ಮಹರ್ಷಿ ವಾಲ್ಮೀಕಿ ತತ್ವಾದರ್ಶ ಅಳವಡಿಸಿಕೊಳ್ಳಿ: ಹರನಾಳ

ಮಹರ್ಷಿ ವಾಲ್ಮೀಕಿ ತತ್ವಾದರ್ಶ ಅಳವಡಿಸಿಕೊಳ್ಳಿ: ಹರನಾಳ  Adopt the philosophy of Maharishi Valmiki: Harnala

ಮಹರ್ಷಿ ವಾಲ್ಮೀಕಿ ತತ್ವಾದರ್ಶ ಅಳವಡಿಸಿಕೊಳ್ಳಿ: ಹರನಾಳ  

ತಾಳಿಕೋಟಿ 07: ಈ ಜಗತ್ತಿಗೆ ಬಂದ ಎಲ್ಲ ಮಹಾಪುರುಷರು ದಾರ್ಶನಿಕರು ಸಂತ- ಶರಣರು ಯಾವುದೇ ಒಂದು ಸೀಮಿತ ಜಾತಿಯ ಜನರ ಉದ್ಧಾರಕ್ಕಾಗಿ ಬಂದವರಲ್ಲ ಅವರು ಇಡೀ ಮನುಕುಲದ ಒಳಿತಿಗಾಗಿ ಬಂದವರಾಗಿದ್ದಾರೆ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಮುದ್ದೇಬಿಹಾಳ ಎಂಜಿಎಂಕೆ ಪ.ಪೂ. ಕಾಲೇಜ ಪ್ರಾಚಾರ್ಯ ಡಾ.ಸುರೇಶ ಹರನಾಳ ಹೇಳಿದರು.  

ಮಂಗಳವಾರ ಪಟ್ಟಣದ ಮಹರ್ಷಿ ವಾಲ್ಮೀಕಿ ಭವನದಲ್ಲಿ ತಾಲೂಕ ಆಡಳಿತ,ತಾಪಂ ತಾಳಿಕೋಟಿ ಸಮಾಜ ಕಲ್ಯಾಣ ಇಲಾಖೆ ಪುರಸಭೆ ತಾಳಿಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ಯವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಮನಂತಹ ಆದರ್ಶ ವ್ಯಕ್ತಿಯನ್ನು ಸೃಷ್ಟಿಸಿದವರು ವಾಲ್ಮೀಕಿ, ಮತ್ತೆ ಅಂತಹ ವ್ಯಕ್ತಿಯನ್ನು ಸೃಷ್ಟಿಸಲು ಜಗತ್ತಿನಲ್ಲಿ ಈವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ. ವಾಲ್ಮೀಕಿ ರಾಮನ ಮೂಲಕ ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಲು ಸಮಾಜಕ್ಕೆ ಪಾಠ ಹೇಳಿದ್ದಾರೆ. ವಾಲ್ಮೀಕಿಯನ್ನು ಪೂಜಿಸುವ ಪ್ರತಿಯೊಬ್ಬರೂ ರಾಮಾಯಣ ಪೂಜಿಸಬೇಕು. ನಿಷ್ಟೆಗೆ ಹೆಸರಾದ ವಾಲ್ಮೀಕಿ ಜನಾಂಗದವರಲ್ಲಿ ಜಗತ್ತಿಗೆ ರಾಮಾಯಣ ಕೊಟ್ಟ ಮಹರ್ಷಿ ವಾಲ್ಮೀಕಿಯ ವಾರಸದಾರರು ನಾವು ಎಂಬ ಬಗ್ಗೆ ಹೆಮ್ಮೆ ಅಭಿಮಾನ ಇರಬೇಕು ಎಂದು ತಿಳಿಸಿದರು. ಸಮಾಜದ ಪ್ರಗತಿ ಶಿಕ್ಷಣದಿಂದ ಮಾತ್ರ ಸಾಧ್ಯ ಆದ್ದರಿಂದ ವಾಲ್ಮೀಕಿ ಸಮಾಜದ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಒಳ್ಳೆಯ ಸಂಸ್ಕಾರಗಳನ್ನು ನೀಡಲು ಪ್ರಯತ್ನಿಸುವುದು ಅಗತ್ಯವಾಗಿದೆ ಎಂದರು.  

