ಶರಣರ ವಚನಗಳ ಸಾಹಿತ್ಯದ ಸಾರ ಜೀವನದಲ್ಲಿ ಅಳವಡಿಸಿಕೊಳ್ಳಿ: ಎಡಿಸಿ


ಲೋಕರ್ಶನ ವರದಿ

ಬಳ್ಳಾರಿ28: ಶರಣ ಸಮುದಾಯದ ವಚನಗಳ ಸಾಹಿತ್ಯವನ್ನು  ಅಭ್ಯಾಸ ಮಾಡುವುದರ ಮೂಲಕ ಅವುಗಳಲ್ಲಿನ ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ ಹೇಳಿದರು. ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಏರ್ಪಡಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಾತಿ,ವರ್ಗ ಮತ್ತು ವರ್ಣಗಳನ್ನು ಮೀರಿ ಸಮ ಸಮಾಜದ ನಿಮರ್ಾಣಕ್ಕೆ ಶರಣರು ಶ್ರಮಿಸಿದ್ದರು. ಅವರ ರಚಿಸಿದ ವಚನ ಸಾಹಿತ್ಯ ಇಂದಿಗೂ ಜೀವಂತವಾಗಿ ಉಳಿದಿದೆ ಎಂದು ಹೇಳಿದ ಅಪರ ಜಿಲ್ಲಾಧಿಕಾರಿಗಳು, ಬಸವಣ್ಣನವರ ಸಮಕಾಲಿನರಾದ ಹಡಪದ ಅಪ್ಪಣ್ಣನವರು ಹಾಗೂ ಅವರ ಧರ್ಮಪತ್ನಿ ಶಿವಶರಣೆ ಲಿಂಗಮ್ಮ ಅವರು ಅನೇಕ ವಚನಗಳನ್ನು ರಚಿಸಿದ್ದಾರೆ. 

ಅಪ್ಪಣ್ಣನವರ 243 ಮತ್ತು ಲಿಂಗಮ್ಮನವರ 113 ವಚನಗಳು ಲಭ್ಯವಾಗಿದ್ದು, ಅವುಗಳನ್ನು ಅಧ್ಯಯನ ಮಾಡಬೇಕು ಎಂದರು. ರಾಜ್ಯ ಸರಕಾರ ಇದೇ ಮೊದಲ ಬಾರಿಗೆ ಜಯಂತಿ ಆಚರಣೆಗೆ ನಿರ್ಧರಿಸಿರುವುದು ಅತ್ಯಂತ ಸಂತಸ ತಂದಿದೆ ಎಂದರು. ಹಡಪದ ಸಮುದಾಯದವರು ಸಂಘಟಿತರಾಗಬೇಕು ಮತ್ತು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು ಎಂದು ಅವರು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ನಿಕಟಪೂರ್ವದ ಅಧ್ಯಕ್ಷ ನಿಷ್ಠಿರುದ್ರಪ್ಪ ಅವರು ಶಿವಶರಣ ಹಡಪದ ಅಪ್ಪಣ್ಣ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅಖಿಲ ಕನರ್ಾಟಕ ಹಡಪದ(ಕ್ಷೌರಿಕ) ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ.ನಾಗರಾಜ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ರಾಧಾ ಧರಪ್ಪ ನಾಯಕ್, ಜಿಪಂ ಉಪಕಾರ್ಯದಶರ್ಿ  ಭಜಂತ್ರಿ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿದರ್ೇಶಕ ಬಿ.ಕೆ.ರಾಮಲಿಂಗಪ್ಪ, ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಹನುಮಂತ, ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿದರ್ೇಶಕ ಗಂಗಣ್ಣ,  ಹಡಪದ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಲಿಂಗಪ್ಪ, ಸಮುದಾಯದ ಮುಖಂಡರಾದ ಯರ್ರಿಸ್ವಾಮಿ,ಗುರುಸಿದ್ದಪ್ಪ ಸೇರಿದಂತೆ ಸಮುದಾಯದ ಮುಖಂಡರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ ಬಿ.ನಾಗರಾಜ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ನಿರೂಪಿಸಿದರು.