ಲೋಕದರ್ಶನ ವರದಿ
ಬೈಲಹೊಂಗಲ 04: ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಎದುರು ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಸಂಸ್ಥೆ, ಪುರಸಭೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸೋಮವಾರ ಸಕ್ರೀಯ ಕ್ಷಯ ರೋಗ ಪತ್ತೆ ಆಂದೋಲನ ಜಾಥಾ ನಡೆಯಿತು.
ಇಲ್ಲಿಯ ಚನ್ನಮ್ಮನ ಸಮಾಧಿ ಎದುರು ಆರಂಭವಾದ ಜಾಥಾ ಎಸ್.ಆರ್.ಸರ್ಕಲ್, ಬಸ್ ನಿಲ್ದಾಣ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ದಾರಿಯುದ್ದಕ್ಕೂ ಕ್ಷಯ ರೋಗವು ಅಧಿಸೂಚಿತ ಖಾಯಿಲೆ, ಕ್ಷಯರೋಗಿಗಳ ಮಾಹಿತಿ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ, ರೋಗವನ್ನು ದೂರವಿರಿಸಿ, ರೋಗಿಯನ್ನಲ್ಲ ಎಂಬ ಆರೋಗ್ಯ ಜಾಗೃತಿ ಕುರಿತು ಘೋಷಣೆ ಮೊಳಗಿದವು.
ಪುರಸಭೆ ಅಧ್ಯಕ್ಷ ರಾಜಶೇಖರ ಮೂಗಿ ಹಸಿರು ನಿಶಾನ ತೋರಿಸುವ ಮೂಲಕ ಚಾಲನೆ ನೀಡಿ, ರೋಗವನ್ನು ದೂರವಿರಿಸಿ, ರೋಗಿಯನ್ನಲ್ಲ ಎಂದರು. ತಾಲೂಕಾ ಆರೋಗ್ಯ ವೈದ್ಯಾಧಿಕಾರಿ ಎಸ್.ಎಸ್.ಸಿದ್ದನ್ನವರ ಮಾತನಾಡಿ, ಎಲ್ಲರೂ ಒಗ್ಗೂಡಿ ಕ್ಷಯ ರೋಗದ ವಿರುದ್ಧ ಹೋರಾಟ ನಡೆಸಿ, ಕ್ಷಯ ರೋಗ ಮುಕ್ತ ನಾಡನ್ನಾಗಿಸಲು ಪ್ರತಿಯೊಬ್ಬರು ಶ್ರಮಿಸಬೇಕು. ಕ್ಷಯ ರೋಗದ ಪತ್ತೆ ಮತ್ತು ಚಿಕಿತ್ಸೆ ಉಚಿತವಾಗಿದೆ. ಕ್ಷಯರೋಗಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಜು.2ರಿಂದ ಜು.13ರ ವರೆಗೆ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.
ರೋಟರಿ ಅಧ್ಯಕ್ಷ ಶ್ರೀಶೈಲ ಶರಣಪ್ಪನವರ, ವಿಜಯಕುಮಾರ ಪಾಟೀಲ, ಎಸ್.ಎಸ್.ಮುತ್ನಾಳ, ಎನ್.ಡಿ.ಖಾಡೆ, ಅರುಣ ದೇಸಾಯಿ, ಈರಣ್ಣಾ ಬೆಟಗೇರಿ ಹಾಗೂ ಎಸ್.ಜಿವ್ಹಿ. ಆಯುವರ್ೇದ ಕಾಲೇಜಿನ ವಿದ್ಯಾಥರ್ಿಗಳು, ಶ್ರೀ ಬಸವೇಶ್ವರ ಸ್ವತಂತ್ರ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾಥರ್ಿಗಳು, ಅಂಗನವಾಡಿ ಕಾರ್ಯಕತರ್ೆಯರು ಇದ್ದರು.