ಲೋಕದರ್ಶನ ವರದಿ
ಗಂಗಾವತಿ 20:
ಕಿಷ್ಕಿಂದಾ ಪರ್ವತದಲ್ಲಿರುವ ಇತಿಹಾಸ ಪ್ರಸಿದ್ಧಿ ಹೊಂದಿರುವ ಆದಿಶಕ್ತಿ ದುಗರ್ಾದೇವಿ ದೇವಸ್ಥಾನಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ತಾವು ಪ್ರಾಮಾಣಿಕ ಪ್ರಯತ್ನ
ಮಾಡುವದಾಗಿ ಶಾಸಕ ಪರಣ್ಣ ಮುನವಳ್ಳಿ
ತಿಳಿಸಿದರು.
ತಾಲೂಕಿನ ವಿಶ್ವ ವಿಖ್ಯಾತ ವಿಜಯನಗರ ಸಾಮ್ರಾಜ್ಯದ ಮೂಲ
ಸಂಸ್ಥಾನ ಆನೆಗೊಂದಿ ಅರಸರ ಆರಾಧ್ಯ ದೇವಿಯಾಗಿದ್ದ
ಆನೆಗುಂದಿ ಹತ್ತಿರದ ಬೆಟ್ಟದಲ್ಲಿರುವ ಆದಿಶಕ್ತಿ ದೇವಿಯ ಜಂಬೂ
ಸವಾರಿಗೆ ಶುಕ್ರವಾರ
ಚಾಲನೆ ನೀಡಿ ಅವರು ಮಾತನಾಡಿದರು.
ದೇವಸ್ಥಾನವು ಅತಿ ಎತ್ತರದ ಬೆಟ್ಟದಲ್ಲಿರುವ
ಕಾರಣದಿಂದ ಅಂಗವಿಕಲರು ದೇವಿ ದರ್ಶನ ಪಡೆಯಲು
ಹರ ಸಾಹಸ ಪಡಬೇಕಾಗಿದೆ. ಇವರಿಗಾಗಿ
ವಿಶೇಷ ಸೌಲಭ್ಯ ಕಲ್ಪಿಸಕೊಡಲಾಗುವದು. ದೇವಸ್ಥಾನವು ವಿಜಯನಗರ ಸಾಮ್ರಾಜ್ಯದ ಅರಸು ಶ್ರೀಕೃಷ್ಣದೇವರಾಯಲು ಅವಧಿಯಲ್ಲಿ ನಿಮರ್ಾಣಗೊಂಡಿದೆ.
ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಆಗಮಿಸುವ ಯಾತ್ರಾಥರ್ಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ತಿಳಿಸಿದರು.
ಆನೆಗುಂದಿ ಪ್ರದೇಶ ಹನುಮ ಜನಿಸಿದ ನಾಡು
ಎಂದು ಪ್ರಸಿದ್ಧಿಯನ್ನು ಹೊಂದಿದೆ. ಆಂಜನಾದ್ರಿ ಪರ್ವತ, ಪಂಪಾಸರೋವರ, ನವ ವೃಂದಾವನ, ವಿರುಪಾಪುರ
ಗಡ್ಡೆ, ರಂಗನಾಥ ದೇವಾಲಯ, ಚಿಂತಾಮಣಿ ಗಳಿವೆ. ತುಂಗಭದ್ರಾ ನದಿಯಾಚೆ ಕೂಗಳತೆಯಲ್ಲಿ ವಿಶ್ವವಿಖ್ಯಾತ ಹಂಪಿ ಇದೆ. ವಿದೇಶಿ
ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಎಲ್ಲಾ
ತಾಣಗಳನ್ನು ವೀಕ್ಷಿಸಲು ಒಂದು ದಿನದಲ್ಲಿ ಆಗುವದಿಲ್ಲ.
ಯಾತ್ರಾಥರ್ಿಗಳಿಗೆ ಯಾತ್ರಿ ನಿವಾಸ ನಿಮರ್ಿಸಲು ಪ್ರಸ್ತಾವನೆ ಸಲ್ಲಿಸಲಾಗುವದು ಎಂದು ಹೇಳಿದರು.
