ಸಮನ್ವಯತೆಯಿಂದ ಕಾರ್ಯನಿರ್ವಹಸಿ ಶಾಸಕ ಬೊಮ್ಮಾಯಿ ವೈದ್ಯರಿಗೆ ತಾಕೀತು

ಹಾವೇರಿ: ಮೇ 19: ಕೋವಿಡ್ ಲಾಕ್ಡೌನ್ 4.0 ಜಾರಿಗೊಂಡಿರುವುದರಿಂದ ಕೆಲ ನಿರ್ಬಂಧ ಹೊರತುಪಡಿಸಿ ಸಾಕಷ್ಟು ಆಥರ್ಿಕ ಚಟುವಟಿಕೆಗಳು ಪುನರ್ ಆರಂಭಗೊಂಡಿವೆ. ಈ ಹಿನ್ನೆಲೆಯಲ್ಲಿ  ಹೊಸದಾಗಿ ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗದಂತೆ ಹೆಚ್ಚಿನ ಗಮನ ಹರಿಸಬೇಕು. ಆಸ್ಪತ್ರೆಗಳ ಮೂಲ ಸೌಕರ್ಯಗಳಲ್ಲಿ ಹೆಚ್ಚಳಕ್ಕೆ ಆದ್ಯತೆ ನೀಡಬೇಕು. ವೈದ್ಯಾಧಿಕಾರಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು  ಗೃಹ ಖಾತೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ತಾಕೀತು ಮಾಡಿದರು.

ಕೋವಿಡ್ ನಿಯಂತ್ರಣ ಕ್ರಮಗಳು, ಆಸ್ಪತ್ರೆ ಹಾಗೂ ಕ್ವಾರಂಟೈನ್ ಕೇಂದ್ರಗಳ ನಿರ್ವಹಣೆ ಹಾಗೂ ವಲಸೆ ಕಾಮರ್ಿಕರ ನಿರ್ವಹಣೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ಅವರು ಒಂದು ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಮಂಜೂರಾಗಿರುವ ಕೋವಿಡ್ ಸೋಂಕು ಪರೀಕ್ಷಾ ಲ್ಯಾಬ್ನ್ನು ಜೂನ್ ಮೊದಲ ವಾರದಲ್ಲಿ ಕಾಯರ್ಾರಂಭಗೊಳಿಸುವ ನಿಟ್ಟಿನಲ್ಲಿ ಕಾಮಗಾರಿಗಳು ಹಾಗೂ ಯಂತ್ರಗಳ ಅಳವಡಿಕೆ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಕೋವಿಡ್ ಸೋಂಕು ಪರೀಕ್ಷಾ ಲ್ಯಾಬ್ ಸ್ಥಾಪನೆ ವಿಳಂಭಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ 58 ಹಾಸಿಗೆಗಳಿಗೆ ಕೇಂದ್ರೀಕೃತ ಪ್ರಸರೈಸ್ ಆ್ಯಕ್ಸಿಜನ್ ಸರಬರಾಜು ವ್ಯವಸ್ಥೆಯ ವೈದ್ಯಕೀಯ ಸೌಲಭ್ಯಗಳ ವ್ಯವಸ್ಥೆ ಪೂರ್ಣಗೊಂಡಿದೆ. ಅದೇ ರೀತಿ 20 ಹಾಸಿಗೆಯ ಆಧುನಿಕ  ವೈದ್ಯಕೀಯ ಸೌಲಭ್ಯವುಳ್ಳ ತೀವ್ರ ನಿಗಾ ಘಟಕದ ವ್ಯವಸ್ಥೆ ಸಹ ಪೂರ್ಣಗೊಂಡಿದೆ. ಇದೇ ಮಾದರಿಯಲ್ಲಿ ಎಲ್ಲ ತಾಲೂಕಾ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು  ಹೆಚ್ಚಳಮಾಡಿಕೊಳ್ಳಿ. ತಾಲೂಕಾ ಆಸ್ಪತ್ರೆಗಳಲ್ಲಿ ಕೋವಿಡ್ ಬೆಡ್ಗಳನ್ನು ಹೆಚ್ಚಳಮಾಡಿಕೊಳ್ಳಿ, ಬೇಕಾದ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಸೂಚನೆ ನೀಡಿದರು.

ಅಂಬ್ಯುಲೆನ್ಸ್ ಲಭ್ಯತೆಯ ಮಾಹಿತಿ ನೀಡಲು ತಡಬಡಾಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಗೃಹ ಸಚಿವರು ಅಂಬ್ಯುಲೆನ್ಸ್ ಎಷ್ಟು ಸಂಖ್ಯೆಯಲ್ಲಿವೆ  ಎಂಬ ಮಾಹಿತಿ ನಿಮಗೆ ಗೊತ್ತಿಲ್ಲ ಎಂದರೆ ಹೇಗೆ, ಈ ಮಾಹಿತಿ ಕೇಳಿದರೆ ಒಬ್ಬರನ್ನೊಬ್ಬರೂ ಮುಖ ನೋಡಿಕೊಳ್ಳುತ್ತೀರಿ. 

