ಲೋಕದರ್ಶನ ವರದಿ
ಮೋಳೆ 07: ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ಎಡೆಬಿಡದೇ ಬಿರುಸಿನ ಪ್ರಚಾರ ನಡೆಸಿದ್ದ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯಥರ್ಿ ರಾಜು ಕಾಗೆ ಶುಕ್ರವಾರ ರಿಲ್ಯಾಕ್ಸ್ ಮೂಡ್ನಲ್ಲಿ ಕಾಲ ಕಳೆದರು. ಗುರುವಾರವಷ್ಟೇ ಕ್ಷೇತ್ರದ ಉಪಚುನಾವಣೆಗೆ ಮತದಾನ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ರಾಜ್ಯದಲ್ಲಿಯೇ ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ನ ರಾಜು ಕಾಗೆ ಹಾಗೂ ಬಿಜೆಪಿ ಶ್ರೀಮಂತ ಪಾಟೀಲ ಮಧ್ಯೆ ತುರುಸಿನ ಪೈಪೋಟಿ ಏರ್ಪಟಿದ್ದು, ಎರಡೂ ಪಕ್ಷಗಳು ಕ್ಷೇತ್ರವನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿವೆ. ಹೀಗಾಗಿ, ಪ್ರಚಾರದ ಭರಾಟೆ ಬಿರುಸಾಗಿ ನಡೆದಿತ್ತು.
ಆದರೆ, ಗುರುವಾರ ಮತದಾನ ಮುಗಿದಿದ್ದು, ಶುಕ್ರವಾರ ರಾಜು ಕಾಗೆಯವರು ಶುಕ್ರವಾರ ಬೆಳಿಗ್ಗೆ ಕುಟುಂಬದ ಸದಸ್ಯರೊಂದಿಗೆ ಸಂತಸದ ಸಮಯ ಕಳೆದರು. ಮನೆಯವರೊಂದಿಗೆ ಸೇರಿ ಬೆಳಿಗ್ಗೆ ಉಪಹಾರ ಸೇವಿಸಿದ ನಂತರ ಕೆಲ ಸಮಯ ಹರಟೆ ನಡೆಸಿ ಹಾಸ್ಯ ಚಟಾಕಿಗಳನ್ನು ಹಾರಿಸಿದರು.
ಬಳಿಕ ಮನೆಗೆ ಆಗಮಿಸಿದ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ಭಿಮಾನಿಗಳು ಹಾಗೂ ಮುಖಂಡರನ್ನು ಭೇಟಿಯಾದರು.
ಈ ಸಂದರ್ಭದಲ್ಲಿ ಚುನಾವಣೆ ಸಂದರ್ಭದಲ್ಲಿನ ಪ್ರಚಾರ, ಜಾತಿ ಲೆಕ್ಕಾಚಾರ, ಯಾವ್ಯಾವ ಮತಗಟ್ಟೆಯಲ್ಲಿ ಎಷ್ಟೆಷ್ಟು ಮತಗಳು ಬರಬಹುದೆಂಬ ಲೆಕ್ಕಾಚಾರ ಕುರಿತೂ ಕಾರ್ಯಕರ್ತರೊಂದಿಗೆ ಚಚರ್ೆ ನಡೆಸಿದರು.
ಶುಕ್ರವಾರ ಕಾರ್ಯಕರ್ತರು, ಮುಖಂಡರ ಜೊತೆಗೆ ನಡೆಸಿದ ಸಮಾಲೋಚನೆ ಸಂದರ್ಭದಲ್ಲಿ ಹರ್ಷಚಿತ್ತರಾಗಿಯೇ ಕಂಡು ಬಂದ ರಾಜು ಕಾಗೆ, ಗೆಲುವು ಖಚಿತ ಎಂಬುದನ್ನು ಆತ್ಮವಿಶ್ವಾಸದಿಂದಲೇ ಹೇಳಿಕೊಂಡರು.
ಮುಖಂಡರಾದ ರವೀಂದ್ರ ಗಾಣಿಗೇರ,ತಾತ್ಯಾಸಾಬ ಕುಚನುರೆ, ಅಶೋಕ ಗಾಣಿಗೇರ, ಗಜಾನನ ಯರಂಡೋಲಿ, ಸುರೇಶ ಗಾಣಿಗೇರ, ಸಂಜಯ ಭಿರಡಿ, ಆದಿನಾಥ ದಾನೊಳ್ಳಿ, ಬಾಹುಬಲಿ ಕುಸನಾಳೆ, ಸಂಜು ಕುಸನಾಳೆ, ಅರುಣ ಗಾಣಿಗೇರ, ರಾಹುಲ ಕಟಗೇರಿ, ಗುರುರಾಜ ಮಡಿವಾಳರ, ಮುರಗೆಪ್ಪ ಮಹಾಜನ, ಮಲ್ಲಪ್ಪ ಪಾಟೀಲ,ವಿಶ್ವನಾಥ ನಾಮದಾರ, ಅನೀಲ ಸತ್ತಿ, ಬಸನಗೌಡ ಪಾಟೀಲ (ಬೊಮಗಮನಾಳ) ಕಾಮಗೌಡ ಪಾಟೀಲ, ಸೇರಿದಂತೆ ಕ್ಷೇತ್ರದ ಹಲವಾರು ಗ್ರಾಮಗಳಿಂದ ಸಾವಿರಾರು ಕಾರ್ಯಕರ್ತರು ತಂಡೋಪತಂಡವಾಗಿ ಬಂದು ಬೆಟ್ಟಿಯಾಗಿ ಚುನಾವಣೆಯ ಅನುಭವಗಳನ್ನು ಹಂಚಿಕೊಂಡರು.