ಭಾರತ-ಇಂಗ್ಲೆಂಡ ಮೊದಲ ಟೆಸ್ಟ್ ಪಂದ್ಯಕ್ಕೆ ಅದಿಲ್ ರಷೀದ್ ಆಯ್ಕೆ

 

ಲಂಡನ್: ಮುಂಬರುವ ಟೆಸ್ಟ್ ಸರಣಿಯಲ್ಲಿ ವಿಶ್ವದ ನಂಬರ್ 1 ತಂಡ ಟೀಂ ಇಂಡಿಯಾವನ್ನು ಮಣಿಸಲು ಪಣತೊಟ್ಟಿರುವ ಇಂಗ್ಲೆಂಡ್ ತಂಡ ಈಗಾಗಲೇ ಟೆಸ್ಟ್ ಕ್ರಿಕೆಟ್ ನಿವೃತ್ತಿ ಘೋಷಿಸಿರುವ ಸ್ಪಿನ್ನರ್ ಅನ್ನು ಮೊದಲ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡುವ ಅಚ್ಚರಿ ಮೂಡಿಸಿದೆ. 

ಹೌದು.. ಇದೇ ಆಗಸ್ಟ್ 1 ರಿಂದ ಆರಂಭಗೊಳ್ಳಲಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾಗಿರುವ ಆದಿಲ್ ರಶೀದ್ ಬುಲಾವ್ ನೀಡಿದೆ. 

ಇಂಗ್ಲೆಂಡ್ ನ ಎಡ್ಜ್ ಬ್ಯಾಸ್ಟನ್ ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಅದಿಲ್ ರಷೀದ್ ರನ್ನು ಆಯ್ಕೆ ಮಾಡಿದೆ. ಆ ಮೂಲಕ ನಿವೃತ್ತಿ ಘೋಷಿಸಿದ್ದ ಅದಿಲ್ ರಷೀದ್ ರನ್ನು ಮತ್ತೆ ಟೆಸ್ಟ್ ಕ್ರಿಕೆಟ್ ಗೆ ಇಂಗ್ಲೆಂಡ್ ತಂಡ ವಾಪಸ್ ಕರೆಸಿಕೊಂಡಿದೆ. 

ಇಂಗ್ಲೆಂಡ್ ಪಿಚ್ಗಳಲ್ಲಿ ವೇಗದ ಜತೆಗೆ ಸ್ಪಿನ್ ಮೂಲಕವೂ ಭಾರತವನ್ನು ಕಟ್ಟಿ ಹಾಕಲು ಇಂಗ್ಲೆಂಡ್ ಪ್ಲಾನ್ ಮಾಡಿಕೊಂಡಿದ್ದು, ಹಾಗಾಗಿ ರಶೀದ್ರನ್ನು ಮತ್ತೆ ವಾಪಸ್ ಕರೆಸಿಕೊಳ್ಳಲಾಗಿದೆ. ಇತ್ತೀಚೆಗೆ ನಡೆದ ಭಾರತ ವಿರುದ್ಧ ಏಕದಿನ ಸರಣಿಯಲ್ಲಿ ರಶೀದ್ ಉತ್ತಮ ಪ್ರದರ್ಶನ ನೀಡಿದ್ದರು. ಭಾರತದ ಪ್ರಮುಖ ವಿಕೆಟ್ ಕಿತ್ತು ಏಕದಿನ ಸರಣಿ ವಶ ಪಡಿಸಿಕೊಳ್ಳಲು ಸಹಕರಿಸಿದ್ದರು. 

ಪ್ರಮುಖವಾಗಿ ಭಾರತದ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಅದಿಲ್ ರಷೀದ್ ಔಟ್ ಮಾಡಿದ್ದ ಪರಿ ಕ್ರಿಕೆಟ್ ಪ್ರೇಮಿಗಳ ಅಚ್ಚರಿಗೆ ಕಾರಣವಾಗಿತ್ತು. ಹೀಗಾಗಿ ಅದಿಲ್ ರಷೀದ್ ರಿಂದ ಇದೇ ರೀತಿಯ ಪ್ರದರ್ಶನವನ್ನು ಟೆಸ್ಟ್ ಸರಣಿಯಲ್ಲೂ ಇಂಗ್ಲೆಂಡ್ ತಂಡ ನಿರೀಕ್ಷಿಸುತ್ತಿದೆ.  

ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಇಂಗ್ಲೆಂಡ್ ತಂಡ ಇಂತಿದೆ. :ಜೋ ರೂಟ್ (ನಾಯಕ), ಅಲಸ್ಟರ್ ಕುಕ್, ಕೀಟನ್ ಜೆನ್ನಿಂಗ್ಸ್, ಡೇವಿಡ್ ಮಲಾನ್, ಜಾನಿ ಬೇರ್ ಸ್ಟೋ (ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್, ಮೊಯಿನ್ ಅಲಿ, ಜಾಸ್ ಬಟ್ಲರ್, ಅದಿಲ್ ರಷೀದ್, ಸ್ಯಾಮ್ ಕುರನ್, ಸ್ಟುವಟರ್್ ಬ್ರಾಡ್, ಜಿಮ್ಮಿ ಆಂಡರ್ಸನ್, ಜಾಮಿ 

ಪೋರ್ಟರ್