ಶಿರಹಟ್ಟಿಯಲ್ಲಿ ಕೋಟ್ಪಾ ಕಾಯ್ದೆ ಉಲ್ಲಂಘನೆ ವಿರುದ್ಧ ಕಾರ್ಯಚರಣೆ

ಲೋಕದರ್ಶನ ವರದಿ

ಶಿರಹಟ್ಟಿ 26: ಶಿರಹಟ್ಟಿ ತಹಶೀಲ್ದಾರ ಯಲ್ಲಪ್ಪ ಗೋಣೇಪ್ಪನವರ ಇವರ ನೇತೃತ್ವದ ತಾಲೂಕಾ ತಂಬಾಕು ನಿಯಂತ್ರಣ ತಂಡದಿಂದ ಶಿರಹಟ್ಟಿ ಪಟ್ಟಣದಲ್ಲಿ ದಿಡೀರ್ ಕೋಟ್ಪಾ ದಾಳಿ ನಡೆಸಿ ಸೆಕ್ಷನ್ 6ಬಿ ಹಾಗೂ 4 ಉಲ್ಲಂಘನೆ ವಿರುದ್ಧ ಕ್ರಮಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣವರ ಮಾತನಾಡಿ, ಈ ಮೊದಲೇ ಕೋಟ್ಪಾ ಕಾಯ್ದೆ ಕುರಿತು ಸಾರ್ವಜನಿಕರಲ್ಲಿ ಹಾಗೂ ವ್ಯಾಪಾರಸ್ಥರಲ್ಲಿ ತಿಳುವಳಿಕೆ ನಿಡಲಾಗಿತ್ತು. ಆದರೆ ಕಾಯ್ದೆ ಪಾಲನೆ ಮಾಡದಿದ್ದ ಕಾರಣ ಕಾನೂನು ರೀತಿ ಕ್ರಮ ಕೈಗೊಂಡು ರೂ.3400 ದಂಡ ವಿಧಿಸಿ ಅರಿವು ಮೂಡಿಸಿ ಇದೆ ರೀತಿ ಪುನರಾವರ್ತನೆಗೊಂಡಲ್ಲಿ ಅಂಗಡಿಗಳ ಲೈಸೆಸ್ಸ ರದ್ದು ಪಡಿಸುವದಾಗಿ ಮಾನ್ಯ ತಹಶೀಲ್ದಾರರು ಸೂಚಿಸಿದರು. 

ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಗದಗದ ಜಿಲ್ಲಾ ಸಲಹೆಗಾರರು ಗೋಪಾಲ ಸುರಪುರ ಇವರು ಮಾತನಾಡಿ, ಅಂಗಡಿ ಮುಗ್ಗಟ್ಟುಗಳ ಹಾಗೂ ಸಾರ್ವಜನಿಕ ಪತ್ರದೇಶಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ ಹಾಗೂ 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಮಾರಾಟ ನಿಷೇಧ ಎಂಬ ಅಧಿಕೃತ ನಾಮಫಲಕಗಳನ್ನು ಕಡ್ಡಾಯವಾಗಿ ಬಿತ್ತರಿಸುವದು ಸ್ಥಳದ ಮಾಲೀಕರ ಜಾವಾಬ್ದಾರಿಯಾಗಿರುತ್ತದೆ. ತಂಬಾಕು ಉತ್ಪನ್ನಗಳನ್ನು ಅಂಗಡಿಗಳಲ್ಲಿ ಪ್ರದಶರ್ಿಸಬಾರದು, ಶಾಲಾ ಕಾಲೇಜು ಆವರಣದದಿಂದ 100 ಗಜದ ಒಳಗಡೆ ತಂಭಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು, ಹಾಗೂ ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ 85%ರಷ್ಟು ಆರೋಗ್ಯ ಎಚ್ಚರಿಕೆ ಚಿತ್ರ ಮುದ್ರಿಸಿದಲ್ಲಿ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗುವುದು. 

ಪೊಲೀಸ್ ಇಲಾಖೆಯಿಂದ ಎ.ಎಸ್.ಐ, ಎಂ.ಎಂ.ಕಲಹಾಳಮಠ, ಶಿಕ್ಷಣ ಇಲಾಖೆಯಿಂದ ಈ.ಸಿ.ಓ, ವಿ.ಬಿ.ಸವಣೂರ ಆರೋಗ್ಯ ಇಲಾಖೆಯಿಂದ ಗೀತಾ ಎಂ.ಎಚ್.  ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಮಹೇಶ ಎಫ್. ಗುಡ್ಡದವರ, ಹಾಗೂ ಶಿವಕುಮಾರ, ಉಪಸ್ಥಿತಿಯಲ್ಲಿ ಕಾಯರ್ಾಚರಣೆಯಲ್ಲಿ ಉಪಸ್ಥಿತರಿದ್ದರು.