ಲೋಕದರ್ಶನ ವರದಿ
ಕೊಪ್ಪಳ 13: ಇಂದಿನ ಪೀಳಿಗೆ ತಂತ್ರಜ್ಞಾನ ಅಳವಡಿತ ಸಂಗೀತಕ್ಕೆ ಮಾರುಹೋಗಿದ್ದರಿಂದ ಪ್ರಾಚೀನ ಕಾಲದ ಸಂಸ್ಕೃತಿ ನೇಪತ್ಯಕ್ಕೆ ಸರಿಯುತ್ತಿದೆ. ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಉಳಿಸಬೇಕಾದರೆ ಯುವ ಪೀಳಿಗೆ ನಮ್ಮ ಮೂಲ ಸಂಗೀತವನ್ನು ಕಲಿಯಬೇಕು ಜೊತೆಗೆ ಧಾರ್ಮಿಕತೆಗೆ ಹೆಚ್ಚಿನ ಹೊತ್ತು ನೀಡಿ ಸಂಸ್ಕಾರವಂತರಾಗಬೇಕಿದೆ. ಸಂಗೀತ ಕಲಿಯುವುದರಿಂದ ಮಕ್ಕಳು ದಿನವಿಡ ಚೈತನ್ಯಭರಿತರಾಗಿರುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ನಮ್ಮ ಶ್ರೇಷ್ಠ ಕಲೆಯಾದ ಸಂಗೀತವನ್ನು ಅಭ್ಯಾಸ ಮಾಡುವುದು ಅವಶ್ಯವಿದೆ. ಅಲ್ಲದೇ ಸಂಗೀತ ಆಲಿಸುವುದರಿಂದಲೂ ದೈನಂದಿನ ಜೀವನ ಜಂಜಾಟದಲ್ಲಿರುವ ಮನಸಿಗೆ ನೆಮ್ಮದಿ ಸಿಗಲಿದೆ ಎಂದು ಷ.ಬ್ರ.108 ಶ್ರೀ ಸಿದ್ದೇಶ್ವರ ಶಿವಾಚಾರ್ಯರು ಹೇಳಿದರು. ಇವರು ಕೊಪ್ಪಳ ನಗರದ ರೇಣುಕಾಚಾರ್ಯ ಭವನದಲ್ಲಿ ಶ್ರೀ ವೀರಮಹೇಶ್ವರ ಕ್ಷೇಮಾಭಿವೃದ್ದಿ ಸಂಘ, ವೀರಶೈವ ಜಂಗಮ ಅರ್ಚಕರ ಹಾಗೂ ಪುರೋಹಿತರ ಸಂಘ(ರಿ) ಕೊಪ್ಪಳ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ 45ನೇ ಮಾಸಿಕ ಅರಿವು ಆಚಾರ ಪ್ರವಚನ ಮತ್ತು ರೇಣುಕಾಚಾರ್ಯ ಭಗವತ್ಪಾದರ ಕಾತರ್ಿಕ ದೀಪೋತ್ಸವ ನಿಮಿತ್ಯ ಜರುಗಿದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದ ಸಾನಿಧ್ಯ ವಹಿಸಿ ಜ್ಯೋತಿ ಬೆಳಗಿಸಿ ಮಾತನಾಡಿ ಅರಿವು ಆಚಾರ ಕುರಿತು ಆಶೀರ್ವಚನ ನೀಡಿದರು. ಇದಕ್ಕೂ ಪೂರ್ವದಲ್ಲಿ ರೇಣುಕಾಚಾರ್ಯ ಮೂತರ್ಿಗೆ ರುದ್ರಾಭಿಷೇಕ ವಿಧಿ-ವಿಧಾನಗಳು ಜರುಗಿ ಸಹಸ್ರ ಬಿಲ್ವಾರ್ಚನೆ ಮಾಡಲಾಯಿತು.
ನಂತರ ಕಾರ್ತಿಕ ದೀಪೋತ್ಸವ ಜರುಗಿತು ಈ ಸಂದರ್ಭದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಭಾಗವಹಿಸಿದ್ದರು. ನಂತರ ನಡೆದ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದಯ್ಯ ಹಿರೇಮಠ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಡಾ. ಹೆಚ್.ಎಂ.ಪ್ರಸಾದ, ಪಿ.ಎಂ.ಶಂಭುಲಿಂಗಯ್ಯ, ಮಂಜುನಾಥಸ್ವಾಮಿ ಹಿರೇಮಠ, ಗವಿಸಿದ್ದಪ್ಪ ಮೇಟಿ, ವಕೀಲರಾದ ರುದ್ರಯ್ಯ ಹಿರೇಮಠ, ಅಜ್ಜಯ್ಯ ಹಿರೇಮಠ, ಗವಿಸಿದ್ದಯ್ಯ ಲಿಂಗಬಸಯ್ಯನಮಠ, ಶಂಕ್ರಯ್ಯ ಸಾಲಿಮಠ, ಮಹಿಳಾ ಸಂಘದ ಅಧ್ಯಕ್ಷೆ ಶಾಂತಾ ಗೌರಿಮಠ, ನಗರಸಭಾ ಸದಸ್ಯ ಬಸಯ್ಯ, ಸಿ.ವಿ.ಕಲ್ಮಠ, ಹಂಪಯ್ಯ ಮೆತಗಲ್, ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಜಗದಯ್ಯ ಸಾಲಿಮಠ, ಶ್ಯಾಮಲಾ ಜಾಗಟಗೇರಿಮಠ ಇತರರು ಉಪಸ್ಥಿತರಿದ್ದರು.
ಜಗದೀಶ ಹಿರೇಮಠ ರಾಗ ಭೂಪ, ಮಾಲಕೌಂಸ್, ಯಮನರಾಗ ಪ್ರಸ್ತುತ ಪಡಿಸಿ ಜನಮನ ಸೆಳೆದರು. ದ್ಯಾಮಣ್ಣ ತಳವಾರ ಸಂಗೀತ ನೀಡಿದರು. ಕಳಕಯ್ಯ ಬಲವಂಚಿಮಠ ತಬಲಾ ಸಾಥ್ ನೀಡಿದರು. ಚೇತನ ಹಿರೇಮಠ ನಿರೂಪಿಸಿದರು, ಬಸಯ್ಯ ಅಬ್ಬಿಗೇರಿಮಠ ಸ್ವಾಗತಿಸಿದರು, ಭಗತ್ ಗದಗಿನಮಠ ವಂದಿಸಿದರು.