ಲೋಕದರ್ಶನವರದಿ
ಹಾವೇರಿ: ಜಿಲ್ಲೆಯಲ್ಲಿ ಭೀಕರ ಮಳೆ ಸುರಿದು ಬೆಳೆ ಬಾರದೇ ರೈತರು ಕಂಗಾಲಾಗಿದ್ದಾರೆ. ರೈತರ ಕಷ್ಟಕ್ಕೆ ವಿಧಯತೆಯಿಂದ ಕರ್ತವ್ಯ ನಿರ್ವಹಿಸಬೇಕಾದ ನೌಕರರ ವರ್ಗ ರೈತರು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಿರುವುದು ಸರಿಯಲ್ಲ ರೈತರಿಗೆ ಅವಮಾನ ಮಾಡಿದ ನೌಕರರ ಸಂಘದ ಸದಸ್ಯರನ್ನು ಅಮಾನತ್ತು ಮಾಡಬೇಕು ಎಂದು ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ದೀಪಕ್ ಗಂಟಿ ಸಿದ್ದಪ್ಪನವರ ಒತ್ತಾಯಿಸಿದ್ದಾರೆ.
ರೈತರು ತಮ್ಮ ಸಮಸ್ಯೆಗಳನ್ನು ಒತ್ತಾಯಿಸಿ ಹೋರಾಟ ಮಾಡಿದರೇ ಅದನ್ನು ತಿರುಚಿ ರೈತರು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದವರ ವಿರುದ್ಧ ಸರಕಾರ ಕ್ರಮ ಜರುಗಿಸಬೇಕು. ಸರಕಾರಿ ನೌಕರರಿಗೆ ಸರಕಾರದಿಂದ ಸಾಕಷ್ಟು ಸೌಲಭ್ಯವನ್ನು ನೀಡಿ ಜನಕಲ್ಯಾಣ ಕಾರ್ಯ ಮಾಡಿ ಎಂದು ಹೇಳಿದರೇ ಕಛೇರಿಗೆ ಹೋದ ರೈತರ ಮೇಲೆ ತಪ್ಪು ಹೇಳಿಕೆ ಮಾಡುತ್ತಿರುವ ಖಂಡನೀಯ ಅಂತವರು ಸರಕಾರಿ ಕೆಲಸ ಮಾಡಲು ಅರ್ಹರಲ್ಲ ಅಂತವರನ್ನು ಅಮಾನತ್ತು ಮಾಡಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಹಿರೇಕೇರೂರ ಹಾಗೂ ಬ್ಯಾಡಗಿ ತಾಲೂಕಾ ನೌಕರರ ಸಂಘದ ಕೆಲ ಸದಸ್ಯರು ನೌಕರಿ ಮಾಡುವುದನ್ನು ಬಿಟ್ಟು ರೈತರು ತೊಂದರೆ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿರುವುದು ಖಂಡನೀಯ ಈ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು
ಅನ್ನ ನೀಡಿದ ರೈತನ ಬಗ್ಗೆ ಹಗುರವಾಗಿ ಮಾತನಾಡಿದರೇ ರಾಜ್ಯಾಧ್ಯಂತ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಜಿಲ್ಲೆಯಲ್ಲಿ ಒಳ್ಳೆ ನೌಕರರು ರೈತರಿಗಾಗಿ ಹಗಳಿರುಳು ದುಡಿಯುತ್ತಾರೆ.
ಅವರು ಸಾರ್ವಜನಿಕವಾಗಿ ತೋರಿಸಿಕೊಳ್ಳಲು ಹೋಗಲ್ಲ. ಕೆಲ ಬಂಡ ನೌಕರರು ಸಂಘವನ್ನು ಮುಂದಿಟ್ಟುಕೊಂಡು ರೈತರನ್ನು ಹೆದರಿಸಲು ಹೊರಟಿದ್ದಾರೆ.
ಇಂತಹ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ. ಜನ ತೆರಿಗೆ ಹಣದಲ್ಲಿ ಸಂಬಳ ಪಡೆದುಕೊಳ್ಳುವ ನೌಕರರು ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಬಿಟ್ಟು ರೈತರನ್ನು ಕ್ಷೇಮೆ ಕೇಳಬೇಕು. ಹಕ್ಕನ್ನು ಕೇಳಿದವರಿಗೆ ಭಯ ಬೀಳಿಸಲು ಮುಂದಾದರೇ ಇಂತಹ ಅನ್ಯಾಯದ ವಿರುದ್ಧ ಹೋರಾಟ ಅನಿವಾರ್ಯ ಎಂದು ಹೇಳಿದ್ದಾರೆ.