ಭಾರತ-ಚೀನಾ ಮಾತುಕತೆಗಳ ಒಪ್ಪಂದದ ಅನುಷ್ಠಾನಕ್ಕೆ ಕ್ರಮ

ಭಾರತ-ಚೀನಾ ಮಾತುಕತೆಗಳ ಒಪ್ಪಂದದ ಅನುಷ್ಠಾನಕ್ಕೆ ಕ್ರಮ

ಜೊಹಾನ್ಸ್ ಬರ್ಗ: ಚೀನಾದ ರಕ್ಷಣಾ ಸಚಿವರು ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲು ಮತ್ತು ತಮ್ಮ ಇತ್ತೀಚಿನ ಮಾತುಕತೆಗಳ, ಒಪ್ಪಂದದ ಅನುಷ್ಠಾನನಕ್ಕೆ ಕ್ರಮ ಕೈಗೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿಜಿನ್ ಪಿಂಗ್ ಒಪ್ಪಿಗೆ ಸೂಚಿಸಿದ್ದಾರೆ. 

ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಜೊಹಾನ್ಸ್ ಬಗರ್್ ಗೆ ಆಗಮಿಸಿರುವ ಮೋದಿ, ಕ್ಸಿ ಅವರನ್ನು ಕಳೆದ ಮೂರು ತಿಂಗಳಿನಲ್ಲಿ ಮೂರನೇ ಬಾರಿಗೆ ಭೇಟಿಯಾದರು. 

"ಎರಡೂ ರಾಷ್ಟ್ರಗಳ ಬಾಂಧವ್ಯ ಗಟ್ಟಿಗೊಳಿಸಲು, ಈ ಒಪ್ಪಂದಗಳ ಅನುಷ್ಟಾನದ ವೇಗ ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ. ಇದಕ್ಕಾಗಿ ನಮ್ಮ ನಡುವಿನ ಮಾತುಕತೆ ನಿಯತವಾಗಿರಬೇಕು.ಅಗತ್ಯವಾದಾಗ ಸರಿಯಾದ ಸೂಚನೆಗಳನ್ನು ನೀಡಬೇಕು" ಮೋದಿ ಚೀನಾ ಅಧ್ಯಕ್ಷರಿಗೆ ತಿಳಿಸಿದ್ದಾರೆ. 

ತಮ್ಮ ಇತ್ತೀಚಿನ ಸಭೆಗಳು ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಶಕ್ತಿಯನ್ನು ನೀಡಿದೆ. ಎರಡು ರಾಷ್ಟ್ರಗಳ ಪರಸ್ಪರ ಸಹಕಾರಕ್ಕಾಗಿ ಹೊಸ ಅವಕಾಶ ಒದಗಿಸಲಾಗುತ್ತದೆ.ಎಂದು ಮೋದಿ ಚೀನಾ ಅಧ್ಯಕ್ಷರಿಗೆ ತಿಳಿಸಿದರು. ವುಹಾನ್ ನಲ್ಲಿನ ಅನೌಪಚಾರಿಕ ಭೇಟಿಯ ಬಳಿಕ ದ್ವಿಪಕ್ಷೀಯ ಸಂಬಂಧಗ ಸಮರ್ಪಕ ಮುಂದುವರಿಕೆಗೆ ಚೀನಾ ತಂಡವು ಭಾರತದೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ ಎಂದು ಅಧ್ಯಕ್ಷ ಕ್ಸಿ ಹೇಳಿದ್ದಾರೆ. ಎಂದು ಚೀನಾ ಸಕರ್ಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ. 

ಮಹತ್ವದ ವಿಭಾಗಗಳಲ್ಲಿನ ಸಂಪರ್ಕ ಬಲವರ್ಧನೆ, ಪರಸ್ಪರ ವಿಶ್ವಾಸ ಹೆಚ್ಚಳ, ಪ್ರಾಯೋಗಿಕ ಸಹಕಾರಕ್ಕೆ ಉತ್ತೇಜನ, ಸಾಂಸ್ಕೃತಿಕ ವಿನಿಮಯ ಹಾಗೂ ಭಿನ್ನಾಭಿಪ್ರಾಯಗಳ ಸಮರ್ಪಕ ನಿರ್ವಹಣೆ ಕುರಿತಂತೆ ಎರಡೂ ದೇಶದ ನಾಯಕರು ಮಾತನಾಡಿದ್ದಾರೆ. 

ಜೊಹಾನ್ಸ್ ಬಗರ್್ ಸಭೆಯು ನಮಗೆ ಚೀನಾದೊಡನೆ ಅಭಿವೃದ್ಧಿ ಪಾಲುದಾರಿಕೆಯನ್ನು ಬಲಪಡಿಸಲು ಮತ್ತಷ್ಟು ಅವಕಾಶವನ್ನು ಒದಗಿಸಿದೆ ಎಂದು ಮೋದಿ ಹೇಳಿದರು. ಎರಡೂ ರಾಷ್ಟ್ರಗಳು ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡಿಕೊಳ್ಳುವುದು,ಅಗತ್ಯವಾಗಿದೆ. ಈ ಸಂಬಂಧ ಅವರು ತಮ್ಮ ಸೇನಾ ನಾಯಕರಿಗೆ ಪರಸ್ಪರ ಸಂವಹನ ನಡೆಸಲು ಸೂಚಿಸಿದ್ದಾರೆ ಎಂದು ವಿದೇಶಾಂಗ ಕಾರ್ಯದಶರ್ಿ ವಿಜಯ್ ಗೋಖಲೆ ಹೇಳಿದ್ದಾರೆ. ಇಬ್ಬರು ನಾಯಕರು ನಡೆಸಿದ ಮಾತುಕತೆಯ ಫ್ಲಶ್ರುತಿ ಉತ್ತಮವಾಗಿರಲಿದೆ, ಮೋದಿ ಹಾಗೂ ಕ್ಸಿ ಅವರಿಗೆ ಈ ಮಾತುಕತೆ ತೃಪ್ತಿ ತಂದಿದೆ ಎಂದು ಅವರು ಹೇಳಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ಅವರನ್ನು ಗಡಿ ವಿವಾದ ಸಂಬಂಧ ನಡೆಯುವ ವಿಶೇಷ ಪ್ರತಿನಿಧಿ ಮಟ್ಟದ ಮಾತುಕತೆಗೆ ಈ ವರ್ಷ ಚೀನಾಗೆ ಕಳಿಸಲು ಧಾನಿ ಮೋದಿ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.