ಬೈಲಹೊಂಗಲ- ಬರುವ ಸ್ಥಳಿಯ ಸಂಸ್ಥೆಗಳ ಚುನಾವಣೆ, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯಥರ್ಿಗಳ ಗೆಲುವಿಗಾಗಿ ಪ್ರತಿಯೊಬ್ಬ ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ ಹೇಳಿದರು.
ಅವರು ಬುಧವಾರ ಪಟ್ಟಣದ ತಮ್ಮ ಕಚೇರಿಯಲ್ಲಿ ಮಂಡಲ ಕಾರ್ಯಕಾರಣಿ ಉದ್ಘಾಟಿಸಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದರ ಸಕರ್ಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ನೇರವಾಗಿ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು.
ದೇಶದ ಗಮನ ಸೆಳೆದಿರುವ ಬಿಜೆಪಿ ಮುಂಬರುವ ದಿನಗಳಲ್ಲಿ ಪ್ರತಿಯೊಂದು ಚುನಾವಣೆಗಳಲ್ಲಿ ಜಯಭೇರಿ ಬಾರಿಸುವಂತೆ ಕಾರ್ಯಕರ್ತರು ಬೂತಮಟ್ಟದಿಂದ ಸನ್ನಧರಾಗಬೇಕೆಂದರು.
ಪ್ರಸ್ತುತ ಎದುರಾಗಿರುವ ಪಟ್ಟಣದ ಪುರಸಭೆ ಚುನಾವಣೆಯ 29 ಸ್ಥಾನಗಳ ಪೈಕಿ ಕನಿಷ್ಠ 20 ಸ್ಥಾನಗಳನ್ನು ಬಿಜೆಪಿ ಅಭ್ಯಥರ್ಿಗಳನ್ನು ಗೆಲ್ಲಿಸಲು ಈಗಾಗಲೇ ಕಾರ್ಯತಂತ್ರವನ್ನು ರೂಪಿಸಿದ್ದು ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. 29 ವಾರ್ಡಗಳಲ್ಲಿರುವ ಆಕಾಂಕ್ಷಿಗಳ ಹೆಸರನ್ನು ಸಲ್ಲಿಸುವಂತೆ ಸೂಚಿಸಲಾಗಿದ್ದು ಸೂಕ್ತ ಅಭ್ಯಥರ್ಿಗಳನ್ನು ಆಯ್ಕೆ ಮಾಡಿ ಟಿಕೇಟು ನೀಡಲಾಗುವದು.
ಕಾರ್ಯಕರ್ತರು ಎಲ್ಲ ಅಭ್ಯಥರ್ಿಗಳ ಗೆಲುವಿಗೆ ಶ್ರಮಿಸಿ ಈ ಬಾರಿ ಪುರಸಭೆಯಲ್ಲಿ ಪಕ್ಷ ಅಧಿಕಾರಕ್ಕೆ ತರಲು ಕಾರ್ಯಕರ್ತರು ಪ್ರಯತ್ನಿಸಬೇಕು ಎಂದರಲ್ಲದೆ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯಥರ್ಿಯನ್ನು ಜಯಶಾಲಿ ಮಾಡಿ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಅಧಿಕಾರದ ಗದ್ದುಗೆಗೆ ಏರುವಂತೆ ಮಾಡಬೇಕೆಂದರು.
ಜಿಲ್ಲಾ ಪ್ರಧಾನ ಕಾರ್ಯದಶರ್ಿ ಚಂದ್ರಶೇಖರ ಚಿನಿವಾಲರ, ಮಂಡಲ ಅಧ್ಯಕ್ಷ ಮಡಿವಾಳಪ್ಪ ಹೋಟಿ ಮಾತನಾಡಿ, ಪುರಸಭೆ ಹಾಗೂ ಲೋಕಸಭೆ ಚುನಾವಣೆಗಳು ಬಹುಮುಖ್ಯವಾಗಿದ್ದು ಪಕ್ಷದ ಅಭ್ಯಥರ್ಿಗಳ ಗೆಲುವಿಗಾಗಿ ಪ್ರತಿಯೊಬ್ಬರು ಶ್ರಮಿಸಬೇಕಿದೆ ಎಂದರು.
ವೇದಿಕೆಯ ಮೇಲೆ ತಾಪಂ ಉಪಾಧ್ಯಕ್ಷ ಬಸನಗೌಡ ಪಾಟೀಲ, ಮಂಡಲ ಕಾರ್ಯದಶರ್ಿ ವಿರೇಶ ಹೊಳೆಪ್ಪನವರ ಇದ್ದರು.
ಈ ಸಂದರ್ಭದಲ್ಲಿ ಮಹೇಶ ಹರಕುಣಿ, ಶ್ರೀಶೈಲ ಯಡಳ್ಳಿ, ರಾಜು ನರಸನ್ನವರ, ಐ.ಎಲ್.ಪಾಟೀಲ, ಬಿ.ಡಿ.ಬನಶೆಟ್ಟಿ, ಕುಮಾರ ಭರಮಣ್ಣವರ, ಬಸನಗೌಡ ಸಂಗನಗೌಡರ, ಆಶೀಫ ಗೋವೆ, ವಿಶಾಲ ಹೊಸೂರ, ಅಂಜುಮ ನೇಗಿನಹಾಳ, ಶ್ರೀಶೈಲ ಅಂದಾನಿ, ಉಳವಪ್ಪ ಶಟಗಾರ, ಮಹಾಂತೇಶ ಹರಕುಣಿ, ಬಸವರಾಜ ಶಿಂತ್ರಿ, ಶಿವಪ್ಪ ಕಡಕೋಳ, ಈರಪ್ಪ ಬೆಳಗಾವಿ ಹಾಗೂ ಕಾರ್ಯಕರ್ತರು ಇದ್ದರು.
ಮಂಡಲ ಕಾರ್ಯದಶರ್ಿ ಮಲ್ಲನಗೌಡ ಗೌಡತಿ ನಿರೂಪಿಸಿದರು, ಮುದಕಪ್ಪ ತೋಟಗಿ ಸ್ವಾಗತಿಸಿದರು. ಬಾಳನಗೌಡ ಪಾಟೀಲ ವಂದಿಸಿದರು.