ ಕೆರೆ-ಕಟ್ಟೆ ಬಾವಿಗಳನ್ನು ಕಟ್ಟಿಸುವುದರ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಸಭಾಭವನವು ಗ್ರಾಮೀಣ ಭಾಗದ ಬಡ ವಿದ್ಯಾಥರ್ಿಗಳಿಗೆ ನೆರವಾಗಲಿದೆ. ಇದರ ಸದುಪಯೋಗ ಪಡೆದುಕೊಂಡು ವಿದ್ಯಾಥರ್ಿಗಳು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವುದರ ಮೂಲಕ ದೇಶಕ್ಕೆ ಕೀತರ್ಿತರಬೇಕು. ಸಮಾಜದಲ್ಲಿ ಎಲ್ಲರೂ ಉತ್ತಮ ಪ್ರಜೆಗಳಾಗಿ ಬದುಕಿ ಸುಂದರ ಸಮಾಜ ಕಟ್ಟುವಲ್ಲಿ ಕೈ ಜೋಡಿಸಿ ಎಂದು ಹೇಳಿದರು.
ಕಾನೂನು ಸಂಸದೀಯ ವ್ಯವಹಾರಗಳ ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ.ಸಿ ಮಾಧುಸ್ವಾಮಿಯ ಅವರು ಮಾತನಾಡಿ, ಪ್ರವಾಹ ಸಂತ್ರಸ್ತರ ಬದಕನ್ನು ಸುಸ್ಥಿರವಾಗಿಸುವಲ್ಲಿ ಮತ್ತು ಅವರಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಯಡ್ಡಿಯೂರಪ್ಪನವರು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪರಿಹಾರ ನೀಧಿಗೆ ದಾನ ನೀಡಿದ ಹಾಗೂ ಸಮುದಾಯ ಭವನ ಕಟ್ಟಡ ನಿಮರ್ಾಣಕ್ಕೆನೀರ್, ಧನ ಸಹಾಯ ಮಾಡಿದವರನ್ನು ಮುಖ್ಯಮಂತ್ರಿ ಯಡ್ಡಿಯೂರಪ್ಪನರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಗೃಹ, ಸಹಕಾರ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ, ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ, ಶಾಸಕರಾದ ಸಿ.ಎಂ. ಉದಾಸಿ, ನೆಹರು ಓಲೇಕಾರ. ವಿರಾಪಾಕ್ಷಪ್ಪ ಬಳ್ಳಾರಿ, ಮಾಜಿ ಸಚಿವರಾದ ರುದ್ರಪ್ಪ ಲಮಾಣಿ ಹಾಗೂ ಬಸವರಾಜ ಶಿವಗಣ್ಣೆನವರ ಇತರರು ಉಪಸ್ಥಿತರಿದ್ದರು.