ಬಾಗಲಕೋಟೆ: ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ವ್ಯಸನಮುಕ್ತರಾಗುವ ಮೂಲಕ ಸದೃಡ ಆರೋಗ್ಯವಂತರಾಗಬೇಕೆಂದು ನೆಹರು ಯುವ ಕೇಂದ್ರದ ರಾಜ್ಯ ನಿದರ್ೇಶಕ ಅತುಲ್ ನಿಕಮ್ ಯುವಕರಿಗೆ ಕರೆ ನೀಡಿದರು.ಕೂಡಲಸಂಗಮದ ಅಂತರರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದಲ್ಲಿ ಸೋಷಿಯಲ್ ಜುಸ್ಟೀಸ್ ಮಂತ್ರಾಲಯ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಸಂಘಟನೆ, ನೆಹರು ಯುವ ಕೇಂದ್ರ, ಕೂಡಲಸಂಗಮ ಅಭಿವೃದ್ದಿ ಪ್ರಾಧಿಕಾರ, ಭಾರತ ಸೇವಾದಳ, ಯುವ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ರಾಜ್ಯ ಮಟ್ಟದ 3 ದಿನಗಳ ವ್ಯಸನ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದುಶ್ಚಟಗಳು ಅಂದರೆ ಸರಾಯಿ, ಧೂಮಪಾನ, ಗುಟಕಾ, ನಷೆ ಬರುವ ಔಷಧಿಗಳು, ಸಿರಂಜಗಳು ಇತರೆ ಮಾದಕ ವಸ್ತುಗಳಿಂದ ದೂರವಿರಲು ತಿಳಿಸಿದರು.ಸದ್ಗುರು ಮಹಾದೇಶ್ವರ ಶ್ರೀ ಬಸವ ಧರ್ಮಪೀಠ, ಕೂಡಲಸಂಗಮ ಇವರು ಸಾನಿಧ್ಯ ವಿಹಿಸಿ ಆಶಿರ್ವಚನ ನೀಡಿದರು. ಶರಣವ್ವ ಆ ಹಂಡರಗಲ್ ಅಧ್ಯಕ್ಷರು ಗ್ರಾ.ಪಂ. ಕೂಡಲಸಂಗಮ ಇವರು ಅದ್ಯಕ್ಷತೆ ವಹಿಸಿದರು.ನೆಹರು ಯುವ ಕೇಂದ್ರದ ಉಪನಿದರ್ೇಶಕ ಡಿ.ದಯಾನಂದ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ರಾಜಶ್ರೀ ಅಗಸರ, ಜಿಟಿಟಿಸಿಯ ಪ್ರಾಂಶುಪಾಲ ಯಲ್ಲಪ್ಪ ಸವದತ್ತಿ, ಪಿಡಿಈ ಈಶ್ವರ ಹುದ್ದಾರ, ಭಾರತ ಸೇವಾದಳದ ಜಿಲ್ಲಾ ಸಂಘಟಕ ಮಹೇಶ ಪತ್ತಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಒಟ್ಟು 3 ದಿನಗಳ ಈ ಕಾರ್ಯಕ್ರಮದಲ್ಲಿ 50 ಶಿಬಿರಾಥರ್ಿಗಳು ಉತ್ತರ ಕರ್ನಾಟಕದ 10 ಜಿಲ್ಲೆಗಳಿಂದ ಭಾಗವಹಿಸಿದ್ದಾರೆ. ನೆಹರು ಯುವ ಕೇಂದ್ರ ಲೆಕ್ಕಾಧಿಕಾರಿ ರಾಮರಾವ ಬಿರಾದಾರ ಸ್ವಾಗತಿಸಿದರು, ಬಸವರಾಜ ರಾಘಾಪುರ ವಂದಿಸಿದರು. ಕಡ್ಲಿಮಟ್ಟಿ ನಿರೂಪಿಸಿದರು