ಉಡುಪಿ,
ಡಿ. 20 ಅಷ್ಠ ಮಠಗಳ ಹಿರಿಯ ಯತಿಗಳಾದ ಪೇಜಾವರ ಮಠಾಧೀಶರಾದ
ವಿಶ್ವೇಶತೀರ್ಥ ಶ್ರೀಪಾದರಿಗೆ ಇಂದು ಮುಂಜಾನೆ ಹಠಾತ್
ಆಗಿ ಕಾಣಿಸಿಕೊಂಡ ಹೃದಯ ಮತ್ತು ಕಿಡ್ನಿ ನೋವಿನ ಸಮಸ್ಯೆಯಿಂದಾಗಿ
ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದು ಬಂದಿದೆ.ರಾತ್ರಿ ಮಠದಲ್ಲಿದ್ದ ಶ್ರೀಗಳಿಗೆ ಹೃದಯದಲ್ಲಿ ನೋವು ಕಾಣಿಸಿಕೊಂಡ
ತಕ್ಷಣ ಮಠದ ಸಿಬ್ಬಂದಿಗಳು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆಂದು
ಮಠದ ಮೂಲಗಳು ತಿಳಿಸಿವೆ. ಗುರುವಾರ ಬೆಳಗ್ಗೆ ಜ್ವರ
ಮತ್ತು ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥಗೊಂಡಿದ್ದ ಶ್ರೀಗಳಿಗೆ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.