ಇಂಧನವನ್ನು ಜಿಎಸ್‍ಟಿ ವ್ಯಾಪ್ತಿಗೆ ಸೇರಿಸಿ: ಕೇಂದ್ರಕ್ಕೆಲಾಜಿಸ್ಟಿಕ್ಸ್ ವಲಯ ಒತ್ತಾಯ

ನವದೆಹಲಿ, ಜ 29 ,ಕೇಂದ್ರ ಆಯವ್ಯಯ ಮಂಡನೆಯ ದಿನ ಹತ್ತಿರವಾಗುತ್ತಿರುವ ಬೆನ್ನಲ್ಲೇ, ಆರ್ಥಿಕ ಬೆಳವಣಿಗೆಯ ಆವೇಗವನ್ನು ಕಾಪಾಡಿಕೊಳ್ಳಲು ಹಾಗೂ ಮತ್ತಷ್ಟು ಹೆಚ್ಚಿಸಲು, ಬಜೆಟ್ ಮೂಲಕ ತ್ರೈಮಾಸಿಕದಲ್ಲಿ ಹೆಚ್ಚಿನ ನಿರೀಕ್ಷೆ ಹೊಂದಿರುವ ಲಾಜಿಸ್ಟಿಕ್ಸ್ ವಲಯವು ಇಂಧನವನ್ನು ಜಿಎಸ್‍ಟಿ ವ್ಯಾಪ್ತಿಗೆ ತರುವಂತೆ ಒತ್ತಾಯಿಸಿದೆ.

 ಈ ಕುರಿತು ಮಹೀಂದ್ರಾ ಲಾಜಿಸ್ಟಿಕ್ಸ್ ಲಿಮಿಟೆಡ್ ಮುಖ್ಯ ಹಣಕಾಸು ಅಧಿಕಾರಿ ಯೋಗೇಶ್ ಪಟೇಲ್ ಮಾತನಾಡಿ, ಜಿಎಸ್ಟಿ ಅಡಿಯಲ್ಲಿ ಇಂಧನವನ್ನು ತರಲು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ ಹಾಗೂ ಜಿಎಸ್‍ಟಿಯನ್ನು ಮತ್ತಷ್ಟು ಸರಳಗೊಳಿಸುವ ನಿರೀಕ್ಷೆಯಿದೆ” ಎಂದಿದ್ದಾರೆ. "" ಹಣಕಾಸು ಸಚಿವರು ಕಾರ್ಮಿಕ ಕಾನೂನುಗಳನ್ನು ಸುವ್ಯವಸ್ಥಿತಗೊಳಿಸಬೇಕು, ನಿರ್ಬಂಧಿತ ಕಾನೂನುಗಳನ್ನು ತೆಗೆದುಹಾಕಬೇಕೆಂದು ನಾವು ಬಯಸುತ್ತೇವೆ.  ಅಲ್ಲದೆ ಸರ್ಕಾರವು ನೀತಿಗಳನ್ನು ಮರುರೂಪಿಸುವ ಅಗತ್ಯವಿದೆ.  ಪರೋಕ್ಷ ತೆರಿಗೆ ಕಾನೂನುಗಳಲ್ಲಿ ಮಾಡಿದ ಬದಲಾವಣೆಗಳನ್ನು ಖಂಡಿತವಾಗಿಯೂ ಪ್ರಶಂಸಿಸಲಾಗಿದ್ದರೂ, ಅನುಷ್ಠಾನದ ನಂತರ ಉಳಿದಿರುವ ಸಮಸ್ಯೆಗಳನ್ನು ಬಗೆಹರಿಸುವ ಅವಶ್ಯಕತೆಯಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

 ಟ್ರಕ್‌ಗಳಿಗೆ ಫಿಟ್‌ನೆಸ್ ಪ್ರಮಾಣಪತ್ರವು ಪ್ರತಿವರ್ಷ ಇರಬಾರದು ಆದರೆ ಪ್ರತಿ ಮೂರು ವರ್ಷಗಳಿಗೊಮ್ಮೆ ಆರು ವರ್ಷದ ಹಳೆಯ ಟ್ರಕ್‌ಗಳಿಗೆ ಮತ್ತು ಅದರ ನಂತರ ಪ್ರತಿ ಎರಡು ವರ್ಷಗಳಿಗೊಮ್ಮೆ ಇರಬೇಕು ಎಂದ ಅವರು, ಹೊಸ ವಾಹನಗಳಿಗೆ, ಇದನ್ನು ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ನೀಡುವ ಅಗತ್ಯವಿಲ್,  ಮೂಲ ಸಲಕರಣೆಗಳ ತಯಾರಕರು (ಒಇಎಂ) ನೀಡಬೇಕು. ಫ್ಯಾಕ್ಟರಿ ಪರವಾನಗಿ ಮಾನದಂಡಗಳನ್ನು ಸರಳೀಕೃತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.