ರಾಯಚೋಟಿಯಲ್ಲಿ ಶ್ರೀಶೈಲ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ

Adappallakki Mahotsava of Srishaila Jagadguru at Rayachoti

ರಾಯಚೋಟಿಯಲ್ಲಿ ಶ್ರೀಶೈಲ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ 

ಹುಬ್ಬಳ್ಳಿ   1  : ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಶ್ರೀಶೈಲ ಸೂರ್ಯ ಪೀಠದ ಶ್ರೀಜಗದ್ಗುರು ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವ ಶನಿವಾರ ಆಂಧ್ರ​‍್ರದೇಶದ ರಾಯಚೋಟಿ ನಗರದಲ್ಲಿ ವಿವಿಧ ಜನಪದ ವಾದ್ಯ ಮೇಳಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.  

ರಾಯಚೋಟಿ ಕ್ಷೇತ್ರದ ಶ್ರೀಭದ್ರಕಾಳಿ ಸಮೇತ ವೀರಭದ್ರ ದೇವರ 2025ನೆಯ ವರ್ಷದ ಬ್ರಹ್ಮೋತ್ಸವದ ಅಂಗವಾಗಿ ಕರ್ನಾಟಕದ ಭಕ್ತ ಸಮೂಹ ಹಮ್ಮಿಕೊಂಡಿದ್ದ ಈ ಅಡ್ಡಪಲ್ಲಕ್ಕಿ ಮಹೋತ್ಸವವು ರಾಯಚೋಟಿ ನಗರದ ಶಿವ-ಪಾರ್ವತಿಯರ ದೇವಾಲಯದಿಂದ ಆರಂಭಗೊಂಡಿತು. ಸುಮಾರು 250ಕ್ಕೂ ಹೆಚ್ಚು ಮಹಿಳೆಯರ ಪೂರ್ಣಕುಂಭಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀವೀರಭದ್ರ ದೇವರ ದೇವಾಲಯದಲ್ಲಿ ಸಂಪನ್ನಗೊಂಡಿತು. ದೇವಾಲಯಕ್ಕೆ ಆಗಮಿಸಿದ ಶ್ರೀಶೈಲ ಶ್ರೀಜಗದ್ಗುರುಗಳು ಶ್ರೀವೀರಭದ್ರ ದೇವರಿಗೆ ಹಾಗೂ ಶ್ರೀಭದ್ರಕಾಳಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿದರು.  

ಚಿಕ್ಕಮಗಳೂರು ಜಿಲ್ಲೆ ಬೇರುಗಂಡಿ ಬೃಹನ್ಮಠದ ಶ್ರೀರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಜಮಖಂಡಿ ಕಲ್ಯಾಣಮಠದ ಶ್ರೀಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ ಹಾಗೂ ರಾಯಚೂರು ಜಿಲ್ಲೆ ನೀಲಗಲ್ಲ ಬೃಹನ್ಮಠದ ಶ್ರೀರೇಣುಕ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಕಲಬುರ್ಗಿಯ ಸಿ.ಎಂ. ಶಿವಶರಣಪ್ಪ ಹುಬ್ಬಳ್ಳಿ-ಧಾರವಾಡದ ಗೀರೀಶಕುಮಾರ ಬುಡರಕಟ್ಟಿಮಠ, ಪಿ.ಎಂ. ಚಿಕ್ಕಮಠ, ರಮೇಶ ಉಳ್ಳಾಗಡ್ಡಿ ವಕೀಲ ಪ್ರಕಾಶ ಅಂದಾನಿಮಠ ಎಂ.ಐ. ದೇಶನೂರ ರಾಚಯ್ಯ ಮಠಪತಿ ರಮೇಶಕುಮಾರ ಬುಡರಕಟ್ಟಿಮಠ ಗೋವಾದ ಶಿವು ಹಿರೇಮಠ ದೇವಾಲಯ ಟ್ರಸ್ಟ್‌ ಕಾರ್ಯನಿರ್ವಾಹಕ ಅಧಿಕಾರಿ ಡಿ.ವ್ಹಿ. ರಮಣರೆಡ್ಡಿ ಸೇರಿದಂತೆ ಇತರರು ಇದ್ದರು.