ಸಮಾಜದ ಮುಖಂಡರಾದ ಅಶೋಕ ದೊರೆಗೋಳ, ಶರಣಗೌಡ ಪಾಟೀಲ(ಕರಿಭಾಂವಿ) ಮಾತನಾಡಿ ವಾಲ್ಮೀಕಿ ಸಮಾಜ ಬೇಡುವ ಸಮಾಜವಾಗದೆ ಸ್ವಾಭಿಮಾನದ ಸಮಾಜವಾಗಿದೆ. ನಮ್ಮ ಪೂರ್ವಜರು 122 ಸಂಸ್ಥಾನಗಳಲ್ಲಿ ರಾಜ್ಯಭಾರ ನಡೆಸಿದರೂ ಅವರು ಸಿರಿ ಸಂಪತ್ತು ಅಧಿಕಾರಕ್ಕಾಗಿ ರಾಜ್ಯಭಾರ ಮಾಡಲಿಲ್ಲ ಜನರ ಸೇವೆ ಅವರ ಮುಖ್ಯ ಧೇಯ ವಾಗಿತ್ತು, ನಮ್ಮ ಸಮಾಜದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿ ತಹಸಿಲ್ದಾರ್ ಡಾ.ವಿನಯಾ ಹೂಗಾರ ಮಾತನಾಡಿ ಕೇವಲ ಮಹಾತ್ಮರ ಜಯಂತಿಗಳನ್ನು ಆಚರಿಸಿದರೆ ಸಾಲದು ಅವರು ಸಮಾಜಕ್ಕೆ ನೀಡಿದ ಉತ್ತಮ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅವಳಿಸಿಕೊಂಡಾಗ ಜಯಂತಿ ಆಚರಣೆಗೆ ಸಾರ್ಥಕತೆ ಆಗುತ್ತದೆ ಎಂದರು. ಇದೇ ಸಂದರ್ಭದಲ್ಲಿ 2024 -25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ವಾಲ್ಮೀಕಿ ಸಮಾಜದ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.  

ಪಿಎಸ್‌ಐ ಜ್ಯೋತಿ ಖೋತ್, ತಾಪಂ ಸಹಾಯಕ ನಿರ್ದೇಶಕಿ ಸುಜಾತಾ ಯಡ್ರಾಮಿ,ಸ.ಕ.ಇ.ಕಛೇರಿ ಅಧೀಕ್ಷಕ ಶಿವಲಿಂಗಪ್ಪ ಹಚಡದ, ಕಂದಾಯ ನೀರೀಕ್ಷಕ ಸುರೇಶ ಅಮರಣ್ಣವರ, ನಿವೃತ್ತ ಶಿಕ್ಷಕ ಎಲ್‌.ಬಿ.ಕೊಡೆಕಲ್, ಸಿ.ಆರಿ​‍್ಸ.ರಾಜು ವಿಜಾಪುರ, ಸಿದ್ದಲಿಂಗಯ್ಯ ಪಾಟೀಲ, ವಾಲ್ಮೀಕಿ ಸಮಾಜದ ಪ್ರಮುಖರಾದ ಸಂಜೀವಪ್ಪ ಬರೆದೆನಾಳ, ಕಾಶಿನಾಥ ಪಾಟೀಲ, ಕುಮಾರ ಅಸ್ಕಿ, ಅಶೋಕ ಅಸ್ಕಿ, ಯಮನಪ್ಪ ಬರ್ದೇನಾಳ, ಹಣಮಂತ ಮೇಲಿನಮನಿ, ಹನುಮಂತರಾಯ ನಾಯ್ಕೋಡಿ, ಮಂಜುನಾಥ ಮಾಲಿಪಾಟೀಲ, ಅಂಬೇಡ್ಕರ್ ಸೇನೆಯ ಬಸ್ಸು ಮಾದರ, ಗೋಪಾಲ ಕಟ್ಟಿಮನಿ,ನಿಲಯ ಪಾಲಕರಾದ ಎಸ್‌.ಎನ್‌. ಮಲ್ಲಾಡೆ, ಎನ್‌.ವಿ.ಕೋರಿ, ಎಸ್‌.ಎಂ.ಕಲಬುರ್ಗಿ, ಮಹಾಂತೇಶ ತಾಳಿಕೋಟಿ, ಸಿಬ್ಬಂದಿಗಳಾದ ಮಂಜುನಾಥ ನರಸಣಗಿ, ನವೀನಕುಮಾರ ಇಜೇರಿ, ರಮೇಶ ಸಂಗಮ, ಹಣಮಂತ ಗೋಡ್ಯಾಳ, ಯೋಗನಾಥ ತಳವಾರ ಇದ್ದರು.  

ಮೆರವಣಿಗೆಗೆ ತಹಶೀಲ್ದಾರ್ ಚಾಲನೆ: ಇದಕ್ಕೂ ಮುನ್ನ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಗೆ ತಹಸಿಲ್ದಾರ್ ಡಾ.ವಿನಯಾ ಹೂಗಾರ ತಹಸಿಲ್ದಾರ್ ಕಾರ್ಯಾಲಯದ ಆವರಣದಲ್ಲಿ ಚಾಲನೆ ನೀಡಿದರು. ಮೆರವಣಿಗೆ ಮಹಾರಾಣಾ ಪ್ರತಾಪ್ ಸಿಂಹ ವೃತ್ತ, ಶಿವಾಜಿ ವೃತ್ತ, ಕತ್ರಿ ಬಜಾರ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ ಮಾರ್ಗವಾಗಿ ವಾಲ್ಮೀಕಿ ಭವನಕ್ಕೆ ತಲುಪಿ ಸಮಾವೇಶಗೊಂಡಿತು.