ಬಾಗಲಕೋಟೆ: ಜಿಲ್ಲೆಯಲ್ಲಿ ವಿವಿಧ ನದಿಗಳಿಂದ ಪ್ರವಾಹ ಉಂಟಾಗಿ ಪ್ರವಾಹ ಪ್ರದೇಶಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪಾದನಾ ತಾಣವಾಗಿ ಪರಿಣಮಿಸಿದ್ದು, ಸೊಳ್ಳೆ ನಿಯಂತ್ರಣಕ್ಕೆ ಮುಂಜಾಗ್ರತೆ ಕ್ರಮವಾಗಿ ಗಂಬುಜಿಯಾ ಫಿಶ್ಗಳನ್ನು ಬೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದಿಂದ ಒಟ್ಟು 194 ಗ್ರಾಮಗಳು ತುತ್ತಾಗಿದ್ದು, ಈಗ ಪ್ರವಾಹದ ನೀರು ಇಳಿಮುಖವಾಗುತ್ತಿದ್ದಂತೆ ತಗ್ಗು ಪ್ರದೇಶದಲ್ಲಿ ನೀರು ನಿಂತು ಸೊಳ್ಳೆ ಉತ್ಪಾದನೆಯಾಗುವ ಸಂಭವಿರುವದನ್ನು ಗಮನಿಸಿ ಹೆಚ್ಚಿಗೆ ನೀರು ನಿಂತ ಪ್ರದೇಶದಲ್ಲಿ ಗಂಬುಜಿಯಾ ಫಿಶ್ಗಳನ್ನು ಬಿಡಲಾಗುತ್ತಿದೆ.
ಈ ಫಿಶ್ಗಳು ಸೊಳ್ಳೆ ಉತ್ಪಾದನೆಗೆ ಕಾರಣವಾದ ಲಾವರ್ಾಗಳನ್ನು ತಿನ್ನುತ್ತದೆ. ಇದರಿಂದ ಸೊಳ್ಳೆ ಉತ್ಪಾದನೆಯನ್ನು ತಡೆಗಟ್ಟಬಹುದಾಗಿದೆ. ಅಲ್ಲದೇ ನೀರು ಕಡಿಮೆ ನಿಂತ ಪ್ರದೇಶಗಳಲ್ಲಿ ಜೆಮೊಫಾಸ್ ಪೌಡರಗಳನ್ನು ಹಾಕಲಾಗುತ್ತಿದೆ.
ಜಿಲ್ಲೆಯ ಎಲ್ಲ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸೊಳ್ಳೆ ಉತ್ಪಾದನೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಲು ಜಿಲ್ಲೆಯಾದ್ಯಂತ 6 ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಬಾಧಿತ ಪ್ರದೇಶಗಳಿಗೆ ತೆರೆಳಿ ನೀರು ನಿಂತ ಪ್ರದೇಶಗಳಲ್ಲಿ ಸೊಳ್ಳೆ ಉತ್ಪಾನೆಯಾಗುವದನ್ನು ತಡೆಗಟ್ಟಲು ಗಂಬುಜಿಯಾ ಫಿಶ್ ಹಾಗೂ ಜೆಮೋಫಾಸ್ ಪೌಡರಗಳನ್ನು ಹಾಕುವ ಕಾರ್ಯ ಮಾಡಲಿದ್ದಾರೆ.
ಈ ಕಾರ್ಯವನ್ನು ಬಾದಾಮಿ ತಾಲೂಕಿನ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಂತ ದೇಸಾಯಿ ತಿಳಿಸಿದ್ದಾರೆ.