ರಾಯಬಾಗ 09: ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ಆದರ್ಶ ಸ್ವತಂತ್ರ ಕಲಾ ಮತ್ತು ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಪರೀಕ್ಷೆ-1 ಯಲ್ಲಿ ವಾಣಿಜ್ಯ ವಿಭಾಗದ ಅಕ್ಷತಾ ಮುಚ್ಚಂಡಿ 546 (ಶೇ.91) ಅಂಕ ಪಡೆದು ಪ್ರಥಮ, ಸಾಕ್ಷಿ ಚೌಗುಲೆ 453 (ಶೇ.75.50) ಅಂಕ ಪಡೆದು ದ್ವಿತೀಯ ಹಾಗೂ ಸುಪ್ರೀಯಾ ಪಾಟೀಲ 441(ಶೇ.73.50) ಅಂಕ ಪಡೆದು ತೃತೀಯ, ಕಲಾ ವಿಭಾಗದ ರೇಖಾ ಸಪ್ತಸಾಗರೆ 443(ಶೇ.73.33) ಅಂಕ ಪಡೆದು ಪ್ರಥಮ, ತಹಸಿನ್ ಜಮಾದಾರ 416 (ಶೇ.69.33) ದ್ವಿತೀಯ, ದ್ರವ್ಯಾ ಉಪಾಧ್ಯೆ 413 (ಶೇ.68.83) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಈರಗೌಡ ಪಾಟೀಲ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯರು ಮತ್ತು ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.