ರಾಯಬಾಗ 27: ಛತ್ರಪತಿ ಶಾಹುಮಹಾರಾಜರು ದೀನ ದಲಿತರ ಹಾಗೂ ಹಿಂದುಳಿದ ವರ್ಗಗಳು ಸೇರಿದಂತೆ ಶೋಷಿತ ಸಮುದಾಯಗಳ ಕಲ್ಯಾಣಕ್ಕೆ ಶ್ರಮಿಸಿದ್ದಾರೆ. ಎಲ್ಲ ಶೋಷಿತ ಸಮುದಾಯದವರು ಅವರ ತತ್ವ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಶಾಸಕ ಡಿ.ಎಮ್.ಐಹೊಳೆ ಕರೆ ನೀಡಿದರು.
ಗುರುವಾರ ಪಟ್ಟಣ ಅಂಬೇಡ್ಕರ್ ವೃತ್ತದಲ್ಲಿ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಆಶ್ರಯದಲ್ಲಿ ಬಹುಜನ ರಕ್ಷಣಾ ವೇದಿಕೆಯ ವತಿಯಂದ ಹಮ್ಮಿಕೊಂಡಿದ್ದ ಛತ್ರಪತಿ ಶಾಹುಮಹಾರಾಜರ 144ನೇ ಜಯಂತ್ಯೋತ್ಸವವನ್ನು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವ ಧುರೀಣ ತ್ರಿಕಾಲ ಪಾಟೀಲ ಅವರು ಅಂಬೇಡ್ಕರ ವೃತ್ತದಲ್ಲಿ ಛತ್ರಪತಿ ಶಾಹುಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಮೆರವಣಿಗೆಯಲ್ಲಿ ಆಕರ್ಷಕ ಕಲಾತಂಡಗಳು ಭಾಗವಹಿಸಿ ಸಾರ್ವಜನಿಕರ ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಪಟ್ಟಣದ ಮಾಯಾ ಸಂಗೀತ ನೃತ್ಯ ನಾಟಕ ಅಕಾಡೆಮೆಯಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಬೆಳಗಾವಿ ಕನ್ನಡ ಸಂಸ್ಕೃತಿ ಇಲಾಖೆ ಉಪನಿದರ್ೇಶಕ ಶ್ರೀಶೈಲ ಕರಿಶಂಕರಿ, ಉಪನ್ಯಾಸಕ ಡಾ.ಅರುಣ ಕಾಂಬಳೆ, ಮಲ್ಲೇಶ ಚವ್ಹಾಣ, ಅಶೋಕ ಭೋಸಲೆ, ಸಾಗರ ಪರಾಂಜಪೆ, ವೀರಪಾಕ್ಷ ಮಾದರ, ರಸೂಲ ಮೋಮಿನ, ರಾಮಚಂದ್ರ ಕಾಂಬಳೆ, ಉಮೇಶ ಮನೋಜೆ, ಶ್ಯಾಮ ಅವಳೆ, ದಿಲೀಪ ಪಾಯನ್ನವರ, ಸತ್ತಾರ ಮುಲ್ಲಾ ಸೇರಿದಂತೆ ಅನೇಕರು ಇದ್ದರು.