ಲೋಕದರ್ಶನ ವರದಿ
ಗೋಕಾಕ, 6: ಪಂಚಭೂತಗಳಿಂದ ಸೃಷ್ಠಿಯಾದ ನಿಸರ್ಗದಲ್ಲಿ ಜೀವಿಗಳ ಆರೋಗ್ಯ ರಕ್ಷಣೆಗಾಗಿ ಹಲವಾರು ಕೊಡುಗೆಗಳನ್ನು ನಿಸರ್ಗ ನೀಡಿದೆ ಎಂದು ಬಿಜೆಪಿ ಮುಖಂಡ ಅಶೋಕ ಪೂಜೇರಿ ಹೇಳಿದರು.
ರವಿವಾರದಂದು ನಗರದ ಮುಪ್ಪಯ್ಯನ ಮಠದಲ್ಲಿ ವೀರಶೈವ ಲಿಂಗಾಯತ ಸೇವಾ ವಿಕಾಸ ವೇದಿಕೆಯವರು ದಿವಂಗತ ಗಂಗಪ್ಪಣ್ಣ ತಾಂವಶಿ ಇವರ ಸ್ಮರಣಾರ್ಥ ರಾಜ್ಯಸ್ಥಾನದ ಡಾ|| ರಾಮಮನೋಹರ ಲೋಹಿಯಾ ಆರೋಗ್ಯ ಜೀವನ ಸಂಸ್ಥಾನದ ಸಹಯೋಗದೊಂದಿಗೆ ಹಮ್ಮಿಕೊಂಡ ಆಕ್ಯೂಪ್ರೇಶರ್ ಮತ್ತು ಸುಜೋಕ್ ಥೆರಪಿ ಚಿಕಿತ್ಸಾ ಶಿಬಿರದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ರೋಗ ಹಾಗೂ ಅದಕ್ಕೆ ಪರಿಹಾರವನ್ನು ಭಗವಂತನೆ ರೂಪಿಸಿದ್ದು ಅದನ್ನು ನಮ್ಮ ಪುರಾತನ ವೈದ್ಯಕೀಯ ಶಾಸ್ತ್ರದಲ್ಲಿ ಆಚರಣೆಗೆ ತರಲಾಗಿದೆ. ಇಂದು ತ್ವರಿತ ಆರೋಗ್ಯ ಸುಧಾರಣೆಗೆ ಮಹತ್ವ ನೀಡುತ್ತಿದ್ದು ಅದೇ ಅಂತಿಮವಾಗದೇ ನಮ್ಮ ಪುರಾತನ ಆರೋಗ್ಯ ಸುಧಾರಣಾ ಪದ್ಧತಿಯನ್ನು ಆಚರಣೆಗೆ ತರುವಂತೆ ಕರೆ ನೀಡಿದರು.
ರಾಮಮನೋಹರ ಲೋಹಿಯಾ ಆರೋಗ್ಯ ಜೀವನ ಸಂಸ್ಥಾನದ ಡಾ|| ಗೋವಿಂದ ಮಾತನಾಡುತ್ತ ಸಂಸ್ಥೆ ದೇಶಾಧ್ಯಂತ 40 ತಂಡಗಳೊಂದಿಗೆ ಇಂತಹ ಉಚಿತ ಶಿಭಿರಗಳನ್ನು ಆಯೋಜಿಸಿ ಜನತೆಯ ಆರೋಗ್ಯ ರಕ್ಷಣೆಗೆ ಶ್ರಮಿಸುತ್ತಿದ್ದು ಇದು ಔಷಧಿ ರಹಿತ ಚಿಕಿತ್ಸೆಯಾಗಿದ್ದು ಇದರಿಂದ ಮದುಮೇಹ, ಬೆನ್ನುಹುರಿ, ಮೊನಕಾಲು ನೋವು, ಬಿಪಿ ಸೇರಿದಂತೆ ಹಲವಾರು ರೋಗಗಳಿಗೆ ಮುಕ್ತವಾಗಬಹುದು ಎಂದು ಹೇಳಿದರು.
ಕೆಎಲ್ಇ ಸಂಸ್ಥೆಯ ನಿದರ್ೇಶಕ ಜಯಾನಂದ ಮುನವಳ್ಳಿ ಮಾತನಾಡುತ್ತ ನಗರದ ಕೆಎಲ್ಇ ಆಸ್ಪತ್ರೆಯಲ್ಲಿ ಪಂಚಕರ್ಮ ಹಾಗೂ ನ್ಯಾಚುರೋಪಥಿ ಚಿಕಿತ್ಸೆಗಳನ್ನು ಪ್ರಾರಂಭಿಸಲಾಗುವದೆಂದು ತಿಳಿಸಿದರು.
ಮುಪ್ಪಯ್ಯನಮಠದ ಶ್ರೀ ರಾಚೋಟೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವೇದಿಕೆಯ ಮೇಲೆ ಗಣ್ಯರಾದ ಎಮ್ ಡಿ ಚುನಮರಿ, ಮಹಾಂತೇಶ ತಾಂವಶಿ, ರಾಜು ಶೆಟ್ಟರ, ಡಾ.ಜಯಸಿಂಗ, ಡಾ.ನವದೀಪ ಸಿಂಗ, ವೀರಶೈವ ಲಿಂಗಾಯತ ಸೇವಾ ವಿಕಾಸ ವೇದಿಕೆಯ ಅಧ್ಯಕ್ಷ ಪ್ರಶಾಂತ ಕುರಬೇಟ, ಪದಾಧಿಕಾರಿಗಳಾದ ಬಸವರಾಜ ಗೋಡಚಿನಮಲ್ಕಿ, ಮಲ್ಲಿಕಾಜರ್ುನ ಮಹಾಜನ, ಸೋಮನಾಥ ಮಗದುಮ್, ರವಿ ಕಲಬುಗರ್ಿ, ಅಶೋಕ ಕೊಳವಿ, ಶ್ರೀಕಾಂತ ಗೋಕಾಕ, ವಿಜಯ ಧುಳಾಯಿ, ಪ್ರಮೋದ ಕುರಬೇಟ ಇದ್ದರು. ಪ್ರಕಾಶ ಕಂಬಿ ಸ್ವಾಗತಿಸಿದರು, ಮಹಾಂತೇಶ ವಾಲಿ ವಂದಿಸಿದರು.