ಲಕ್ನೋ, ಜೂನ್ 18 : 302 ಕಿಲೋಮಿಟರ್ ಉದ್ದದ ಗ್ರೀನ್ಫೀಲ್ಡ್ ಲಕ್ನೋ-ಆಗ್ರಾ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಪೆಟ್ರೋಲ್ ಪಂಪ್ ಮತ್ತು ತಿಂಡಿ ತಿನಿಸುಗಳ ಮಳಿಗೆಗಳನ್ನು ತೆರೆಯಲಾಗುವುದು. ಸೋಮವಾರ ರಾತ್ರಿ ಇಲ್ಲಿ ನಡೆದ ಪಗ್ರತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಬಗ್ಗೆ ನಿರ್ದೇಶನ ನೀಡಿದ್ದಾರೆ. ಈ ಎಕ್ಸ್ಪ್ರೆಸ್ವೇಯಲ್ಲಿ ಈಗಾಗಲೇ ಎರಡು ಪೆಟ್ರೋಲ್ ಪಂಪ್ಗಳು ಮತ್ತು ವಿಶ್ರಾಂತಿ ವಲಯವಿದೆ. ಅಪಘಾತದ ಸಮಯದಲ್ಲಿ ಜನರಿಗೆ ಪರಿಹಾರ ಒದಗಿಸಲು ಎಕ್ಸ್ಪ್ರೆಸ್ವೇ ನಲ್ಲಿ ಟ್ರಾಮ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಅವರು ಸೂಚನೆ ಕೊಟ್ಟಿದ್ದಾರೆ ಎಕ್ಸ್ಪ್ರೆಸ್ವೇಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು ಪರಿಣಾಮ ಸಾವು- ನೋವು ಸಂಭವಿಸುತ್ತಿದೆ. ಸೋಮವಾರ, ಐಪಿಎಸ್ ಅಧಿಕಾರಿಯೊಬ್ಬರು ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದಾರೆ, ಟ್ರಾಮ ಕೇಂದ್ರವು ಜನರಿಗೆ ತ್ವರಿತ ವೈದ್ಯಕೀಯ ನೆರವು ನೀಡಲು ಸಹಾಯ ಮಾಡಲಿದೆ. ಪೂವರ್ಾಂಚಲ್ ಎಕ್ಸ್ಪ್ರೆಸ್ ವೇ, ಬುಂದೇಲ್ಖಂಡ್ ಎಕ್ಸ್ಪ್ರೆಸ್ ವೇ, ಗಂಗಾ ಎಕ್ಸ್ಪ್ರೆಸ್ ವೇ ಮತ್ತು ಗೋರಖ್ಪುರ್ ಎಕ್ಸ್ಪ್ರೆಸ್ ವೇ ನಿರ್ಮಾಣದ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವ ನಾಲ್ಕು ಎಕ್ಸ್ಪ್ರೆಸ್ ಹೆದ್ದಾರಿಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿದ್ದಾರೆ. ಈ ನೋಡಲ್ ಅಧಿಕಾರಿಗಳು ಕೆಲಸವನ್ನು ಪಾರದರ್ಶಕ ರೀತಿಯಲ್ಲಿ ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದರು. ಗೋರಖ್ಪುರ ಕೈಗಾರಿಕಾ ಕಾರಿಡಾರ್ ನಿಮರ್ಿಸಬೇಕು, ಈ ಎಲ್ಲಾ ಯೋಜನೆಗಳ ಕೆಲಸವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಅವರು ತಾಕೀತು ಮಾಡಿದರು.