ಲೈಂಗಿಕ ದಾಳಿ ದೂರು ಹಿಂಪಡೆಯಲು ನಿರಾಕರಿಸಿದ ಬಾಧಿತೆ ಮೇಲೆ ಅಸಿಡ್ ದಾಳಿ

 ಲಕ್ನೋ, ಡಿ 8:      ಲೈಂಗಿಕ  ದಾಳಿಗೊಳಗಾಗಿದ್ದ   ಬಾಧಿತೆಯ  ಮೇಲೆ  ನಾಲ್ವರು  ವ್ಯಕ್ತಿಗಳು   ಅಸಿಡ್   ದಾಳಿ ನಡೆಸಿರುವ ಘಟನೆ  ಉತ್ತರ ಪ್ರದೇಶದ  ಮುಜಫರ್ ನಗರದಲ್ಲಿ  ನಡೆದಿದೆ.   ತಮ್ಮ ವಿರುದ್ದ  ಪೊಲೀಸರಿಗೆ  ನೀಡಿದ  ಲೈಂಗಿಕ ದಾಳಿಯ ದೂರನ್ನು  ಹಿಂದೆಪಡೆದುಕೊಳ್ಳಲು  ಮಹಿಳೆ (30)  ತಿರಸ್ಕರಿಸಿದ ಕಾರಣ  ಆಕೆಯ ಮೇಲೆ  ಅಸಿಡ್ ದಾಳಿ  ನಡೆಸಿದ್ದಾರೆ. ಶೇ. 30 ರಷ್ಟು  ಸುಟ್ಟಗಾಯಗಳಿಗೆ  ಒಳಗಾಗಿರುವ   ಬಾಧಿತ  ಮಹಿಳೆ  ಮೀರತ್     ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ  ವಿರುದ್ದ   ನೀಡಿದ್ದ    ದೂರು   ವಾಪಸ್ಸು ಪಡೆಯಲು   ಮಹಿಳೆ ನಿರಾಕರಿಸಿದ ಕಾರಣ ಕುಪಿತಗೊಂಡ ನಾಲ್ಕು ಮಂದಿ  ಆರೋಪಿಗಳು  ಬುಧವಾರ ರಾತ್ರಿ   ಆಕೆಯ  ಮನೆಗೆ  ನುಗ್ಗಿ   ಅಸಿಡ್   ಎರಚಿದ್ದಾರೆ.  ನಾಲ್ವರು ಆರೋಪಿಗಳು  ಪರಾರಿಯಾಗಿದ್ದು,   ಅವರನ್ನು ಶೀಘ್ರದಲ್ಲೇ ವಶಕ್ಕೆ ಪಡೆದುಕೊಳ್ಳಲಿದ್ದೇವೆ  ಎಂದು ಷಾಪೂರ್ ಪೊಲೀಸ್  ಠಾಣೆಯ   ಸಿ  ಐ ಗಿರಿಜಾಶಂಕರ್ ತ್ರಿಪಾಠಿ ತಿಳಿಸಿದ್ದಾರೆ.    ಪೊಲೀಸರು  ದೂರು  ನೀಡಿದ್ದಲ್ಲದೆ,    ಸಂತ್ರಸ್ಥೆ  ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು  ಇದರಿಂದ  ಕುಪಿತಗೊಂಡ   ಆರೋಪಿಗಳು  ಆಕೆಯ ಮೇಲೆ   ಆಸಿಡ್  ದಾಳಿ  ನಡೆಸಿದ್ದಾರೆ  ಪೊಲೀಸರು ತಿಳಿಸಿದ್ದಾರೆ.