ಶಿಗ್ಗಾವಿ ೧೧: ತಾಲೂಕಿನ ಶಿದ್ದನಗುಡ್ಡದಲ್ಲಿ ಮಹಿಳೆಗೆ ನಡೆದ ಆಸಿಡ್ ದಾಳಿ ಕೊಲೆಗೆ ಯತ್ನ ಮಾಡಿದವರನ್ನು ತಕ್ಷಣವಾಗಿ ತನಿಖೆಯನ್ನು ಮಾಡಿ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಪಟ್ಟಣದ ವಿವಿಧ ಮುಖಂಡರುಗಳು ತಾಲೂಕಾ ದಂಡಾಧಿಕಾರಿ ಚಂದ್ರಶೇಖರ ಗಾಳಿ ಅವರಿಗೆ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿಮರ್ೂಲನಾ ಸಮಿತಿ ಮನವಿ ಸಲ್ಲಿಸಿ ಆಗ್ರಹಿಸಿದರು.
ಶಿಗ್ಗಾವಿ ಪಟ್ಟಣದ ವಿವಾಹಿತ ಮಹಿಳೆರೊಬ್ಬರನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ, ಆಸಿಡ್ ಹಾಕಿ ಕೊಲೆ ಮಾಡಲು ಯತ್ನಿಸಿದ ಘಟನೆ ಶಿಗ್ಗಾವಿ ಪಟ್ಟಣದ ಮಲ್ಲಿಕಾಜರ್ುನ ನಗರದ ನಿವಾಸಿ ಮಂಜುನಾಥ ಪರಸಪ್ಪ ಕಳಸದ ಆರೋಪಿಯನ್ನು ಮಹಿಳೆಯೊಂದಿಗೆ ಅನೈತಿಕ ಸಂಭಂಧವನ್ನು ಹೊಂದಿದ್ದು ನನ್ನ ಜೊತೆ ಮಾತನಾಡಬೇಕು ಅಂತಾ ಹೇಳಿ ವಾಹನದಲ್ಲಿ ಕರೆದುಕೊಂಡು ಆಕೆಯನ್ನು ಶಿದ್ದನಗುಡ್ಡದ ಬಳಿ ಜಗಳವಾಡಿ ಅವಳ ದುಪ್ಪಟ್ಟಿಯಿಂದ ಆಕೆಯ ಕೈಗಳನ್ನು ಕಟ್ಟಿ ವಿವಸ್ತ್ರಗೊಳಿಸಿ ಆಕೆಯ ಗುಪ್ತಾಂಗ ಹೊಟ್ಟೆಯ ಮೇಲೆ ಆಸಿಡ್ ಸುರಿದು ದಾಳಿ ಮಾಡಿದ್ದಾನೆ.
ಈ ಪ್ರಕರಣದ ತನಿಖೆಯನ್ನು ಉನ್ನತಮಟ್ಟದಲ್ಲಿ ತನಿಖೆಯನ್ನು ಮಾಡಿ ಮುಂದೆ ಇಂಥಹ ದುರ್ಘಟನೆಗಳು ಜರುಗದಂತೆ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿಮರ್ೂಲನಾ ಸಮಿತಿ ಅಧ್ಯಕ್ಷ ಬಸವರಾಜ ಹಂಚಿನಮನಿ, ಸುರೇಶ ಹಂಚಿನಮನಿ, ಶಿದ್ದಪ್ಪ ಚಿಕ್ಕಬೆಂಡಿಗೇರಿ, ಸಂತೋಷಗೌಡ ಪಾಟೀಲ, ರಮೇಶ ವನಹಳ್ಳಿ, ಶಂಕರ ಬಡಿಗೇರ, ಅಶೋಕ ಕಾಳೆ, ಬಸವರಾಜ ಜೇಕಿನಕಟ್ಟಿ, ಕೃಷ್ಣಾ ಚೌಡಾಳ, ಡಿ.ಎಸ್.ಮಾಳಗಿ,ಯಲ್ಲಪ್ಪ, ಸೇರಿದಂತೆ ಹಲವಾರು ಮುಖಂಡರುಗಳು ಈ ಸಂದರ್ಭದಲ್ಲಿ ಇದ್ದರು.