ಆದಿತ್ಯ ನಾಯ್ಕ ಎಸ್‌ಎಸ್‌ಎಲ್‌ಸಿ. ವಾರ್ಷಿಕ ಪರೀಕ್ಷೆ-2ರಲ್ಲಿ ರಾಜ್ಯಕ್ಕೆ ಪ್ರಥಮ ರಾ್ಯಂಕ್
Aditya Nayak First rank for the state in the SSLC. annual examination-2
ಕಾರವಾರ, 26 ; ಕಾರವಾರ ಎಜ್ಯುಕೇಶನ್ ಸೊಸೈಟಿಯ ಬಾಲಮಂದಿರ ಪ್ರೌಢಶಾಲೆಯ ವಿದ್ಯಾರ್ಥಿ ಕು. ಆದಿತ್ಯ ಅಜೀತ್ ನಾಯ್ಕ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ; 2024-25ರಲ್ಲಿ ಒಟ್ಟೂ 625 ಅಂಕಕ್ಕೆ 625 ಅಂಕ ಪಡೆದು, ರಾಜ್ಯಕ್ಕೆ, ಜಿಲ್ಲೆಗೆ ಹಾಗೂ ತಾಲೂಕಿಗೆ ಪ್ರಥಮ ರಾ್ಯಂಕ್ ಪಡೆದಿರುತ್ತಾರೆ ಹಾಗೂ ತನ್ನ ಹುಟ್ಟೂರು, ತಾಲೂಕು, ಜಿಲ್ಲೆ ಹಾಗೂ ರಾಜ್ಯಕ್ಕೇ ಕೀರ್ತಿ ತಂದಿರುತ್ತಾರೆ.
ಈತನು ಗ್ರಾಮೀಣ ಭಾಗವಾದ ಬಿಡ್ತುಲಭಾಗ (ಸದಾಶಿವಗಡ) ದ ನಿವಾಸಿಯಾಗಿದ್ದು, ಅಧ್ಯಯನದಲ್ಲಿ ಅತ್ಯಂತ ಶ್ರದ್ಧೆ ಹೊಂದಿದ್ದು, ನಿರಂತರ ಪರಿಶ್ರಮದಿಂದ ಈ ಸಾಧನೆ ಮಾಡಿರುತ್ತಾನೆ.
ಇವರ ಈ ಸಾಧನೆಗೆ ದೇವರ ಆಶೀರ್ವಾದ, ಗುರುಗಳ ಮಾರ್ಗದರ್ಶನ, ತಂದೆ-ತಾಯಿಯವರ ಕಠೀಣ ಪರಿಶ್ರಮ, ತನ್ನ ಸ್ವಂತ ಅಭ್ಯಾಸ ಹಾಗೂ ಈತನ ಅಜ್ಜಿಯರಾದ ಶ್ರೀಮತಿ ಇಂದು ಜಯರಾಮ ನಾಯ್ಕ ಹಾಗೂ ಶ್ರೀಮತಿ ಶಾಲಿನಿ ರಾಮದಾಸ ನಾಯ್ಕ ಇವರ ಪ್ರೇರಣೆಯೇ ಮುಖ್ಯ ಕಾರಣವೆಂದು ಕು. ಆದಿತ್ಯ ಅಜೀತ್ ನಾಯ್ಕ ತಿಳಿಸಿರುತ್ತಾರೆ.
ನರ್ಸರಿಯಿಂದ ಹತ್ತನೇ ತರಗತಿಯವರೆಗೂ ಎಲ್ಲಾ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನದಲ್ಲಿಯೇ ತೇರ್ಗಡೆ ಹೊಂದುತ್ತಿರುವ ಈತನು ಈಗ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಅಸಾಧಾರಣ ಸಾಧನೆಯನ್ನು ಮಾಡಿರುತ್ತಾನೆ.
ಇವನು ಮುಂದೆ ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಕಲಿತು, ಉನ್ನತ ಹುದ್ದೆಯನ್ನು ಹೊಂದಿ ದೇಶ ಸೇವೆ ಮಾಡಬೇಕೆಂಬ ಹಂಬಲವನ್ನು ಹೊಂದಿರುತ್ತಾನೆ. ಅಲ್ಲದೇ ತಾನು ಕಲಿತ ಶಾಲೆ ಮತ್ತು ಗುರುಗಳನ್ನು ಯಾವತ್ತೂ ಮರೆಯಲಾಗದು ಎಂದು ಹೇಳಿರುತ್ತಾನೆ.
ಅಜೀತ್ ರಾಮದಾಸ ನಾಯ್ಕ ಮತ್ತು ಅರ್ಿತಾ (ರೂಪಾಂಜಲಿ) ಅಜೀತ್ ನಾಯ್ಕ ದಂಪತಿಗಳ ಸುಪುತ್ರನಾದ ಕು. ಆದಿತ್ಯನ ಈ ಸಾಧನೆಗೆ ಕಾರವಾರ ಎಜ್ಯುಕೇಶನ್ ಸೊಸೈಟಿಯ ಆಡಳಿತಮಂಡಳಿಯ ಅಧ್ಯಕ್ಷರಾದ ಎಸ್. ಪಿ. ಕಾಮತ್, ಕಾರ್ಯದರ್ಶಿಗಳಾದ ಅನಿರುದ್ದ ಹಳದಿಪುರ, ಆಡಳಿತಾಧಿಕಾರಿ ಜಿ. ಪಿ. ಕಾಮತ ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಮತ್ತು ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ, ಶಿಕ್ಷಕವೃಂದ, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಎಲ್ಲಾ ವಿದ್ಯಾರ್ಥಿಗಳು ಮತ್ತು ಪಾಲಕರು ಶುಭ ಹಾರೈಸಿರುತ್ತಾರೆ.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 