ಧಾರವಾಡ 9: "ಯಾವುದೇ ಒಂದು ಬೀಜ ಮಾಯವಾಯಿತೆಂದರೆ ಅದು ಮತ್ತೊಂದು ಸೃಷ್ಠಿಗೆ ಕಾರಣವಾಗಿರುತ್ತದೆ. ಒಂದು ಬೀಜದಿಂದ ಹೇಗೆ ಸಾವಿರ ಬೀಜಗಳ ಉತ್ಪತ್ತಿಯಾಗುತ್ತದೆಯೋ ಅದೇ ರೀತಿ ಒಬ್ಬ ಗುರು ಮಾಯವಾಗಿದ್ದಾರೆ ಎಂದರೆ ಆ ಪರಂಪರೆಯ ಮುಂದುವರಿಕೆಯಾಗಿ ಸಾವಿರ ಶಿಷ್ಯಂದಿರರನ್ನು ತಯಾರಿಮಾಡಿದ್ದಾರೆ. ಅವರು ಬಿತ್ತಿದ ಬೀಜಗಳಿಂದು ಬೆಳೆದು ಹೆಮ್ಮರವಾಗಿವೆ. ಶಿಷ್ಯ ಬೆಳೆದು ಒಳ್ಳೆಯ ಹೆಸರು ಪಡೆದಾಗ ಮಾತ್ರ ತಮ್ಮ ಗುರುವಿನ ಋಣ ತೀರಿಸಿದ ಹಾಗೆ ಆಗುತ್ತದೆ ಎಂದು ಕರ್ನಾ ಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ವೀರಣ್ಣ ಪತ್ತಾರ ಅಭಿಪ್ರಾಯ ಪಟ್ಟರು.
ಧಾರವಾಡದ ಕುಮಾರೇಶ್ವರ ನಗರದ ಈಶ್ವರ ದೇವಸ್ಥಾನದಲ್ಲಿ ಸನ್ನಿಧಿ ಮಹಿಳಾ ಮಂಡಳವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ದಿ. 5 ರಂದು ಸಂಜೆ ಏರ್ಪಡಿಸಿದ್ದ "ಹೊಸ ಚಿಗುರು ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತ ಹಿಂದೆ ಒಬ್ಬ ಗುರು, ಮುಂದೆ ಗುರಿ ಇರಬೇಕು. ಆಗ ಮಾತ್ರ ತಮ್ಮ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ ಎಂದು ವೀರಣ್ಣ ಪತ್ತಾರ ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಕುಮಾರೇಶ್ವರ ನಗರ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಪ್ರೊ.ಎಂ.ಈಶ್ವರಯ್ಯ, ಬೆಂಗಳೂರು ಕನರ್ಾಟಕ ರಾಜ್ಯ ಕುರುಬರ ಸಂಘದ ನಿರ್ದೇ ಶಕರುಗಳಾದ ರಾಜೇಶ್ವರ ಸಾಲಗಟ್ಟಿ ಮತ್ತು ಬಸವರಾಜ ಮಲಕಾರಿ, ಪ್ರಕಾಶ ಬಾಳಿಕಾಯಿ, ಮಲ್ಲಿಕಾರ್ಜು ನ ಸೊಲಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸನ್ನಿಧಿ ಮಹಿಳಾ ಮಂಡಳದ ಕಾರ್ಯದರ್ಶಿ ನಂದಾ ಗುಳೇದಗುಡ್ಡ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಕರ್ನಾ ಟಕ ರಾಜ್ಯ ಕುರುಬರ ಸಂಘದ ಚುನಾವಣೆಯಲ್ಲಿ ನಿರ್ದೇ ಶಕರುಗಳಾಗಿ ಆಯ್ಕೆಯಾಗಿರುವ ರಾಜೇಶ್ವರ ಸಾಲಗಟ್ಟಿ ಮತ್ತು ಬಸವರಾಜ ಮಲಕಾರಿ ಅವರನ್ನು ಹಾಗೂ ಕರ್ನಾ ಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾಗಿರುವ ವೀರಣ್ಣ ಪತ್ತಾರ ಅವರನ್ನು ಮಹಿಳಾ ಮಂಡಳದಿಂದ ಸನ್ಮಾನಿಸಲಾಯಿತು.
ನಂತರ ಜರುಗಿದ ಸಂಗೀತ ಕಾರ್ಯಕ್ರಮದಲ್ಲಿ ವಿದೂಷಿ ಭಾರ್ಗವಿ ಕುಲಕರ್ಣಿ , ಡಾ.ಪರಶುರಾಮ ಶರಣಪ್ಪ ಹಾಗೂ ಸೋಮಲಿಂಗ ಜಾಲಿಹಾಳ ಸುಗಮ ಸಂಗೀತವನ್ನು ಪ್ರಸ್ತುತ ಪಡಿಸಿದರು. ಅಮಿತ ಕಳಸಾಪೂರ ತಾಳವಾದ್ಯದಲ್ಲಿ, ತಬಲಾದಲ್ಲಿ ಅಕ್ಷಯ ಜೋಶಿ ಸಮರ್ಥ ಸಾಥ್ ನಿರ್ವಹಿಸಿದರು. ಸಹಕಲಾವಿದರಾಗಿ ಶ್ರೇಯಾ ಮತ್ತು ಶೃದ್ಧಾ ಕುಲಕರ್ಣಿ ಭಾಗವಹಿಸಿದ್ದರು.
ಆರಂಭದಲ್ಲಿ ಪರ್ವ ಅಂಗಡಿ ಪ್ರಾರ್ಥಿ ಸಿದರು. ಶುಭಾ ಅಂಗಡಿ ಸ್ವಾಗತಿಸಿದರು, ಪ್ರಕಾಶ ಬಾಳಿಕಾಯಿ ನಿರೂಪಿಸಿದರು, ರಾಜೇಶ್ವರಿ ಕಬ್ಬೂರ ವಂದಿಸಿದರು.
ಸಮಾರಂಭದಲ್ಲಿ ಬಿ.ಎ.ಹಿರೇಮಠ, ಮುಕುಂದ ಹೆಬ್ಳೀಕರ, ಪಾಮೋಲಿ, ಸೋಮಶೇಖರ ಮರಡಿಮಠ, ಪೂರ್ವ ಮುಗದ, ಅರುಂಧತಿ ಹೋತನಹಳ್ಳಿ, ಭಾಗೀರತಿ ಪಾಮೋಲಿ, ಗೀತಾ ಮುಗದ, ಪದ್ಮಾವತಿ ಕೊಣ್ಣೂರ, ಅನ್ನಪೂರ್ಣ ಹಿರೇಮಠ, ರಮಾ ಗುಡಿ, ಪೂರ್ವಾ , ಸುಪ್ರಿತ ಬಾಳಿಕಾಯಿ ಉಪಸ್ಥಿತರಿದ್ದರು.