ಬಳ್ಳಾರಿ, ಜೂ.12: ವಿಮ್ಸ್ ಸೇರಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಪ್ರತಿ ತಿಂಗಳು ಟಾಗರ್ೆಟ್ ಫಿಕ್ಸ್ ಮಾಡಲಾಗುವುದು;ನಿಗದಿಪಡಿಸಿದ ಗುರಿ ಸಾಧಿಸದಿದ್ದರೇ ಕ್ರಮಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ನಗರದ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ನಡೆದ ವಿಮ್ಸ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ನಲ್ಲಿ ಬಿಜಿಯಾಗಿದ್ದ ಕಾರಣ ಈ ಕಡೆ ಸರಿಯಾಗಿ ಗಮನಹರಿಸಲು ಸಾಧ್ಯವಾಗಿರಲಿಲ್ಲ; ಇನ್ಮುಂದೆ ಆಗಾಗುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದ ಸಚಿವ ಸುಧಾಕರ್ ಅವರು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿದರ್ೇಶಕರು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ವಿಷಯದಲ್ಲಿ ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸಬೇಕು ಎಂದರು.
ವಿಮ್ಸ್ಗೆ ಸಿಬ್ಬಂದಿ ಭರ್ತಿ ;ಅಗತ್ಯಕ್ರಮ: ವಿಮ್ಸ್ ಸಿಬ್ಬಂದಿ ಭರ್ತಿ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಕೋಟರ್್ ನಲ್ಲಿ ಇರುವ ತಡೆಯಾಜ್ಞೆಯನ್ನು ತೆರವುಗೊಳಿಸಿ ಸಿಬ್ಬಂದಿ ಭತರ್ಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು. ಈ ಕುರಿತು ಗಮನಹರಿಸುವಂತೆ ವಿಮ್ಸ್ ನಿದರ್ೇಶಕರಿಗೆ ಸಚಿವ ಸುಧಾಕರ್ ಅವರು ಸೂಚಿಸಿದರು. ವಿಮ್ಸ್ ಸುಸಜ್ಜಿತವಾಗಿ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಏನೆಲ್ಲ ಕ್ರಮಗಳು ಬೇಕೋ ಅವುಗಳನ್ನು ಎರಡ್ಮೂರು ತಿಂಗಳಲ್ಲಿ ಕೈಗೊಳ್ಳಲಾಗುವುದು;ಒಟ್ಟಿನಲ್ಲಿ ಸುಸಜ್ಜಿತವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲಾಗುವುದು ಎಂದರು.
*ಎಬಿಆರ್ಕೆ ಹೆಚ್ಚಿನ ಗಮನಹರಿಸಲು ನಿದರ್ೇಶಕರಿಗೆ ಸೂಚನೆ: ಬಳ್ಳಾರಿ ವಿಮ್ಸ್ ಪ್ರತಿನಿತ್ಯ 2500ಕ್ಕೂ ಹೆಚ್ಚು ಹೊರರೋಗಿಗಳು ಹಾಗೂ 1ಸಾವಿರದಷ್ಟು ಜನ ಒಳರರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ; ಆದ್ರೇ ಎಬಿಆಕರ್ೆ ಹಣ ಪಡೆಯುವಲ್ಲಿ ತೀರಾ ಹಿಂದುಳಿದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಸುಧಾಕರ್ ಅವರು ಮಂಗಳೂರಿನ ಖಾಸಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯೊಂದರಲ್ಲಿ 1200ಹೊರರೋಗಿಗಳು ಹಾಗೂ 600 ಒಳರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ವಾಷರ್ಿಕವಾಗಿ 46ಕೋಟಿ ರೂ. ಂಃಖಏ ಹಣ ಪಡೆಯುತ್ತಿದೆ. ಆದ್ರೇ ವಿಮ್ಸ್ ಮಾತ್ರ ಬರೀ 49 ಲಕ್ಷ ರೂ. ಪಡೆದಿರುವುದು ಸರಿಯಲ್ಲ. ಕನಿಷ್ಠ ಏನಿಲ್ಲವೆಂದರೂ 100ಕೋಟಿ ರೂ. ಪಡೆಯಬೇಕು. ಆ ಹಣ ಬಂದ್ರೇ ವಿಮ್ಸ್ ನಲ್ಲಿ ಇನ್ನಷ್ಟು ಸುಧಾರಣೆ ಕೈಗೊಳ್ಳಬಹುದು ಎಂದರು.
ಪ್ರತಿವಾರ ಈ ವಿಷಯದಲ್ಲಿ ವಿಮ್ಸ್ ನಿದರ್ಶಕರು ನಿಗಾವಹಿಸಬೇಕು ಎಂದು ಸೂಚಿಸಿದರು.
ಟ್ರಾಮಾಕೇರ್ ಸೆಂಟರ್ ಉದ್ಘಾಟನೆ ಜು.15ಕ್ಕೆ: ಬಳ್ಳಾರಿಯಲ್ಲಿ 150ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಟ್ರಾಮಾಕೇರ್ ಸೆಂಟರ್ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಬೇಕು. ಮುಖ್ಯಮಂತ್ರಿಗಳನ್ನು ಕರೆದುಕೊಂಡು ಬಂದು ಜುಲೈ 15ರಂದು ಇದನ್ನು ಉದ್ಘಾಟಿಸಲಾಗುವುದು ಎಂದು ಸಚಿವ ಸುಧಾಕರ್ ಹೇಳಿದರು. ಡ್ರಗ್ಸ್ ಸರಬರಾಜು ಮಾಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರೀಕೃತ ವ್ಯವಸ್ಥೆ ಮಾಡುವುದಕ್ಕೆ ಪರಿಶೀಲಿಸಿ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ನಿದರ್ೇಶಕ ಡಾ.ಗಿರೀಶ್ ಅವರಿಗೆ ಸೂಚಿಸಿದರು.
ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವುದಕ್ಕೆ ಸಂಬಂಧಿಸಿದಂತೆ ಕಾಮಗಾರಿಗಳ ಹಂತವಾರು ಪ್ರಗತಿ ನೋಡಿಕೊಂಡು ಹಾಗೂ ಡಿಎಂಇ ಒಪ್ಪಿಗೆ ಒಡೆದು ಹಣ ಬಿಡುಗಡೆಗೆ ಕ್ರಮವಹಿಸಬೇಕು ಎಂದು ಅವರು ಸೂಚಿಸಿದರು. ವಿಮ್ಸ್ ನಲ್ಲಿ ಹಾಜರಾತಿ ಖಾಸಗಿ ಕ್ಲಿನಿಕ್ ಅನ್ನು ವೈದ್ಯರು ನಡೆಸುತ್ತಿದ್ದಾರೆ ಎಂಬ ದೂರಿಗೆ ಸಂಬಂಧಿಸಿದಂತೆ ಗರಂ ಆದ ಸಚಿವರಾದ ಸುಧಾಕರ್ ಮತ್ತು ಆನಂದಸಿಂಗ್ ಅವರು ಆ ಪಟ್ಟಿ ನೀಡಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಸೋಮಶೇಖರ್ ರೆಡ್ಡಿ, ಅಲ್ಲಂ ವೀರಭದ್ರಪ್ಪ, ವೈದ್ಯಕೀಯ ಶಿಕ್ಷಣ ಇಲಾಖೆ ನಿದರ್ೇಶಕ ಡಾ.ಗಿರೀಶ್,ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ವಿಮ್ಸ್ ನಿದರ್ೇಶಕ ಡಾ.ದೇವಾನಂದ ಮತ್ತಿತರರು ಇದ್ದರು.