ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ: ವಾಹನ ವಶ, ನಟಿಗಾಗಿ ಶೋಧ

ಬೆಂಗಳೂರು,  ಏ.4,  ಲಾಕ್‌ಡೌನ್‌ ಉಲ್ಲಂಘಿಸಿ ಜಾಲಿರೈಡ್‌ಗೆ ಹೋಗಿದ್ದ ಸ್ಯಾಂಡಲ್‌ವುಡ್ ನಟಿ  ಶರ್ಮಿಳಾ ಮಾಂಡ್ರೆ ಸೇರಿ ಇಬ್ಬರು ಇದ್ದ ಕಾರು ಅಪಘಾತಕ್ಕೀಡಾಗಿ ನಟಿ ಸೇರಿ ಇಬ್ಬರು ಗಾಯಗೊಂಡಿರುವ ಘಟನೆ ಹೈಗ್ರೌಂಡ್ಸ್ ಸಂಚಾರ  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಸುಕಿನಲ್ಲಿ ನಡೆದಿದೆ.ಗಾಯಗೊಂಡಿರುವ ನಟಿ  ಶರ್ಮಿಳಾ ಮಾಂಡ್ರೆ(33) ಮತ್ತವರ ಸ್ನೇಹಿತ ಲೋಕೇಶ್ ವಸಂತ್(35)ಅವರು ಪೋರ್ಟಿಸ್  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಪೊಲೀಸರ ತನಿಖೆಗೆ ಹೆದರಿ  ಪರಾರಿಯಾಗಿದ್ದಾರೆ. ಅಪಘಾತಗೊಂಡ ಕಾರನ್ನು ವಶಪಡಿಸಿಕೊಂಡಿರುವ ಹೈಗ್ರೌಂಡ್ಸ್ ಸಂಚಾರ  ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸ್ಯಾಂಡಲ್ ವುಡ್ ನಟಿ ಶರ್ಮಿಳಾ ಮಾಂಡ್ರೆ ವಿರುದ್ಧ ರಾಷ್ಟ್ರೀಯ  ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲೂ ದೂರು ದಾಖಲಿಸಲಾಗುವುದು ಎಂದು ಸಂಚಾರಿ ವಿಭಾಗದ  ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.ಶರ್ಮಿಳಾ  ಮಾಂಡ್ರೆ ಕಾರು ಅಪಘಾತ ಪ್ರಕರಣ ಸಂಬಂಧಿಸಿದಂತೆ ಮಾತನಾಡಿದ ಅವರು, ಇಂದು ಬೆಳಗಿನ ‌ಜಾವ  ಮೂರು ಗಂಟೆ ವೇಳೆಗೆ ಜಾಗ್ವಾರ್ ಕಾರು ಅಪಘಾತಕ್ಕಿಡಾಗಿದೆ. ನಮ್ಮ ಸಿಬ್ಬಂದಿ ಸ್ಥಳಕ್ಕೆ  ಹೋದಾಗ ಕಾರಿನ ಬಳಿ ಯಾರು ಇರಲಿಲ್ಲ ಎಂದು  ತಿಳಿಸಿದ್ದಾರೆ. ಕನ್ನಿಂಗ್  ಹ್ಯಾಮ್ ರಸ್ತೆಯಲ್ಲಿ ಲೋಕೇಶ್ ವಸಂತ, ಶರ್ಮಿಳಾ ಮಾಂಡ್ರೆ ಆಸ್ಪತ್ರೆ ಚಿಕಿತ್ಸೆ  ಪಡೆದಿರುವುದು ಗೊತ್ತಾಗಿದೆ. ಪೊಲೀಸರ ಬಳಿ ಜಯನಗರದಲ್ಲಿ ಅಪಘಾತ ಆಗಿದೆ ಎಂದು ಸುಳ್ಳು  ಹೇಳಿದ್ದಾರೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎನ್​ಡಿಎಂಎ (ರಾಜ್ಯ ವಿಪತ್ತು  ನಿರ್ವಹಣಾ ಕಾಯ್ದೆಯಡಿ) ಕಾಯ್ದೆ ಆಡಿ ಪ್ರಕರಣ ದಾಖಲಿಸಲಾಗಿದೆ ಎಂದರು.
