ಶ್ರೀ ಪದ್ಮರಾಜ ಮಹಿಳಾ ಸ್ವತಂತ್ರ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

Achievements of students of Sri Padmaraja Women's Independent College

ಸಿಂದಗಿ 09: 2024-2025 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ಶ್ರೀ ಪದ್ಮರಾಜ ಮಹಿಳಾ ಸ್ವತಂತ್ರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದಿಂದ ಪರೀಕ್ಷೆಗೆ ಹಾಜರಾದ ಒಟ್ಟು 121 ಜನ ವಿದ್ಯಾರ್ಥಿನಿಯರಲ್ಲಿ 22 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿ, 47 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ, 18 ವಿದ್ಯಾರ್ಥಿನಿಯರು  ದ್ವಿತೀಯ ಶ್ರೇಣಿಯಲ್ಲಿ, ವಾಣಿಜ್ಯ ವಿಭಾಗದಿಂದ ಪರೀಕ್ಷೆಗೆ ಹಾಜರಾದ ಒಟ್ಟು  35 ವಿದ್ಯಾರ್ಥಿನಿಯರಲ್ಲಿ 07 ಅತ್ಯುನ್ನತ ಶ್ರೇಣಿ, 15 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ, 07 ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿಯಲ್ಲಿ, ವಿಜ್ಞಾನ ಭಾಗದಿಂದ ಪರೀಕ್ಷೆಗೆ ಹಾಜರಾದ 33 ವಿದ್ಯಾರ್ಥಿನಿಯರಲ್ಲಿ 02 ಅತ್ಯುನ್ನತ ಶ್ರೇಣಿ, 05 ಪ್ರಥಮ ಶ್ರೇಣಿ, ತೆರ್ಗಡೆಯಾಗಿದ್ದಾರೆ.  

ಕಾಲೇಜಿನ ಒಟ್ಟು ಫಲಿತಾಂಶ 67.55ಅ ರಷ್ಟಾಗಿರುತ್ತದೆ.  ಪ್ರೀತಿ ಪಾಟೀಲ ಎಂಬ ವಿದ್ಯಾರ್ಥಿನಿಯು 573/600 ಅಂಕಗಳನ್ನು ಪಡೆದು ಜಿಲ್ಲೆಗೆ 18ನೇ ಸ್ಥಾನ ಪಡೆದಿರುತ್ತಾಳೆ. ಕನ್ನಡ ವಿಷಯದಲ್ಲಿ ನಾಲ್ಕು ವಿದ್ಯಾರ್ಥಿನಿಯರು, ಭೂಗೋಳಶಾಸ್ತ್ರ ವಿಷಯದಲ್ಲಿ ಇಬ್ಬರು ವಿದ್ಯಾರ್ಥಿನಿಯರು, ಶಿಕ್ಷಣಶಾಸ್ತ್ರ ವಿಷಯದಲ್ಲಿ ಮೂರು ಜನ ವಿದ್ಯಾರ್ಥಿನಿಯರು, ಇತಿಹಾಸ ವಿಷಯದಲ್ಲಿ ಇಬ್ಬರು ವಿದ್ಯಾರ್ಥಿನಿಯರು, ಮನಶಾಃಸ್ತ್ರ ವಿಷಯದಲ್ಲಿ ಒರ್ವ ವಿದ್ಯಾರ್ಥಿನಿ, 100 ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ. ಹೀಗೆ ಕಾಲೇಜಿನ ಒಟ್ಟು ಫಲಿತಾಂಶ 67.55ಅ ರಷ್ಟಾಗಿರುತ್ತದೆ. ವಿದ್ಯಾರ್ಥಿನಿಯರ ಈ ಸಾಧನೆಗೆ ಸಂಸ್ಥೆಯ ಚೇರಮನ್ನರು ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. 

ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪ್ರೀತಿ ಪಾಟೀಲ 573/600 ಅಂಕಗಳು, ದ್ವಿತೀಯ ಸ್ಥಾನ ಪುಷ್ಪಾ 563/600 ಅಂಕಗಳು, ತಯ್ಯಾಬ ಮುಲ್ಲಾ 563/600 ಅಂಕಗಳು, ತೃತೀಯ ಸ್ಥಾನ ತಬಸುಮ ಮುಲ್ಲಾ 561/600 ಅಂಕಗಳು, ವಾಣಿಜ್ಯ ವಿಭಾಗದಲ್ಲಿ ಸಲ್ಮಾ ಬೈರಾವಡಗಿ ಪ್ರಥಮ ಸ್ಥಾನ 566/600 ಅಂಕಗಳು, ದ್ವಿತೀಯ ಸ್ಥಾನ ವೈಷ್ಣವಿ ಶಾಸ್ತ್ರಿ 554/600 ಅಂಕಗಳು, ಸವಿತಾ ಯಂಕಂಚಿ 554/600 ಅಂಕಗಳು, ತೃತೀಯ ಸ್ಥಾನ ಸಿದ್ದಮ್ಮ ತಳವಾರ 545/600 ಅಂಕಗಳು, ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಕಾವೇರಿ ಬಮ್ಮನಹಳ್ಳಿ 520/600 ಅಂಕಗಳು, ದ್ವಿತೀಯ ಸ್ಥಾನ ಲಕ್ಕವ್ವ ಬಬಲಾದ 513/600 ಅಂಕಗಳು, ತೃತೀಯ ಸ್ಥಾನ ಚೈತ್ರಾ ಪಾಣಿಗಾಂವ 451/600 ಅಂಕಗಳು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.