ಬಾಗಲಕೋಟೆ: ವಿಶೇಷ ಹಾಗೂ ಗಿರಿಜನ ಅಭಿವೃದ್ದಿಗೆ ಮೀಸಲಿರಿಸಲಾದ ಯೋಜನೆಗಳ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಅಸಮಾನತೆ ನಿಮರ್ೂಲನೆಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಎಸ್ಸಿಪಿ ಹಾಗೂ ಟಿಎಸ್ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹಿಂದುಳಿದ ಜನಾಂಗವನ್ನು ಆಥರ್ಿಕವಾಗಿ, ಸಾಮಾಜಿಕವಾಗಿ ಮುಂದೆ ಬರುವಂತೆ ಮಾಡಬೇಕು. ತಮಗೆ ಒದಗಿಸಿದ ಕೆಲಸವನ್ನು ಚಾಚೂ ತಪ್ಪದೇ ನಿರ್ವಹಿಸಬೇಕು. ಅದರಲ್ಲಿ ವಿಕಲಚೇತನರ ಮಾಹಿತಿಯನ್ನು ಕ್ರೋಡಿಕರಿಸಿ ಮಾಹಿತಿ ಸಲ್ಲಿಸುವಂತೆ ಹಿಂದಿನ ಸಭೆಯಲ್ಲಿ ತಿಳಿಸಲಾಗಿತ್ತು. ಆದರೂ ಮಾಹಿತಿ ನೀಡದಿರುವದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಬೇಗನೇ ಮಾಹಿತಿ ನೀಡಲು ಸೂಚಿಸಿದರು.
ಶಾಲೆಯಿಂದ ಹೊರಗುಳಿದ 844 ಮಕ್ಕಳ ಪೈಕಿ 160 ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಬಿ.ಎಚ್.ಗೋನಾಳ ಸಭೆಗೆ ತಿಳಿಸಿದಾಗ ಪ್ರತಿಯೊಂದು ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿ ಅಧಿಕಾರಿ ತಿಂಗಳಿಗೆ ಒಂದು ಮಗುವನ್ನಾದರೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಕೆಲಸವಾಗಬೇಕೆಂದರು. ಈ ಕಾರ್ಯದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತರು ಹಾಗೂ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಿ ಎಲ್ಲ ಅಧಿಕಾರಿಗಳಿಗೆ ಶಾಲೆಬಿಟ್ಟ ಮಕ್ಕಳ ಪಟ್ಟಿಯನ್ನು ನೀಡಲು ತಿಳಿಸಿದರು.
ಬಾಗಲಕೋಟೆಯಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದ ಗಭರ್ಿಣಿ ಬಾಲಕಿಯನ್ನು ಮರಳಿ ಶಾಲೆಗೆ ಸೇರಿಸಿ ಬಾಲಕಿಯನ್ನು ಮುಖ್ಯವಾಹಿನಿಗೆ ತರುವಲ್ಲಿ ಮನವೊಲಿಸಿದ ಕಾರ್ಯವನ್ನು ನೆನಪಿಸಿದ ಹಿನ್ನಲೆಯಲ್ಲಿ ಜಿ.ಪಂ ಸಿಇಓ ಅವರ ಮಹತ್ತರ ಕಾರ್ಯವನ್ನು ಜಿಲ್ಲಾಧಿಕಾರಿಗಳು ಶ್ಲಾಘಿಸಿದರು.
ಮಲ ಹೊರುವ ಪದ್ದತಿಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಸೆಪ್ಟಿಕ್ ಟ್ಯಾಂಕ್ ಕ್ಲಿನ್ ಮಾಡಲಿಕ್ಕೆ ಮಶೀಲಗಳನ್ನು ಬಳಕೆಮಾಡಬೇಕು. ಸಕಿಂಗ್, ಜಟ್ಟಿಂಗ್ ಮಶೀನ್ನಿಂದ ಕ್ಲಿನ್ ಮಾಡಲು ಅಂದಾಜು ರೂ.2 ಸಾವಿರದಿಂದ ರೂ.3 ಸಾವಿರ ವರೆಗೆ ಬಾಡಿಗೆ ಪಡೆಯಲಾಗುತ್ತಿದೆ. ಅದನ್ನು ಸಾಂಕೇತಿಕವಾಗಿ ಬಾಡಿಗೆಯಲ್ಲಿ ರೂ.25 ಕಡಿಮೆ ಮಾಡುವ ಕುರಿತು ಜಿಲ್ಲೆಯಲ್ಲಿರುವ 15 ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಲ್ಲಿಸಿದ ಪ್ರಸ್ತಾವಣೆಗಳಿಗೆ ಜಿಲ್ಲಾಧಿಕಾರಿಳು ಸಭೆಯಲ್ಲಿ ಅನುಮೋದಿಸಿದರು.
ಈ ಕಾರ್ಯವನ್ನು ಲಾಭಕ್ಕಾಗಿ ಮಾಡದೇ ಸೇವೆಯ ರೂಪದಲ್ಲಿ ಮಾಡಲು ತಿಳಿಸಿದರು. ಈ ಕುರಿತು ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಬೋರ್ಡಗಳನ್ನು ಹಾಕಬೇಕು.
ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಿ, ಸ್ವಚ್ಛತೆಗೆ ಹೆಚ್ಚು ಗಮನ ಹರಿಸಲು ಸೂಚಿಸಿದ ಅವರು ಪೌರಕಾಮರ್ಿಕರು ಗ್ಲೌಸ್ ಮತ್ತು ಗಂಬೂಟ್ಸ್ ಹಾಗೂ ಸ್ವಚ್ಛತಾ ಪರಿಕರಣಗಳನ್ನು ಕಡ್ಡಾಯವಾಗಿ ಒದಗಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲಾಧಿಕಾರಿಗಳ ನಿದರ್ೇಶನದ ಮೇರೆಗೆ ಮುಧೋಳ ತಾಲೂಕಿನ ಪುರಸಭೆಯ ಮುಖ್ಯಾಧಿಕಾರಿಗಳು ವಾರ್ಡವಾರು ಮನೆ ಮನೆಗೆ ತೆರಳಿ ಕಸ ವಿಂಗಡಿಸಿ ವಿಲೇವಾರಿ ಕೈಗೊಂಡ ಕ್ರಮವನ್ನು ಜಿಲ್ಲಾಧಿಕಾರಿ ಪ್ರಸಂಶೆಯನ್ನು ವ್ಯಕ್ತಪಡಿಸಿದರು. ಹಂತ ಹಂತವಾಗಿ ಉಳಿದ ವಾರ್ಡಗಳ ಕಸ ವಿಲೇವಾರಿಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪುರಸಭೆಯ ಮುಖ್ಯಾಧಿಕಾರಿಗಳು ಸಭೆಗೆ ತಿಳಿಸಿದರು. ಪ್ರಸಕ್ತ ಸಾಲಿಗೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಿರಿಸಲಾದ ಅನುದಾನದಲ್ಲಿ ಫಲಾನುಭವಿಗಳಿಗೆ ಮೂಲಭೂತ ಸೌಕರ್ಯ, ಅವಶ್ಯಕ ಪರಿಕರಣಗಳನ್ನು ಒದಗಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜವಳಿ ಇಲಾಖೆಯಿಂದ ಸ್ಯಾನಿಟರಿ ನ್ಯಾಪಕಿನ್ಸ್ಗಳ ಘಟಕ ಸ್ಥಾಪಿಸುವ ನಿಟ್ಟಿನಲ್ಲಿ ತಾಲೂಕಿಗೆ ಒಂದರಂತೆ ಪ್ರಾರಂಭಿಸಲು ಕ್ರಮಕೈಗೊಳ್ಳಲು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿದರ್ೇಶಕಿ ಭಾರತಿ ಬೀದರಿಮಠ ಅವರಿಗೆ ತಿಳಿಸಿದರು.
ಘಟಕ ಸ್ಥಾಪನೆಗೆ ಮುತುವಜರ್ಿ ವಹಿಸಿ ಕ್ರಮಕೈಗೊಳ್ಳಲು ಸೂಚಿಸಿದರು. ಪ್ರಸಕ್ತ ಸಾಲಿನ ತ್ರೈಮಾಸಿಕ ಅವಧಿಯಲ್ಲಿ ಎಸ್ಸಿಪಿಯಲ್ಲಿ ಶೇ.37.69 ಪ್ರಗತಿ ಸಾಧಿಸಿದರೆ ಟಿಎಸ್ಪಿಯಲ್ಲಿ ಶೇ.30.93 ರಷ್ಟು ಪ್ರಗತಿ ಸಾಧಿಸಿರುವ ಬಗ್ಗೆ ಸಭೆಗೆ ತಿಳಿಸಿದಾಗ ಗುರಿ ಸಾಧನೆಗೆ ಕಡಿಮೆಯಾಗಿದ್ದು, ಎಲ್ಲ ಇಲಾಖೆಗಳು ಮುಂದಿನ ಸಭೆಯಲ್ಲಿ ಪ್ರಗತಿ ಸಾಧಿಸಬೇಕೆಂದು ಸೂಚಿಸಿದರು. ಹಿಂದಿನ ಸಭೆಯ ಅನುಪಾಲನಾ ವರದಿಯನ್ನು ಸಮಾಜ ಕಲ್ಯಾಣ ಇಲಾಖೆಯ ಉಪನಿದರ್ೇಶಕ ಜಗದೀಶ ಹೆಬ್ಬಳ್ಳಿ ಸಭೆಗೆ ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿದರ್ೇಶಕ ಶ್ರೀಶೈಲ ಕಂಕಣವಾಡಿ, ಜಿಲ್ಲಾ ಜಂಟಿ ನಿದರ್ೇಶಕ ರಾಜಶೇಖರ ವಿಜಾಪೂರ, ತೋಟಗಾರಿಕೆ ಇಲಾಖೆಯ ಉಪನಿದರ್ೇಶಕ ಪ್ರಭುರಾಜ ಹಿರೇಮಠ, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜಯ್ಯ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ, ನಗರಸಭೆಯ ಪೌರಾಯುಕ್ತ ಗಣಪತಿ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.