ಲೋಕದರ್ಶನವರದಿ
ರಾಣೇಬೆನ್ನೂರು: ಮೇ.13: ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಸಕರ್ಾರದ ಕ್ರಮವನ್ನು ಖಂಡಿಸಿದ ಇಲ್ಲಿನ ವರ್ತಕರ ಸಂಘದ ಮುಖಂಡರು ಕನರ್ಾಟಕ ಎಪಿಎಂಸಿ ಕಾಯ್ದೆ ಮಾದರಿಯಾಗಿದೆ. ಯಾವುದೇ ಕಾರಣಕ್ಕೂ ತಿದ್ದುಪಡಿ ತರಬಾರದೆಂದು ಒಕ್ಕೂರಲ ಆಗ್ರಹಿಸಿ ಬುಧವಾರ ತಹಶೀಲ್ದಾರ ಮೂಲಕ ರಾಜ್ಯ ಸಕರ್ಾರದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಇಲ್ಲಿ ರೈತರ ಶೋಷಣೆ ತಪ್ಪಿಸಲು ಬೆಳೆಗೆ ಯೋಗ್ಯ ಬೆಲೆ ಸಿಗಲು ಸಮರ್ಪಕವಾದ ಅವಕಾಶವಿದೆ. ಈಗಿರುವ ಕಾಯ್ದೆ ರೈತರಿಗೆ ಸೂಕ್ತ ರಕ್ಷಣೆಯನ್ನು ನೀಡುತ್ತಲಿದೆ. ಇದಕ್ಕೆ ತಿದ್ದುಪಡಿ ತರಲು ಹೊರಟಿರುವುದು ಯಾರ ಹಿತಾಶಕ್ತಿಗಾಗಿ? ಎನ್ನುವ ಪ್ರಶ್ನೆ ಬಲವಾಗಿ ಕಾಡುತ್ತಲಿದೆ. ರೈತರ ಹಿತ ಬಲಿಕೊಡುವ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಲು ಅವಕಾಶ ನೀಡಬಾರದೆಂದು ಸಕರ್ಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ವರ್ತಕ ಸಮುದಾಯ ಕೋರಿದ್ದಾರೆ.
ಪ್ರಸ್ತುತ ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಎಪಿಎಂಸಿ ವರ್ತಕರು ಸಂಸ್ಕೃರಿಸಿದ ಸರಕುಗಳಿಗೆ ಶೇ. 1.5 ರಷ್ಟು ಮಾರುಕಟ್ಟೆ ಶುಲ್ಕ ಪಾವತಿಸಿ ಸಕರ್ಾರದ ನಿಯಮಾವಳಿಗನುಸಾರವಾಗಿ ನಡೆದುಕೊಳ್ಳುತ್ತಿದ್ದೇವೆ. ಆದರೆ, ಎಪಿಎಂಸಿ ವರ್ತಕರ ಹಿತಕ್ಕೆ ಧಕ್ಕೆ ತರಲು ಹಲವಾರು ಕಾಪರ್ೋರೇಟ್ ಹಾಗೂ ಸ್ಟಾರ್ಟಆಪ್ ಕಂಪನಿಗಳು ಸಕರ್ಾರಕ್ಕೆ ಯಾವುದೇ ನಿಗದಿತ ಶುಲ್ಕವನ್ನು ಪಾವತಿಸದೇ, ಸಂಸ್ಕರಿಸಿದ ಕೃಷಿ ಉತ್ಪನ್ನಗಳ ಸರಕುಗಳನ್ನು ಖರೀದಿಸಿ ರಾಜ್ಯದ ಬೆಂಗಳೂರು ಮತ್ತು ಇತರೆ ಪ್ರಮುಖ ನಗರಗಳಲ್ಲಿ ಮಾರಾಟಮಾಡಲು ಸಿದ್ಧತೆ ನಡೆಸುತ್ತಿರುವುದು ವರ್ತಕರ ಗಮನಕ್ಕೆ ಬಂದಿದೆ. ಎಪಿಎಂಸಿ ಕಾಯ್ದೆಗೆ ಅಗತ್ಯ ತಿದ್ದುಪಡಿ ತಂದು ರಾಜ್ಯ ಸಕರ್ಾರದಿಂದ ಸುಗ್ರೀವಾಜ್ಞೆ ಹೊರಡಿಸುವ ಸಂಬಂಧ ವಿಷಯವನ್ನು ಮುಂದಿನ ಸಚಿವ ಸಂಪುಟದಲ್ಲಿ ಮಂಡಿಸಲು ಈ ಕಂಪನಿಗಳು ಸಕರ್ಾರದ ಮಟ್ಟದಲ್ಲಿ ನಿರಂತರ ಒತ್ತಡ ತರುತ್ತಿದ್ದಾರೆ ಎಂದು ವಿವರಿಸಿದ್ದಾರೆ.