ಸದ್ಯದ  ಮಾಹಿತಿ ಪ್ರಕಾರ ಜಾಲಿ ರೈಡ್​ಗೆ ಬಂದಿದ್ದಾರೆ ಎಂಬುದು ಗೊತ್ತಾಗಿದೆ. ಮೆಡಿಕಲ್ ಸಂಬಂಧ  ಪಾಸ್ ಪಡೆದು ದುರ್ಬಳಕೆ ಮಾಡಿಕೊಂಡಿದ್ದು, ‌ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ.  ಕಾನೂನು ಎಲ್ಲರಿಗೂ ಒಂದೇ. ಲಾಕ್ ಡೌನ್ ಆಗಿದ್ದರೂ ವಾಹನ ಚಲಾಯಿಸಿದ್ದಾರೆ.‌ ಕೂಡಲೇ  ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತೇವೆ ಎಂದರು‌.ಲಾಕ್‌ಡೌನ್  ಉಲ್ಲಂಘಿಸಿ ನಟಿ ಶರ್ಮಿಳಾ ಮಾಂಡ್ರೆ ಅವರು ಸ್ನೇಹಿತ ಲೋಕೇಶ್ ವಸಂತ್ ಜೊತೆ ಮುಂಜಾನೆ ೩ರ  ವೇಳೆ ಜಾಗ್ವಾರ್ ಕಾರಿನಲ್ಲಿ ಜಾಲಿ ರೈಡ್ ಹೋಗಿದ್ದು ಕಾರು ಚಲಾಯಿಸುತ್ತಿದ್ದ ಲೋಕೇಶ್  ವಸಂತ್ ವೇಗವಾಗಿ ಹೋಗುತ್ತಾ ವಸಂತನಗರದ ರೈಲ್ವೆ ಕೆಳ ಸೇತುವೆ ರಸ್ತೆಯ ಪಿಲ್ಲರ್‌ಗೆ  ಡಿಕ್ಕಿ ಹೊಡೆದಿದ್ದಾರೆ.  ಡಿಕ್ಕಿಯ ರಭಸಕ್ಕೆ ಕಾರು ಮುಂಭಾಗ ಸಂಪೂರ್ಣ ಜಖಂಗೊಂಡು  ಶರ್ಮಿಳಾ ಮಾಂಡ್ರೆ ಹಾಗೂ ಸ್ನೇಹಿತ ಲೋಕೇಶ್ ವಸಂತ್ ಗಾಯಗೊಂಡಿದ್ದಾರೆ ಅಪಘಾತದ ನಂತರ  ಶರ್ಮಿಳಾ ಮಾಂಡ್ರೆ ಜಯನಗರ, ಜೆಪಿನಗರ ಬಳಿ ಅಪಘಾತ ನಡೆದಿದೆ ಎಂದು ನಾಟಕ ಮಾಡಲು  ಮುಂದಾಗಿದ್ದು ಸ್ಥಳಕ್ಕೆ ಧಾವಿಸಿದ ಹೈಗ್ರೌಂಡ್ಸ್ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದಾಗ  ವರಸೆ ಬದಲಿಸಿದ್ದಾರೆ.
ನಟಿ ಶರ್ಮಿಳಾ ಮಾಂಡ್ರೆ ಅವರು ಸ್ನೇಹಿತ ಲೋಕೇಶ್ ವಸಂತ್  ಇಬ್ಬರು ಮದ್ಯಪಾನ ಮಾಡಿದ್ದ ಶಂಕೆಯಿದ್ದು ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ  ಕೈಗೊಳ್ಳಲಾಗಿದೆ ಎಂದು ನಾರಾಯಣ್ ತಿಳಿಸಿದ್ದಾರೆ.
ಅಪಘಾತದಲ್ಲಿ ಶರ್ಮಿಳಾ ಮಾಂಡ್ರೆ  ಮುಖಕ್ಕೆ ಗಾಯವಾಗಿದೆ. ಇನ್ನೂ ಕಾರಿನಲ್ಲಿ ಇದ್ದ ಮತ್ತೊಬ್ಬ ಸ್ನೇಹಿತನಿಗೂ ಕೂಡ  ಗಾಯವಾಗಿದ್ದು, ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತದ ಬಗ್ಗೆ ಮುಚ್ಚಿಡುವುಕ್ಕೆ  ಯತ್ನಿಸುತ್ತಿದ್ದಾರೆ. ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ಬಳಿಕ,  ಪರಾರಿಯಾಗಿದ್ದು, ತಲೆ ಮರೆಸಿಕೊಂಡಿರುವ ನಟಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.