ಬೆಳಗಾವಿ 28: ನಗರದ ಪ್ರತಿಷ್ಠಿತ ಕೆಎಲ್‌ಎಸ್ ಜಿಆಯ್‌ಟಿ ಸಂಸ್ಥೆ ಏರಿ್ಡಸಿದ ರಾಷ್ಟ್ರಮಟ್ಟದ ಸಾಂಸ್ಕೃತಿಕ ಉತ್ಸವ ಓರಾ: 2025ದಲ್ಲಿ ಕೆಎಲ್‌ಎಸ್ ಸಂಸ್ಥೆಯ ನಿರ್ವಹಣಾ ಶಿಕ್ಷಣ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಅಸಾಧಾರಣ ಪ್ರದರ್ಶಿಸುವ ಮೂಲಕ ಮ್ಯಾಡ್ ಆ್ಯಡ್ಸ್ ಸ್ಪರ್ಧೆಯಲ್ಲಿ ಪ್ರಥಮ, ರಾ್ಯಂಪ್ ವಾಕ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕೆಎಲ್‌ಎಸ್ ಆಯ್‌ಎಮ್‌ಇಆರ್‌ನ ಆಡಳಿತ ಮಂಡಳಿ ಅಧ್ಯಕ್ಷರಾದ ಆರ್.ಎಸ್. ಮುತಾಲಿಕ, ಕೆಎಲ್‌ಎಸ್ ಆಯ್‌ಎಮ್‌ಇಆರ್‌ನ ನಿರ್ದೇಶಕ ಡಾ. ಆರೀಫ್ ಶೇಖ ಅವರುಗಳು ಮೆಚ್ಚುಗೆ ವ್ಯಕ್ತಪಡಿಸಿ, ಈ ಸಾಧನೆಯು ಶೈಕ್ಷಣಿಕ ಶ್ರೇಷ್ಠತೆ ಮತ್ತು ಸಮಗ್ರ ಅಭಿವೃದ್ಧಿಗೆ ನಮ್ಮ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ವಿಜೇತ ತಂಡ ಮತ್ತು ಎಲ್ಲಾ ಭಾಗವಹಿಸುವವರಿಗೆ ಅವರ ಸಮರೆ್ಣ, ಸೃಜನಶೀಲತೆ ಮತ್ತು ಕಠಿಣ ಪರಿಶ್ರಮಕ್ಕಾಗಿ ನಾವು ನಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.
ವಿದ್ಯಾರ್ಥಿಗಳ ತಂಡಕ್ಕೆ ಸಹಾಯಕ ಪ್ರಾಧ್ಯಾಪಕಿ ಗೌತಮಿ ಮಗ್ನೂರ ಮಾರ್ಗದರ್ಶನ ನೀಡಿದ್ದರು.