ಪ್ರವಾಸಿಗರು ಸಮೀಪದ ಹೊಸಪೇಟೆ, ಗಂಗಾವತಿ ಮತ್ತು ಬಳ್ಳಾರಿ ಖಾಸಗಿ ವಸತಿ ಗೃಹಗಳಲ್ಲಿ ತಂಗುತ್ತಾರೆ.
ಇವರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಯಾತ್ರಿ ನಿವಾಸದ ಅಗತ್ಯ ಇದೆ ಎಂದು ತಿಳಿಸಿದರು.
ಗೋಶಾಲೆ: ದೇವಸ್ಥಾನದ ಮುಖ್ಯಸ್ಥ ಬ್ರಹ್ಮಾನಂದಸ್ವಾಮಿಗಳು ಇಲ್ಲಿ ಗೋಶಾಲೆಯನ್ನು ಆರಂಭಿಸಿದ್ದಾರೆ. ಈ ಶಾಲೆಯ ಅಭಿವೃದ್ದಿಗಾಗಿ
ಸರಕಾರದಿಂದ ಅನುದಾನ ಕೊಡಿಸುವ ಭರವಸೆಯನ್ನು ಶಾಸಕ ಮುನವಳ್ಳಿ ಈ
ಸಂದರ್ಭದಲ್ಲಿ ನೀಡಿದರು. ಜಂಬೂ ಸವಾರಿಗೆ ಚಾಲನೆ
ನೀಡುವ ಸಂದರ್ಭದಲ್ಲಿ ಆನೆಗುಂದಿ ರಾಜಮನೆತನದ ಶ್ರೀಕೃಷ್ಣದೇವರಾಯಲು ಶಾಸಕರಿಗೆ ಸಾಥ್ ನೀಡಿದರು.
ನವರಾತ್ರೋತ್ಸವ
ನಿಮಿತ್ಯ ಶ್ರೀಆದಿಶಕ್ತಿ ದೇಗುಲದಲ್ಲಿ ಕಳೆದ 10 ದಿನಗಳಿಂದ ಸಡಗರ,ಸಂಭ್ರಮದಿಂದ ಹಾಗೂ
ಶ್ರದ್ಧಾ ಭಕ್ತಿಯಿಂದ ಹೋಮ-ಹವನಾದಿಗಳು ಇತರ
ಧಾಮರ್ಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ನವರಾತ್ರೋತ್ಸವ ಅಂಗವಾಗಿ ಶ್ರೀಆದಿಶಕ್ತಿ ಮೂತರ್ಿಯನ್ನು ಆನೆ ಅಂಬಾರಿ ಮೆರವಣಿಗೆಯಲ್ಲಿ
ದೇಗುಲದ ಸನ್ನಿಧಿಯಿಂದ ಆನೆಗುಂದಿ ಗ್ರಾಮದ ಶ್ರೀರಂಗನಾಥ ದೇವಾಲಯದವರೆಗೆ ತರಲಾಯಿತು ನಂತರ ಗ್ರಾಮ ಪ್ರದಕ್ಷಿಣೆ
ಮಾಡಲಾಯಿತು. ಆಕರ್ಷಕ ಜಾನಪದ ಕಲಾತಂಡಗಳು,ಹಗಲು ವೇಷಧಾರಿಗಳು,ವಿವಿಧ-ವಾದ್ಯ-ತಾಳ-ಮೇಳಗಳು, ಮಹಿಳೆಯರ
ಕುಂಭೋತ್ಸವದೊಂದಿಗೆ
ಅದ್ದೂರಿಯಿಂದ ಜಂಬೂ ಸವಾರಿ ನಡೆಯಿತು.
ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ,
ಸುರೇಶ ಆನೆಗುಂದಿ, ಸಿದ್ದರಾಮಯ್ಯಸ್ವಾಮಿ ಸಂಗಾಪುರಮಠ, ಬಿಎಚ್ಎಂ ತಿಪ್ಪೇರುದ್ರಸ್ವಾಮಿ, ಸಂತೋಷ ಬಾಂಠಿಯಾ, ಸಿದ್ದಾಪುರ ರಾಚಪ್ಪ, ರಾಘವೇಂದ್ರಶೆಟ್ಟಿ, ಕೆಲೋಜಿ ಸಂತೋಷ ಪಾಲ್ಗೊಂಡಿದ್ದರು.