ನನ್ನ ಮುಂದೆ ನಟ ಅಲೋಕ್ ನಾಥ್ ಏಕಾಏಕಿ ಬಟ್ಟೆ ಬಿಚ್ಚಿ ದೌರ್ಜನ್ಯಕ್ಕೆ ಮುಂದಾದ- ಮಹಿಳೆಯೊಬ್ಬಳ ಆರೋಪ

ನವದೆಹಲಿ: ಲೇಖಕಿ ಹಾಗೂ ನಿರ್ಮಾಪಕಿ ವಿಂತಾ ನಂದಾ  ಹಿರಿಯ ನಟ ಅಲೋಕ್ ನಾಥ್ ಮೇಲೆ ಲೈಂಗಿಕ  ದೌರ್ಜನ್ಯದ

ಆರೋಪ ಮಾಡಿದ  ನಂತರ ಈಗ ಮತ್ತೊಬ್ಬ ಮಹಿಳೆ ಈಗ ಈ ನಟನ ವಿರುದ್ದ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

ಮಿಡ್ ಡೇ ಜೊತೆಗಿನ ವಿಶೇಷ ಸಂದರ್ಶನದಲ್ಲಿ, ಸಲ್ಮಾನ್ ಖಾನ್ ಅವರ 1999 ರ ಚಲನಚಿತ್ರ 'ಹಮ್ ಸತ್ ಸತ್ ಹೈ' ತಂಡದಲ್ಲಿ

ಕಾರ್ಯ ನಿರ್ವಹಿಸಿದ್ದ ಮಹಿಳೆ ಆಗ ಅಲೋಕ್ ನಾಥ್ ಸೆಟ್ನಲ್ಲಿ ಲೈಂಗಿಕ ಕಿರುಕುಳನೀಡಿದ್ದರು ಎಂದು ಆವರು ತಿಳಿಸಿದ್ದಾರೆ. ಸೂರಜ್

ಬರ್ಜತ್ಯಾ ಚಿತ್ರದ ಚಿತ್ರೀಕರಣದ ಸಮಯದಲ್ಲಿ ರಾತ್ರಿ ವೇಳೆ ಅಲೋಕ್ ನಾಥ್ ತಮ್ಮ ಎದುರಿಗೆ  ಬಟ್ಟೆ ಬಿಚ್ಚಿ ಅಸಭ್ಯವಾಗಿ

ವರ್ತಿಸಿದ್ದಾನೆ ಎಂದು  ಅವರು ಆರೋಪಿಸಿದ್ದಾರೆ.

ಮಿಡ್ ಡೇ ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿರುವ ಮಹಿಳೆ," ಅವರ ಕೈಹಿಡಿತದಿಂದ ಬಿಡಿಸಿಕೊಂಡು ರೂಮಿಗೆ ಓಡುತ್ತಿರುವುದು

ನನಗೆ ಇನ್ನು ನೆನಪಿದೆ ಎಂದು ಹೇಳಿದ್ದಾರೆ."

ಅಂದು ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಅವರಿಗೆ ಕಾಸ್ಟೂಮ್ ಗಳನ್ನು ತಂದಿದ್ದರು ಆದರೆ ಆಗ ನಟ ಅಲೋಕ ನಾಥ್  ಏಕಾಏಕಿ

ತಮ್ಮ ಬಟ್ಟೆಗಳನ್ನು ಬಿಚ್ಚಿ ಅಸಭ್ಯವಾಗಿ ವರ್ತಿಸಿ ದೌರ್ಜನ್ಯವೆಸಗಿದರು ಎಂದು ಹೇಳಿದ್ದಾರೆ. 

ಅಲ್ಲದೆ ಈ ವಿಷಯವನ್ನು ಬರ್ತಜ್ಯ ಅವರಿಗೆ ಹೇಳಲು ತಮಗೆ ಧೈರ್ಯವಿರಲಿಲ್ಲ ಏಕೆಂದರೆ ಅಲೋಕ್ ನಾಥ್  ಬರ್ತ್ಯಜ್ಯ ಜೊತೆ

ಉತ್ತಮ ಸಂಬಂಧವನ್ನು ಹೊಂದಿದ್ದರು ಎನ್ನುವ ಕಾರಣಕ್ಕಾಗಿ ಹೇಳಲಿಲ್ಲ ಎಂದು ಅವರು ತಿಳಿಸಿದರು