ಗದಗ 25: ಪ್ರತಿಭಟನೆ ನಡೆಸುತ್ತಿರುವ ಸುಜಲಾನ ಗಾಳಿ ವಿದ್ಯುತ ಕಂಪನಿಯಿಂದ ಕೈಬಿಟ್ಟ ಭದ್ರತಾ ಸಿಬ್ಬಂದಿಗೆ ಸೂಕ್ತ ನ್ಯಾಯ ದೊರಕಿಸಲು ಪ್ರಯತ್ನಿಸಲಾಗುವದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಭರವಸೆ ನೀಡಿದರು.
ಮುಂಡರಗಿಯ ತಹಶೀಲ್ದಾರ ಕಚೇರಿ ಎದುರುಗಡೆ ಸುಜಲನಾ ಕಂಪನಿ ಭಧ್ರತಾ ಸಿಬ್ಬಂದಿಗಳ ಧರಣಿ ಉದ್ದೇಶಿಸಿ ಅವರು ಮಾತನಾಡಿದರು. ಕಾಮರ್ಿಕರ ಹೊರಾಟ ಬಹುದಿನಗಳಿಂದ ಜರುಗುತ್ತಿದೆ. ಕಂಪನಿಯ ಅಧಿಕಾರಿಗಳಿಗೆ ಪರಿಹಾರಕ್ಕೆ ಸೂಚನೆ ನೀಡಿದ್ದರು ಯಾವುದೇ ನಿಧರ್ಾರಗಳನ್ನು ಕೈಗೊಂಡಿರುವುದಿಲ್ಲ. ಮಾರ್ಗಸೂಚಿಗಳನ್ವಯ ಕಾಮರ್ಿಕರಿಗೆ ದೊರೆಯಬೇಕಾದ ಕನಿಷ್ಠ ಸಂಬಳವನ್ನು ಕಂಪನಿ ನೀಡದೇ ಇರುವುದರಿಂದ ಕಾಮರ್ಿಕ ಇಲಾಖೆಯು ನೋಟಿಸನ್ನು ಜಾರಿ ಮಾಡಿದೆ. ಈ ಸಂಬಂಧ ಕಾನೂನು ಪ್ರಕ್ರಿಯೆ ಜರುಗುತ್ತಿದೆೆ. ಕಾನೂನು ಪ್ರಕ್ರಿಯೆ ವಿಳಂಬದಿಂದ ಕಾಮರ್ಿಕರಿಗೆ ತೊಂದರೆಯಾಗದಂತೆ ಸಂಧಾನದ ಮೂಲಕ ಕಾಮರ್ಿಕ ಇಲಾಖೆ ಮಾರ್ಗಸೂಚಿಯನ್ವಯ ಕೆಲಸದಿಂದ ಕೈಬಿಟ್ಟ ಕಾರ್ಮಿಕರಿಗೆ ತಲಾ ಮೂರು ಲಕ್ಷ ನಲವತ್ತಾರು ಸಾವಿರ ರೂ ಗಳನ್ನು ಯಾವುದೇ ಕಡಿತ ಮಾಡದೆ ಪರಿಹಾರ ಮೊತ್ತವನ್ನು ಪಾವತಿಸುವಂತೆ ನಿದರ್ೇಶನ ನೀಡಲಾಗಿದೆ. ಕಾಮರ್ಿಕ ನಿಯಮಗಳ ರೀತ್ಯ ಕಂಪನಿಯು ತನ್ನ ಕಾರ್ಮಿಕರನ್ನು ಕೆಲಸದಿಂದ ಕೈಬಿಡಬೇಕಾದ ಸಂದಂರ್ಭದಲ್ಲಿ ಕಾಮರ್ಿಕರ ಜೀವನಾಂಶ ಭತ್ಯೆಯನ್ನು ಅವರ ಸೇವಾ ಅವಧಿ ಆಧರಿಸಿ ಪಾವತಿಸಬೇಕಾಗುತ್ತದೆ. ಪರಿಹಾರ ಕ್ರಮ ಜರಗುದೇ ಸ್ಥಳೀಯ ಕಾಮರ್ಿಕರಿಗೆ ತೊಂದರೆಯಾಗುತ್ತಿದ್ದು ಕಾರ್ಮಿಕರಿಗೆ ಅನ್ಯಾಯವಾಗದಂತೆ ನಿಯಮಗಳ ರೀತ್ಯ ಸರ್ವ ಕ್ರಮ ಜರುಗಿಸಲಾಗುವದೆಂದು ಧರಣಿ ನಿರತ ಕಾರ್ಮಿಕರಿಗೆ ಜಿಲ್ಲಾಧಿಕಾರಿಗಳು ಭರವಸೆ ನೀಡಿ ಧರಣಿಯನ್ನು ಕೈಬಿಡುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಮನವಿ ಮೇರೆಗೆ 29 ದಿನಗಳ ಅಹೋರಾತ್ರಿ ಧರಣಿಯನ್ನು ಕೈಬಿಡಲಾಗುತ್ತಿದೆ ಎಂದು ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ನುಡಿದರು.
ಮುಂಡರಗಿ ತಹಶೀಲ್ದಾರ ವೆಂಕಟೇಶ ನಾಯ್ಕ, ಪೋಲಿಸ ವೃತ್ತ ನೀರಿಕ್ಷಕ ಸುನೀಲಕುಮಾರ ಬೆಂಕಿ. ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ, ಮುಂತಾದವರು ಇದ್ದರು.