ಕಾಯ್ದೆ ಜಾರಿಗೆ ತರುವ ವಿಷಯವು ನಿಜವೇ ಆಗಿದ್ದಲ್ಲಿ ರಾಜ್ಯದಲ್ಲಿ ಅಧಿಕೃತ ಪರವಾನಗಿ ಹೊಂದಿರುವ ಸಾವಿರಾರು ಎಪಿಎಂಸಿ ವರ್ತಕರು ಹಾಗೂ ಕುಟುಂಬ ವರ್ಗದವರು ತೀವ್ರ ಸಂಕಷ್ಠಕ್ಕೆ ಒಳಗಾಗುವರು. ಕಾಪರ್ೋರೇಟ್ ಸ್ಟಾಟರ್್ಆಪ್ ಕಂಪನಿಗಳು ಸಂಸ್ಕರಿಸಿದ ಕೃಷಿ ಉತ್ಪನ್ನಗಳನ್ನು ಸಕರ್ಾರಕ್ಕೆ ಯಾವುದೇ ಶುಲ್ಕ ಪಾವತಿಸದೇ, ಸಕರ್ಾರದ ಯಾವುದೇ ನಿಬಂಧನೆಗಳಿಲ್ಲದೇ, ಮಾರುಕಟ್ಟೆ ಹೊರಗಡೆ ಮಾರಾಟ ಮಾಡಲು ಅವಕಾಶ ನೀಡಬಾರದು.
ಒಂದು ವೇಳೆ ಅವಕಾಶ ನೀಡಿದ್ದೇ ಆದರೆ, ರೈತರು ವ್ಯಾಪಾರಸ್ಥರು ಈ ಕಾಯ್ದೆಯನ್ನು ವಿರೋಧಿಸಲೇ ಬೇಕಾಗುತ್ತದೆ. ಮುಖ್ಯಮಂತ್ರಿಗಳು ರೈತರಿಗೆ ವ್ಯಾಪಾರಸ್ಥರಿಗೆ ಮಾರಕವಾದ ಕಾಯ್ದೆಯ ತಿದ್ದುಪಡಿಯ ಸುಗ್ರೀವಾಜ್ಞೆಯನ್ನು ಹೊರಡಿಸಬಾರದೆಂದು ಮನವಿ ಮಾಡಿದ್ದಾರೆ.
ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ಅಧ್ಯಕ್ಷ ಸದಾಶಿವಪ್ಪ ಉಪ್ಪಿನ, ಉಪಾಧ್ಯಕ್ಷ ಪಾಂಡುರಂಗಪ್ಪ ಮಾಳೋದೆ, ಗೌರವ ಕಾರ್ಯದಶರ್ಿ ಬಸವರಾಜ ಗೌಡಶಿವಣ್ಣನವರ, ವ್ಹಿ.ಪಿ.ಲಿಂಗನಗೌಡ್ರ, ಜಿ.ಜಿ.ಹೊಟ್ಟಿಗೌಡ್ರ, ಶಿವಯೋಗಿ ಅಸುಂಡಿ, ಅಶೋಕ ಹೊಟ್ಟಿಗೌಡ್ರ, ಸುನೀಲ್ ಸವಣೂರ, ಮಾಲತೇಶ್ ಚಳಗೇರಿ, ಜಿ.ಬಿ.ಜಂಬಿಗಿ, ಸುದೀರ್ ಕುರವತ್ತಿ, ಸೋಮಶೇಖರ ಗೌಡಶಿವಣ್ಣನವರ, ರಾಜಶೇಖರ ಹಾದಿಮನಿ ಸೇರಿದಂತೆ ಮತ್ತಿತರ ಗಣ್ಯರು ವರ್ತಕರು ಪಾಲ್ಗೋಂಡಿದ್ದರು.