ಕಾಂಗ್ರೆಸ್ ವಿರುದ್ದ ಗಾಯಕ ಅದ್ನಾನ್ ಸಾಮಿ ಆಕ್ರೋಶ

ನವದೆಹಲಿ,  ಜ ೨೭:           ಪ್ರಮುಖ  ಗಾಯಕ,   ಸಂಗೀತಗಾರ ಅದ್ನಾನ್  ಸಾಮಿ ಗೆ   ಕೇಂದ್ರ ಸರ್ಕಾರ  ಪದ್ಮಶ್ರೀ  ಪುರಸ್ಕಾರ  ಪ್ರಕಟಿಸಿರುವುದರ  ಬಗ್ಗೆ   ಪ್ರತಿಪಕ್ಷ ಕಾಂಗ್ರೆಸ್  ತನ್ನ ಆಕ್ಷೇಪವನ್ನು ಮುಂದುವರಿಸಿದೆ.   

ಪಾಕಿಸ್ತಾನದಲ್ಲಿ ಹುಟ್ಟಿ ಬೆಳೆದ ಅದ್ನಾನ್  ಸಾಮಿಗೆ    ದೇಶದ ಅತ್ಯುನ್ನತ  ನಾಗರೀಕ  ಪುರಸ್ಕಾರ ಗಳಲ್ಲಿ ಒಂದಾಗಿರುವ  ಪದ್ಮಶ್ರೀ   ಪ್ರಕಟಿಸಿರುವುದನ್ನು   ಕಾಂಗ್ರೆಸ್  ವಕ್ತಾರ     ಜೈವೀರ್   ಶೆರ್ಗಿಲ್  ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ  ಮೊಹಮದ್ ಸನಾವುಲ್ಲಾ ಅವರನ್ನು    ಅಸ್ಸಾಂನಲ್ಲಿ  ಎನ್ ಆರ್ ಸಿ   ನಡೆಸಿದ  ನಂತರ ವಿದೇಶಿಯನೆಂದು ಪ್ರಕಟಿಸಿದ್ದ  ಕೇಂದ್ರ ಸರ್ಕಾರ ...  ಪಾಕಿಸ್ತಾನದ   ವಾಯುಪಡೆಯ  ಪೈಲೆಟ್  ಪುತ್ರನಿಗೆ  ಪದ್ಮಶ್ರೀ  ಪ್ರಶಸ್ತಿಯನ್ನು   ಹೇಗೆ  ಪ್ರಕಟಿಸಿತು.?  ಎಂದು ಪ್ರಶ್ನಿಸಿದ್ದಾರೆ.   ಸರ್ಕಾರ  ಪರವಾಗಿ ಚಮಾಚಗಿರಿ  ಸಂಗೀತ  ನುಡಿಸಿರುವ    ಅದ್ನಾನ್ ಸಾಮಿಗೆ   ಪದ್ಮಶ್ರೀ ಬಂದಿದೆ  ಎಂದು  ಆರೋಪಿಸಿದೆ. 

ಈ  ನಡುವೆ  ತಮ್ಮ  ವಿರುದ್ದ  ಕಾಂಗ್ರೆಸ್  ಮಾಡಿರುವ  ಟೀಕೆಗೆ ಅದ್ನಾನ್  ಸಾಮಿ     ಅಸಮಧಾನ ವ್ಯಕ್ತಪಡಿಸಿದ್ದಾರೆ.  “ಹೇ ಮಗು ..  ನಿನ್ನ   ಬುದ್ದಿಯನ್ನು  ತೀರುವಳಿ  ಮಾರಾಟ ಮಳಿಗೆಯಿಂದ  ಖರೀದಿಸಿದ್ದಾರಾ..? ಅಥವಾ ಸೆಕೆಂಡ್ ಹ್ಯಾಂಡ್ ಅಂಗಡಿಯಿಂದ ಖರೀದಿಸಿದ್ದೀರಾ? ...   ತಂದೆ ತಾಯಿಯರ  ನಡೆಸಿದ  ಕ್ರಮಗಳಿಗೆ  ಮಕ್ಕಳು ಹೇಗೆ ಜವಾಬ್ದಾರರಾಗುತ್ತಾರೆ.  ನೀವು   ಒಬ್ಬ ವಕೀಲರು. ಕಾನೂನು ಶಾಲೆಯಲ್ಲಿ  ಕಲಿತಿರುವುದು ಇದೇನಾ ?  ಎಂದು   ಟ್ವೀಟ್ ನಲ್ಲಿ  ಆಕ್ರೋಶ  ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ, ಕಾಂಗ್ರೆಸ್ ವಾದಗಳಿಗೆ  ಭಿನ್ನವಾಗಿ  ಆ ಪಕ್ಷದ  ಹಿರಿಯ  ನಾಯಕ ದಿಗ್ವಿಜಯ್ ಸಿಂಗ್ ಮಾತ್ರ ಅದ್ನಾನ್  ಸಾಮಿ  ಅವರನ್ನು ಅಭಿನಂದಿಸಿದ್ದಾರೆ.   ಒಟ್ಟು ೧೪೧  ಮಂದಿಗೆ  ಕೇಂದ್ರ  ಸರ್ಕಾರ  ದೇಶದ ಅತ್ಯುನ್ನತ ನಾಗರೀಕ  ಪುರಸ್ಕಾರ  ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ಈ ಪೈಕಿ ಏಳು ಮಂದಿಗೆ  ಪದ್ಮ ವಿಭೂಷಣ,  ೧೬ ಮಂದಿಗೆ ಪದ್ಮ ಭೂಷಣ  ಹಾಗೂ ೧೧೮ ಮಂದಿಗೆ ಪದ್ಮಶ್ರೀ  ಪ್ರಶಸ್ತಿ   ಪುರಸ್ಕಾರ  ಪ್ರಕಟಿಸಿದೆ.