      ಬೆರಳ ತುದಿಯಲ್ಲಿ  ಈ ಮಾಹಿತಿ ನಿಮಗೆ ಇರಬೇಕು. ನಿಮ್ಮಲ್ಲಿ ಸರಿಯಾದ ಮಾಹಿತಿ ಇಲ್ಲ. ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ಅರೋಗ್ಯ ಸ್ಥಿತಿಗತಿಯ ಅಂಕಿ-ಅಂಶಗಳು ನಿಮಗೆ ಮಾಹಿತಿ ಇರಬೇಕು. ಜಿಲ್ಲೆಗೆ ಬೇಕಾದ ಅಂಬ್ಯುಲನ್ಸ್  ಹಾಗೂ ಶ್ರದ್ಧಾಂಜಲಿ(ಶವ ಸಾಗಿಸುವ ವಾಹನ) ವಾಹನಕ್ಕೆ ತಕ್ಷಣವೇ ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ತಾಕೀತು ಮಾಡಿದರು.

ಕ್ವಾರಂಟೈನ್ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಾಗಬಾರದು. ಶೌಚಾಲಯ, ಊಟ-ಉಪಹಾರದ ಕೊರತೆ, ನಿರಂತರ ವೈದ್ಯಕೀಯ ತಪಾಸಣೆ   ನಡೆಸಬೇಕು. 12ನೇ ದಿನ ಮಾದರಿ ತೆಗೆದು ನೆಗಟಿವ್ ವರದಿ ಬಂದರೆ ಅವರನ್ನು ಮನೆಗೆ ಕಳುಹಿಸಲು ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು. 

ಜಿಲ್ಲೆಯ ಕಂಟೋನ್ಮೆಂಟ್ ಏರಿಯಾಗಳಲ್ಲಿ ಈಗಾಗಲೇ ಆರೋಗ್ಯ ತಪಾಣೆ ಮಾಡಿದ ಹೊರತಾಗಿಯೂ ಮತ್ತೊಮ್ಮೆ ರ್ಯಾಂಡಂ ಆಗಿ ಆರೋಗ್ಯ ತಪಾಸಣೆ ಕೈಗೊಳ್ಳಿ. ಈ ತಪಾಸಣೆಯಲ್ಲಿ ಕಡ್ಡಾಯವಾಗಿ ವೈದ್ಯರೇ ಹಾಜರಾಗಬೇಕು ಎಂದು ತಿಳಿಸಿದರು.

ಕಂಟೋನ್ಮೆಂಟ್ ಏರಿಯಾದಲ್ಲಿ ಎರಡನೇ ಸುತ್ತಿನ ಆಹಾರ ಕಿಟ್ಗಳನ್ನು ವಿತರಿಸಿ ಹಾಗೂ ಅಜರ್ಿ ಹಾಕದೇ ಇರುವ ಬಡವರಿಗೂ ಆಹಾರದ ಕಿಟ್ ದೊರಕಬೇಕು. ಇಂತವರ ಪಟ್ಟಿಮಾಡಿ ದಾನಿಗಳಿಂದ ಆಹಾರ ಕಿಟ್ ಕೊಡಿಸುವ ವ್ಯವಸ್ಥೆ ಮಾಡುವುದಾಗಿ ಸೂಚನೆ ನೀಡಿದರು.

ಪಿಪಿ ಕಿಟ್ಗಳ ಬಗ್ಗೆ ಮಾಹಿತಿ ಪಡೆದ ಅವರು ಜಿಲ್ಲೆಗೆ ಒಂದು ತಿಂಗಳಿಗೆ ಬೇಕಾಗುವ ಪಿಪಿ ಕಿಟ್ಗಳ ಪ್ರಸ್ತಾವನೆಯನ್ನು ಸಲ್ಲಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು. 

