ಕೊಪ್ಪಳ 29: ಸರ್ವಜ್ಞನ ವಚನಗಳಲ್ಲಿನ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕು ರೂಪಿಸಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಎಸ್. ಪಾಟೀಲ್ ಅವರು ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಂದು (ಫೆ 29) ಜಿಲ್ಲಾ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುಂಬಾರ ಸಮಾಜದವರು ತಮ್ಮ ಕಲೆ, ಸಂಪ್ರದಾಯ, ಸಂಸ್ಕೃತಿ, ತತ್ವ, ಕುಲಕಸುಬನ್ನು ಉಳಿಸಿಕೊಳ್ಳಲು ನಿರಂತರ ಸರ್ವಜ್ಞನ ವಿವೇಚನೆಗಳನ್ನು ಅರಿಯಬೇಕು. ಸಮುದಾಯವನ್ನು ಬಲಪಡಿಸಿಲು ಜಯಂತಿ ಆಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಸಮುದಾಯದವರು ಸಮುದಾಯ ಭವನ ನಿಮರ್ಾಣದ ಕುರಿತು ಸಲ್ಲಿಸಿದ ಬೇಡಿಕೆಯನ್ನು ಪರಿಶೀಲಿಸಿ ಸೂಕ್ತ ಸ್ಥಳವನ್ನು ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.
ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಉಪನ್ಯಾಸಕರಾದ ಡಿ.ಎಂ.ಬಡಿಗೇರ, ಕುಂಬಾರರ ಕೆಲಸ ಆದಿ ಕಾಲದಿಂದಲೂ ಸಾಗಿಬಂದಿದೆ. ಸರ್ವಜ್ಞ ಒಬ್ಬರು ಮಹಾನ್ ಚೇತನ. ಸಂತನೂ ಹೌದು, ಕವಿಯೂ ಹೌದು. ಸರ್ವಜ್ಞರು ಅಪಾರ ಬುದ್ದಿಜೀವಿಯಾಗಿ ಮಹಾಕಾವ್ಯಗಳನ್ನು ರಚಿಸಿ, ಅಪ್ಪಟ ದೇಶೀ ಕವಿಯಾಗಿದ್ದರು. ತ್ರಿಪದಿಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ಸಾಮಾನ್ಯರಿಗೆ ತಿಳಿಯಪಡಿಸಿದ ಜ್ಞಾನಿ ಸರ್ವಜ್ಞರು. ಗುರುಕುಲ, ರಾಜಕುಲಕ್ಕೆ ಶ್ರಮಿಸದೆ, ಸಮುದಾಯಕ್ಕಾಗಿ ಅಭಿವೃದ್ಧಿಗಾಗಿ ಶ್ರಮಿಸಿ, ಜನಪ್ರಿಯ ಕವಿಯಾಗಿ ಹೊರಹೊಮ್ಮಿದ್ದಾರೆ.
ಇವರ ಕವನ ಮತ್ತು ವಚನಗಳು ಜನಸಾಮಾನ್ಯರಿಗೆ ಮನಮುಟ್ಟುವಂತೆ, ಸರಳವಾಗಿ ಅರ್ಥವಾಗುವಂತೆ ಅವರ ಬರವಣಿಗೆ ಲಿಖಿತವಾಗಿತ್ತು. ಸರ್ವಜ್ಞನ ವಚನಗಳು ಮಾನವನ ಬಾಳನ್ನು ಹಸನುಗೊಳಿಸುವಂತಹ ಛಲ ಹಾಗೂ ಸಮಾಜದ ಅನಿಷ್ಟ ಪದ್ಧತಿಗಳನ್ನು ತಿದ್ದುವಂತಹ ನಿಭರ್ಿಡೆಯ ನೇರ ನುಡಿಗಳಾಗಿದ್ದವು. ಸಾಸಿವೆಯಲ್ಲಿ ಸಾಗರದಷ್ಟು ವಚನಗಳನ್ನು ತುಂಬುವ ಆಗಾಧವಾದ ಶಕ್ತಿಯನ್ನು ಸರ್ವಜ್ಞ ಹೊಂದಿದ್ದರು ಎಂದು ಹೇಳಿದರು.
ನಗರಸಭೆ ಸದಸ್ಯರಾದ ರಾಜಶೇಖರ ಆಡೂರ, ಗುರುರಾಜ ಹಲಿಗೇರಿ, ಮುತ್ತುರಾಜ್ ಕುಷ್ಟಗಿ, ತಹಶೀಲ್ದಾರರಾದ ಜೆ.ಬಿ ಮಜ್ಜಗಿ, ಜಿಲ್ಲಾ ಆಯುಷ್ ಅಧಿಕಾರಿ ಬಸವರಾಜ್ ಕುಂಬಾರ್, ಮುಂಡರಗಿ ನಗರಸಭಾ ಸದಸ್ಯರಾದ ಮುತ್ತಣ್ಣ ಕುಂಬಾರ್, ಕೊಪ್ಪಳ ತಾಲ್ಲೂಕು ಅಧ್ಯಕ್ಷ ಮಲ್ಲಪ್ಪ ಕುಂಬಾರ್, ದೇವನಂದಾ ದಾಸನಾಳ, ಯುವ ಸಂಘದ ಅಧ್ಯಕ್ಷ ವಿರೇಶ್ ಕುಂಬಾರ್ ನರೇಗಲ್, ಗವಿಸಿದ್ದಪ್ಪ ಕಕರ್ಿಹಳ್ಳಿ, ಈರಣ್ಣ ಕುಂಬಾರ್, ಸಂಗಪ್ಪ ಕುಂಬಾರ್ ಸೇರಿದಂತೆ ಸಮುದಾಯವರು ಉಪಸ್ಥಿತರಿದ್ದರು. ಸಿ.ವಿ ಜಡಿಯವರು ನಿರೂಪಿಸಿ, ವಂದಿಸಿದರು.
ಮೆರವಣಿಗೆ: ಜಿಲ್ಲಾ ಸಾಹಿತ್ಯ ಭವನದಿಂದ ಮೆರವಣಿಗೆ ಆರಂಭವಾಗಿ ಜವಾಹರ ರಸ್ತೆಯ ಮಾರ್ಗವಾಗಿ ಆಜಾದ ವೃತ್ತ, ಅಲ್ಲಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮೂಲಕ ಶ್ರೀ ಪ್ಯಾಟಿ ಈಶ್ವರ ದೇವಸ್ಥಾನದಲ್ಲಿ ಮೆರವಣಿಗೆ ಸಮಾರೋಪಗೊಂಡಿತು. ಮೆರವಣಿಗೆಯಲ್ಲಿ ಕುಂಭ ಹೊತ್ತ ಮಹಿಳೆಯರು ಹಾಗೂ ವಿವಿಧ ಕಲಾತಂಡಗಳು ಭಾಗವಹಿದ್ದರು.