ಆದರ್ಶ ಸೆಂಟ್ರಲ್ ಸ್ಕೂಲ್ ನ ಸಾಧನೆ

ಲೋಕದರ್ಶನವರದಿ

ಬ್ಯಾಡಗಿ೧೭: ಹರಿಯಾಣದ ಪಾಣಿಪತ್ ನಲ್ಲಿ (ಪತ್ರಿ) ನಡೆಯುತ್ತಿರುವ ಸಿಬಿಎಸ್ಈ ಶಾಲೆಗಳ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಉತ್ತರ ಪ್ರದೇಶ ತಂಡವನ್ನು 5 ಪಾಯಿಂಟ್ಗಳಿಂದ ಸೋಲಿಸುವ ಮೂಲಕ ಕರ್ನಾಟಕ (ಆದರ್ಶ ಸೆಂಟ್ರಲ್ ಸ್ಕೂಲ್ ಬ್ಯಾಡಗಿ) ತಂಡವು ಶುಭಾರಂಭ ಮಾಡಿದೆ.

 ಪಂದ್ಯದ ದ್ವಿತೀಯಾರ್ಧದಲ್ಲಿ ರೈಡರ್ ಆಸಿಫೀಯಾ ಸೂಪರ್ ರೈಡ್ನಲ್ಲಿ ಎದುರಾಳಿ ತಂಡದ 5 ಅಟಗಾತ್ರಿಯರನ್ನು ಹೊರಗೆ ಕಳಿಸಿದರು ಈ ಸಂದರ್ಭದಲ್ಲಿ ಪಡೆದ ಮುನ್ನಡೆಯೊಂದಿಗೆ ಕರ್ನಾಟಕ 'ಸಿ' ಗುಂಪಿನ ಲೀಗ್ ಆರನೇ ಪಂದ್ಯದಲ್ಲಿ (ಕರ್ನಾಟಕದ ಮೊದಲ ಪಂದ್ಯ) ಉತ್ತರ ಪ್ರದೇಶವನ್ನು ಮಣಿಸಿತು. 

      ಪಂದ್ಯದ ಮೊದಲಾರ್ಧದಲ್ಲಿ ಕರ್ನಾಟಕ ನೀರಸ ಪ್ರದರ್ಶನ ತೋರಿದ್ದರಿಂದ ಎದುರಾಳಿ ಯುಪಿ ಹಾಫ್ ಟೈಮ್ನಲ್ಲಿ 4 (12-16) ಪಾಯಿಂಟ್ಗಳ (2 ಲೋನಾ ಪಾಯಿಂಟ್) ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ಕೋಚ್ ಮಂಜುಳ ಹಾಗೂ ಸಂದೀಪ್ ನಡೆಸಿದ ತಂತ್ರಗಾರಿಕೆ ಫಲಿಸಿತು, ಮಿಂಚಿನ ರೈಡಿಂಗ್ ನಡೆಸಿದ ಆಸಿಫೀಯಾ ಸೂಪರ್ ರೈಡ್ನಲ್ಲಿ 5 ಪಾಯಿಂಟ್ ಪಡೆದು ಮುನ್ನಡೆಗೆ ಸಹಕರಿಸಿದಳು, ಈ ಸಂದರ್ಭದಲ್ಲಿ ಯುಪಿ ತಂಡದ 2 ಲೋನಾ ಪಾಯಿಂಟ್ ಕೂಡ ಕರ್ನಾಟಕಕಕ್ಕೆ ದಕ್ಕಿತು. ಅಂತಿಮವಾಗಿ 5 ಪಾಯಿಂಟ್ (27-22) ಮುನ್ನಡೆಯೊಂದಿಗೆ ಕರ್ನಾಟಕ ಗೆಲುವಿನ ನಗೆ ಬೀರಿತು, ರೈಡಿಂಗ್ಲ್ಲಿ ಪ್ರತೀಕ್ಷಾ ಹಾಗೂ ಭೂಮಿಕಾ ತಲಾ 6 ಅಂಕಗಳನ್ನು ಪಡೆದುಕೊಂಡರೇ ರಚನಾ, ಸಹನಾ ಹಾಗೂ ಪವಿತ್ರ ಉತ್ತಮ ಟ್ಯಾಕಲ್ಗಳನ್ನು ಮಾಡುವ ಮೂಲಕ ತಂಡದ ಗೆಲುವಿಗೆ ಸಾಥ್ ನೀಡಿದರು.

   ಲೀಗ್ನಿಂದ ಯುಪಿ ಔಟ್: 'ಸಿ' ಗುಂಪಿನಲ್ಲಿ ಕನರ್ಾಟಕ ಸೇರಿದಂತೆ ಮಹಾರಾಷ್ಟ್ರ ಕೇರಳ ಹಾಗೂ ಅತಿಥೇಯ ಹರಿಯಾಣ ತಂಡಗಳಿದ್ದು, ಮಹಾರಾಷ್ಟ್ರ ಮತ್ತು ಕೇರಳ ತಂಡಗಳು ಉತ್ತರಪ್ರದೇಶದ ಮೇಲೆ ಗೆಲುವು ಸಾಧಿಸುವ ಮೂಲಕ ತಮ್ಮ ಮೊದಲ ಜಯ ದಾಖಲಿಸಿಕೊಂಡಿವೆ, ಇದೇ ಗುಂಪಿನ ಕೇರಳ ಮತ್ತು ಮಹಾರಾಷ್ಟ್ರ ನಡುವೆ ಪಂದ್ಯ ರೋಚಕ ಘಟ್ಟ ತಲುಪಿ ಟೈ ಆಯಿತು, ಆಡಿದ ಎಲ್ಲಾ ಪಂದ್ಯಗಳನ್ನು ಸೋತಿರುವ ಉತ್ತರಪ್ರದೇಶ ಲೀಗ್ ಹಂತದಲ್ಲಿ ಒಂದು ಪಾಯಿಂಟ್ ಪಡೆದುಕೊಳ್ಳಲು ಸಾಧ್ಯವಾಗದೇ ಟೂನರ್ಿಯಿಂದ ನಿರ್ಗಮಿಸುವುದು ಬಹುತೇಕ ಖಚಿತವೆನಿಸಿದೆ.