         ಒಟ್ಟು 3509 ಪಿಪಿ ಕಿಟ್ಗನ್ನು ತರಿಸಲಾಗಿದ್ದು, 1800 ಪಿಪಿ ಕಿಟ್ಗಳು ದಾಸ್ತಾನಿವೆ. ಒಂದು ತಿಂಗಳಿಗೆ 2400 ಪಿಪಿ ಕಿಟ್ಗಳ ಅವಶ್ಯಕತೆ ಇದೆ. 14,935 ಮಾಸ್ಕ್ಗಳ ದಾಸ್ತಾನಿದ್ದು, ಈವರೆಗೆ 8619 ಮಾಸ್ಕ್ಗಳನ್ನು ಬಳಸಿದ್ದೇವೆ. 5604 ಮಾಸ್ಕ್ಗಳು  ದಾಸ್ತಾನು ಇರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಮುದಾಯ ಆರೋಗ್ಯ ತಪಾಸಣೆಯಲ್ಲಿ 34 ಸಾವಿರ ಮನೆಗಳ ಸಂಪಕರ್ಿಸಿ 16,21,082 ಜನರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಈ ಪೈಕಿ 9995 ಜನರನ್ನು ಖುದ್ದಾಗಿ ವೈದ್ಯರೇ ರಪಾಸಣೆ ನಡೆಸಿದ್ದಾರೆ. ಈ ಪೈಕಿ 731 ಮಾದರಿಗಳನ್ನು ಲ್ಯಾಬ್ ತಪಾಸಣೆಗೆ ಕಳುಹಿಸಲಾಗಿದೆ. ಎಲ್ಲವೂ ನೆಗಟಿವ್ ಬಂದಿದೆ ಎಂದು ಮಾಹಿತಿ ನೀಡಿದರು.

ಆಹಾರ ಕಿಟ್ ಮಾಹಿತಿ ನೀಡಿದ ಅಧಿಕಾರಿಗಳು ಜಿಲ್ಲೆಯಲ್ಲಿ ದಾನಿಗಳಿಂದ ಸ್ವೀಕರಿಸಿದ 2350 ಕಿಟ್ಗಳನ್ನು ಪಡಿತರ ಚೀಟಿ ಇಲ್ಲದವರಿಗೆ ನೀಡಲಾಗಿದೆ. ಸಕರ್ಾರದಿಂದ ಕಾಮರ್ಿಕ ಇಲಾಖೆ ಮೂಲಕ  ಜಿಲ್ಲೆಗೆ 25 ಸಾವಿರ ಕಿಟ್ಗಳು ಹಂಚಿಕೆಯಾಗಿವೆ. 

     ಈ ಪೈಕಿ ಐದು ಸಾವಿರ ಕಿಟ್ಗಳು ಸ್ವೀಕರಿಸಲಾಗಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 1,33,620 ಕ್ವಿಂಟಲ್ ಅಕ್ಕಿ, 3891 ಕ್ವಿಂಟಲ್ ತೊಗರಿ ಬೆಳೆ ಹಂಚಿಕೆ ಮಾಡಲಾಗಿದೆ. 361843 ಕಾಡರ್್ಗಳಿಗೆ ರೇಷನ್ ವಿತರಿಸಲಾಗಿದೆ ಎಂದು ವಿವರಿಸಿದರು.

ಇದೇ ಮೇ 31 ರವರೆ ಸೇವಾ ಸಿಂಧು ನೊಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹೊರ ರಾಜ್ಯಕ್ಕೆ ಹೋಗುವವರನ್ನು ಆದ್ಯತೆ ಮೇಲೆ ಕಳುಹಿಸಿಕೊಡಲು ಸೂಚನೆ ನೀಡಿದರು. 

ಲಾಕ್ಡೌನ್ 0.4 ವಿಸ್ತರಣೆಯಲ್ಲಿ ಹಲವು ರಿಯಾಯಿತಿ ನೀರುವುದರಿಂದ ಶಾಲಾ-ಕಾಲೇಜು, ಸಮುದಾಯ ಭವನ, ಸಿನೆಮಾ ಥೇಟರ್ ಸೇರಿದಂತೆ ಹಲವು  ಚಟುವಟಿಕೆಗಳಿಗೆ ನಿರ್ಭಂಧ ಹಾಕಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದುನ್ನ ಕಡ್ಡಾಯಗೊಳಿಸಿ. ಹೊರ ರಾಜ್ಯದಿಂದ ಬಂದವರಿಗೆ ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕು. ಬ್ಯಾಡಗಿ ಮಾರುಕಟ್ಟೆ ಚಟುವಟಿಕೆ ಆರಂಭವಾಗುವುದರಿಂದ ತಪಾಸಣೆಗೆ ಹೆಚ್ಚುವರಿ ಟೀಮ್ಗಳನ್ನು ವ್ಯವಸ್ಥೆ ಮಾಡಿ ಎಂದು ಸೂಚನೆ ನೀಡಿದರು.

ಸಂಸದರಾದ ಶಿವಕುಮಾರ, ಉದಾಸಿ, ಶಾಸಕರಾದ ಸಿ.ಎಂ.ಉದಾಸಿ,  ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ರಮೇಶ ದೇಸಾಯಿ ಒಳಗೊಂಡಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.